ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮರ್ಯಾದಿ ತೆಗೆದ ಜರ್ಮನಿ... Pakistan Military
ಪಾಕಿಸ್ತಾನ ಮಾನ & ಮರ್ಯಾದಿ ಬಿಟ್ಟು ಪದೇ ಪದೇ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗಿ ಜೋಕರ್ ರೀತಿ ಆಗಿ ಹೋಗಿದೆ. ಇದಕ್ಕೆ ತಕ್ಕಂತೆ ಪಾಕ್‌ನ ರಾಜಕೀಯ ನಾಯಕರು ಹಾಗೂ ಸೇನೆಯ ಮುಖ್ಯಸ್ಥರು ಕೂಡ ಮತ್ತೆ ಮತ್ತೆ ಜೋಕರ್ ರೀತಿಯೇ ಆಡುತ್ತಾರೆ. ಹೀಗಿದ್ದಾಗ ಪಾಪಿ ಪಾಕಿಸ್ತಾನಕ್ಕೆ, ಕೈಯಲ್ಲಿ ಕಾಸು ಇಲ್ಲದೇ ಇದ್ದರೂ ಭಿಕ್ಷೆ ಬೇಡಿ ಉಗ್ರರನ್ನು ಸಾಕುವ ಹಠ. ಇಷ್ಟೆಲ್ಲದರ ನಡುವೆ ಈಗ ಜಗತ್ತಿನ ಶ್ರೀಮಂತ ದೇಶಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನದ ನಾಯಕರನ್ನು ತುಂಬಾ ಹೀನಾಯವಾಗಿ ಕಾಣುವ ಘಟನೆಗಳು ಪದೇ ಪದೇ ವರದಿ ಆಗುತ್ತಿವೆ. ಇತಹ ಸಮಯದಲ್ಲೇ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮರ್ಯಾದಿ ತೆಗೆದಿದೆ ಜರ್ಮನಿ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭಾರತದ ಬಗ್ಗೆ ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ಮನುಷ್ಯ. ತಲೆಯಲ್ಲಿ ನಾಲ್ಕು ಅಕ್ಷರ ಇಲ್ಲದೇ ಇದ್ದರೂ, ಪಾಕಿಸ್ತಾನ ಎಂಬ ದೇಶವನ್ನು ಹಾಳು ಬಾವಿಗೆ ತಳ್ಳಲು ಅಸಿಮ್ ಮುನೀರ್ ಹಗಲು & ರಾತ್ರಿ ಶ್ರಮಪಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಹೀಗಿದ್ದಾಗ ತಾನೊಬ್ಬ ಸೇನಾ ಮುಖ್ಯಸ್ಥ ಎಂಬುದನ್ನು ಕೂಡ ಮರೆತು, ಶಿಸ್ತು ಇಲ್ಲದವರ ರೀತಿ ವರ್ತಿಸಿದ್ದಕ್ಕೆ ಯುರೋಪ್ ನೆಲದಲ್ಲಿ ಸರಿಯಾಗೇ ಶಾಸ್ತಿ ಆಗಿದೆ. ಅಸಿಮ್ ಮುನೀರ್ ಜೊತೆಗೆ ಪಾಕಿಸ್ತಾನದ ಮರ್ಯಾದಿ ಕೂಡ ಮತ್ತೊಮ್ಮೆ ಬೀದಿಪಾಲಾಗಿ ಹೋಗಿದೆ.

ಐಡಿ ಕಾರ್ಡ್ ವಿಚಾರಕ್ಕೆ ಮುಖಭಂಗ
ಜರ್ಮನಿಯ ಮ್ಯೂನಿಚ್ ನಗರದಲ್ಲಿ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಭದ್ರತಾ ಅಧಿಕಾರಿ ಒಬ್ಬರು ಸರಿಯಾಗಿ ಶಾಸ್ತಿ ಮಾಡಿದ್ದಾರೆ. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಜರ್ಮನಿಗೆ ಬಂದಿಳಿದ ಸಮಯದಲ್ಲಿ ಅಸಿಮ್ ಮುನೀರ್‌ಗೆ ಐಡಿ ಕಾರ್ಡ್ ತೋರಿಸುವಂತೆ ತಡೆದು ನಿಲ್ಲಿಸಿ ಪ್ರಶ್ನೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಮ್ಯೂನಿಚ್ ಭದ್ರತಾ ಸಮ್ಮೇಳನ ಭದ್ರತಾ ಅಧಿಕಾರಿ ಒಬ್ಬರು, ಅಸಿಮ್ ಮುನೀರ್‌ಗೆ ಖಡಕ್ ಆಗಿ ಆದೇಶ ನೀಡಿದ್ದು ಐಡಿ ಕಾರ್ಡ್ ಸ್ಪಷ್ಟವಾಗಿ ಕಾಣುವಂತೆ ಮುಂಭಾಗದಲ್ಲಿ ಇಟ್ಟುಕೊಳ್ಳಿ ಎಂದಿದ್ದಾರೆ. ಮತ್ತೊಂದು ಕಡೆ ಅಸಿಮ್ ಮುನೀರ್ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು. ಇಷ್ಟೆಲ್ಲದರ ನಡುವೆ ಒಂದು ಐಡಿ ಕಾರ್ಡ್ ವಿಚಾರಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುಖಭಂಗ ಅನುಭಸಿರುವುದು ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications