ಪಾಕಿಸ್ತಾನ ಬುಡಕ್ಕೆ ಬೆಂಕಿ ಇಟ್ಟ ಗಡಿಭಾಗ, ಮುಂದೆ ಇದೆ ಮಾರಿಹಬ್ಬ ಅಂತಿದ್ದಾರೆ ತಜ್ಞರು | Pakistan Military

ಪಾಕಿಸ್ತಾನ ತಾನು ಮಾಡಿರುವ ತಪ್ಪಿಗೆ ಏನು ಎದುರಿಸಬೇಕೋ ಅದನ್ನೇ ಈಗ ಎದುರಿಸುತ್ತಿದ್ದು, ಸಾಲು ಸಾಲು ಸಮಸ್ಯೆಗಳು ಇದೀಗ ಪಾಕಿಸ್ತಾನಕ್ಕೆ ಎದುರಾಗುತ್ತಿದೆ. ಅದರಲ್ಲೂ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆಗೆ ಈಗ ದೊಡ್ಡ ಸವಾಲು ಎದುರಾಗಿದೆ. ಗಡಿ ಭಾಗದಲ್ಲಿ ಪಾಕಿಸ್ತಾನಕ್ಕೆ ಉಗ್ರರು ದೊಡ್ಡ ಸಮಸ್ಯೆ ಉಂಟುಮಾಡುತ್ತಾ ಇದ್ದಾರೆ. ಈ ಕಾರಣಕ್ಕೆ ಕಾರ್ಯಾಚರಣೆ ನೆಪದಲ್ಲಿ ಅಫ್ಘಾನಿಸ್ತಾನ ನೆಲದ ಮೇಲೆ ಪಾಕ್ ಸೇನೆ ಮುಗಿಬಿದ್ದು ತಪ್ಪು ಮಾಡಿದೆ ಎಂಬ ಆರೋಪ ಕೇಳಿಬರುತ್ತಿರುವ ಸಮಯದಲ್ಲೇ, ತಲ್ಲಣ ಸೃಷ್ಟಿ ಮಾಡುವ ವಿಚಾರ ಈಗ ಹೊರಬಿದ್ದಿದೆ.

ಪಾಪಿ ಪಾಕಿಸ್ತಾನ ಈಗ ಭಾರತದ ಜೊತೆಗೆ ಎಷ್ಟು ದ್ವೇಷ ಸಾಧಿಸುತ್ತಿದೆಯೋ ಅಷ್ಟೇ ದ್ವೇಷವನ್ನು ನೆರೆಯ ಅಫ್ಘಾನಿಸ್ತಾನ ವಿರುದ್ಧ ಕೂಡ ಸಾಧಿಸುತ್ತಿದೆ. ಅದರಲ್ಲೂ ಈ ಇಬ್ಬರೂ ಬಡಿದಾಡುತ್ತಾ ಬಂದಿದ್ದು, ಈ ಭಾಗದಲ್ಲಿ ಪದೇ ಪದೇ ಯುದ್ಧಗಳು ನಡೆಯುತ್ತಿವೆ. ಇನ್ನು ತಾಲಿಬಾನ್ ಆಡಳಿತ ಬಂದ ನಂತರ ಪಾಕ್ ಸುಖಾಸುಮ್ಮನೆ ಕಿರಿಕ್ ಮಾಡುವುದು ಹೆಚ್ಚಾಗಿದೆ. ಇದೀಗ ಉಗ್ರರ ನೆಪ ಇಟ್ಟುಕೊಂಡು ಅಫ್ಘಾನಿಸ್ತಾನ ಒಳಗೆ ನುಗ್ಗಿ ವಾಯುದಾಳಿ ನಡೆಸಿರುವುದು, ತಾಲಿಬಾನ್ ಸರ್ಕಾರವನ್ನು ಕೆಣಕಿದೆ ಹಾಗೂ ಹೀಗೆಲ್ಲಾ ಮಾಡಿದರೆ ನಮ್ಮ ಕಡೆಯಿಂದಲೂ ದೊಡ್ಡ ದಾಳಿ ಗ್ಯಾರಂಟಿ ಎಂದಿದೆ ಅಫ್ಘಾನ್. ಒಂದಾದ ನಂತರ ಒಂದು ಹೊಸ ಹೊಸ ತಿಕ್ಕಾಟಗಳು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಯಲ್ಲಿ ಅಶಾಂತ ವಾತಾವರಣ ಸೃಷ್ಟಿ ಮಾಡಿವೆ.

Pakistan Military

ತಿನ್ನಲು ಅನ್ನ ಇಲ್ಲದಿದ್ದರೂ ಪಾಕ್ ಕಿರಿಕ್!

ಪ್ರಜೆಗಳಿಗೆ ತಿನ್ನಲು ಸರಿಯಾಗಿ ಅನ್ನ ಇಲ್ಲದಿದ್ದರೂ, ಪಾಕಿಸ್ತಾನದ ನಾಯಕರಿಗೆ ಮಾತ್ರ ಸಾವಿರ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಶಸ್ತ್ರಾಸ್ತ್ರ ಖರೀದಿ ಮಾಡುವುದು ಬೇಕಾಗಿದೆ. ಇದೇ ಅಸ್ತ್ರಗಳನ್ನು ಇಟ್ಟುಕೊಂಡು ಉಗ್ರರನ್ನು ಬೆಳೆಸಿಕೊಂಡು ಬದುಕುತ್ತಿರುವ ಪಾಕಿಸ್ತಾನ ಅಕ್ಕಪಕ್ಕದ ದೇಶಗಳಿಗೆ ಕೂಡ ಸಮಸ್ಯೆ ಮಾಡುತ್ತಿದೆ. ಭಾರತಕ್ಕೆ ಕೂಡ ತೊಂದರೆ ಕೊಡುತ್ತಿರುವ ರೀತಿ ನೆರೆಯ ಅಫ್ಘಾನಿಸ್ತಾನಕ್ಕೆ ಕೂಡ ಸಮಸ್ಯೆ ಮಾಡುತ್ತಿದೆ ಪಾಕಿಸ್ತಾನ. ಈ ಬಗ್ಗೆ ಎಚ್ಚರಿಕೆ ನೀಡಿರುವ ತಾಲಿಬಾನ್ ಸರ್ಕಾರ, ಗಡಿ ಭಾಗಕ್ಕೆ ತಾಲಿಬಾನ್ ಪಡೆಗಳನ್ನು ನುಗ್ಗಿಸುವ ವಾರ್ನಿಂಗ್ ಕೊಟ್ಟಿದೆ. ಈ ಮೂಲಕ ಅಫ್ಘಾನಿಸ್ತಾನ & ಪಾಕಿಸ್ತಾನ ನಡುವೆ ಯುದ್ಧದ ಭೀತಿ ಆವರಿಸಿದೆ. ಪಾಕಿಸ್ತಾನದ ಗಡಿ ಭಾಗದಲ್ಲಿ ಅಶಾಂತ ವಾತಾವರಣ ಮೂಡಿ, ಕಿರಿಕ್ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+