ಗುಪ್ತಚರ ಸಂಸ್ಥೆಗೆ ಬೆದರಿದ ಐನಾತಿ ಪಾಕ್: ಉಗ್ರನಿಗೆ ಭಾರೀ ಭದ್ರತೆ

ಲಾಹೋರ್, ಅ 29: ವಿದೇಶಿ ಗುಪ್ತಚರ ಸಂಸ್ಥೆಯಿಂದ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಜೀವಕ್ಕೆ ಬೆದರಿಕೆಯಿದೆ ಎನ್ನುವ ಎಚ್ಚರಿಕೆಯ ಹಿನ್ನಲೆಯಲ್ಲಿ ಉಗ್ರನಿಗೆ ಪಾಕಿಸ್ತಾನ ಸರಕಾರ ಭಾರೀ ಭದ್ರತೆ ಒದಗಿಸಿದೆ.

ಉಗ್ರರಿಗೆ ನಮ್ಮ ನೆಲದಲ್ಲಿ ಬೆಂಬಲ ನೀಡುತ್ತಿಲ್ಲ ಎಂದು ಹೋದಲೆಲ್ಲಾ ಢಂಗುರ ಸಾರುತ್ತಿರುವ ಪಾಕಿಸ್ತಾನದ ನೈಜಮುಖ ಇದರಿಂದ ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ಕಳೆದ ಭಾನುವಾರ (ಅ 25) ಸ್ಥಳೀಯ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲೂ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್, ಉಗ್ರರಿಗೆ ಬೆಂಬಲಿಸುತ್ತಿರುವುದನ್ನು ಒಪ್ಪಿಕೊಂಡಿದ್ದರು. (ಲಾಡೆನ್ ನಮ್ಮ ಹೀರೋ ಎಂದ ಮುಷರಫ್)

ವಿದೇಶಿ ಗುಪ್ತಚರ ಸಂಸ್ಥೆ ಪಾಕ್ ಪ್ರಧಾನಿ ನವಾಜ್ ಷರೀಫ್, ಉಗ್ರ ಸಯೀದ್ ಮತ್ತು ಕಟ್ಟಾ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿ ದಾಳಿ ಮಾಡುವ ಸಾಧ್ಯತೆಯಿದೆ ಎಂದು ಪಾಕ್ ಗುಪ್ತಚರ ಇಲಾಖೆ ಸರಕಾರವನ್ನು ಎಚ್ಚರಿಸಿತ್ತು.

ಈ ಹಿನ್ನಲೆಯಲ್ಲಿ ಪ್ರಧಾನಿ ನಿವಾಸ, ಜೌಹಾರ್ ನಗರದಲ್ಲಿರುವ ಸಯೀದ್ ನಿವಾಸ ಮತ್ತು ಲಾಹೋರ್ ನಲ್ಲಿರುವ ಜಮಾತ-ಉಲ್- ದವಾದ ಕಚೇರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಹಫೀಜ್ ಸಯೀದ್ ಪಾಕಿಸ್ತಾನದ ಬಾಳ್ ಠಾಕ್ರೆ, ಮುಂದೆ ಓದಿ..

ಗೊಂದಲ ಸೃಷ್ಠಿಸುವ ಸಾಧ್ಯತೆ

ಗೊಂದಲ ಸೃಷ್ಠಿಸುವ ಸಾಧ್ಯತೆ

ವಿದೇಶಿ ಗುಪ್ತಚರ ಸಂಸ್ಥೆಗಳು ಪ್ರಮುಖ ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರ ಮೇಲೆ ದಾಳಿ ನಡೆಸುವುದರ ಜೊತೆಗೆ, ದೇಶದಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಗೃಹ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಪ್ರಧಾನಿ, ಸಯೀದ್ ಸೇರಿದಂತೆ ಪ್ರಮುಖ ಮುಖಂಡರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಅಥರ್ ಇಸ್ಮಾಯಿಲ್ ಪಿಟಿಐಗೆ ಹೇಳಿದ್ದಾರೆ.

ಜೆಯುಡಿ ಉಗ್ರ ಸಂಘಟನೆ

ಜೆಯುಡಿ ಉಗ್ರ ಸಂಘಟನೆ

ಜೆಯುಡಿಯನ್ನು ಅಮೆರಿಕಾ ಉಗ್ರ ಸಂಘಟನೆಯ ಪಟ್ಟಿಯಲ್ಲಿ ಸೇರಿಸಿದೆ. ಅಲ್ಲದೇ ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ತಲೆಗೆ ಹತ್ತುಲಕ್ಷ ದಶಲಕ್ಷ ಡಾಲರ್ ಇನಾಮು ಘೋಷಿಸಿದೆ.

ಪಾಕ್ ನಲ್ಲಿ ಸಯೀದ್ ಫ್ರೀಬರ್ಡ್

ಪಾಕ್ ನಲ್ಲಿ ಸಯೀದ್ ಫ್ರೀಬರ್ಡ್

ಜೆಯುಡಿ ಅಮೆರಿಕಾದ ಕಪ್ಪುಪಟ್ಟಿಯಲ್ಲಿದ್ದರೂ, ಸಯೀದ್ ಭಾರತದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದರೂ, ಪಾಕಿಸ್ತಾನದಲ್ಲಿ ಹಫೀಜ್ ರಾಜಾರೋಷವಾಗಿ ತಿರುಗಾಡಿಕೊಂಡು, ಭಾರತದ ವಿರುದ್ದ ವಿಷಕಕ್ಕುವ ಭಾಷಣವನ್ನು ಮಾಡುತ್ತಲೇ ಇದ್ದಾನೆ. ಆದರೂ, ಪಾಕ್ ಉಗ್ರನನ್ನು ಬಂಧಿಸುವ ಆಲೋಚನೆಯಲ್ಲೇ ಇಲ್ಲ.

ಮುಷರಫ್ ಶಿವಸೇನೆ ದಿವಂಗತ ಮುಖ್ಯಸ್ಥರ ಬಗ್ಗೆ ಹೇಳಿದ್ದು

ಮುಷರಫ್ ಶಿವಸೇನೆ ದಿವಂಗತ ಮುಖ್ಯಸ್ಥರ ಬಗ್ಗೆ ಹೇಳಿದ್ದು

ಶಿವಸೇನೆ ಮತ್ತು ಆರ್ ಎಸ್ ಎಸ್ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದಾಳಿ ಒಂದಾ ಎರಡಾ? ಭಾರತ ಸರಕಾರ ಎಂದಾದರೂ ಈ ಎರಡು ಸಂಘಟನೆಯ ವಿರುದ್ದ ಕ್ರಮ ತೆಗೆದುಕೊಂಡಿದೆಯೇ? ಶಿವಸೇನೆಯ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆ ಉಗ್ರನಲ್ಲದೇ ಮತ್ತಿನ್ನೇನು ಎಂದು ಮಾಜಿ ಪಾಕ್ ಅಧ್ಯಕ್ಷ ಪರ್ವೆಜ್ ಮುಷರಫ್, ಠಾಕ್ರೆಯನ್ನು ಉಗ್ರರಿಗೆ ಹೋಲಿಸಿದ್ದಾರೆ.

ಕಸೂರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಗಿದ್ದು ತಪ್ಪಲ್ಲವೇ?

ಕಸೂರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಗಿದ್ದು ತಪ್ಪಲ್ಲವೇ?

ಪಾಕ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಶಹರ್ಯಾರ್ ಖಾನ್ ಅವರಿಗೆ ಭಾರತ ಯಾವ ರೀತಿ ಗೌರವ ನೀಡಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಾಜಿ ವಿದೇಶಾಂಗ ಕಸೂರಿಯವರ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿದ್ದ ಕುಲ್ಕರ್ಣಿಯವರ ಮೇಲೆ ಸಾರ್ವಜನಿಕವಾಗಿ ಶಿವಸೇನೆಯವರು ಮಸಿ ಬಳೆದರು. ಗುಲಾಮ್ ಅಲಿ ಸಂಗೀತ ಕಾರ್ಯಕ್ರಮ ಶಿವಸೇನೆಯ ಪುಂಡಾಟದಿಂದ ರದ್ದಾಯಿತು. ಇದೆಲ್ಲಾ ವಿಶ್ವಕ್ಕೆ ಯಾಕೆ ಗೊತ್ತಾಗುತ್ತಿಲ್ಲ ಎಂದು ಮುಷರಫ್ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+