Pakistan: ಅವಧಿಗೂ ಮುನ್ನವೇ ಅಗಸ್ಟ್ 8ರಂದು ಸಂಸತ್ ವಿಸರ್ಜನೆಗೆ ನಿರ್ಧಾರ
ನವದೆಹಲಿ, ಜುಲೈ 19: ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಪಾಕಿಸ್ತಾನ ದೇಶದಲ್ಲಿ ಸಂಸತ್ ಅನ್ನು ವಿಸರ್ಜಿಸಲು ಪ್ರಮುಖ ಆಡಳಿತ ಪಕ್ಷಗಳು ಒಪ್ಪಿಗೆ ನೀಡಿವೆ. ಪಾಕಿಸ್ತಾನ ಮುಸ್ಲಿಂ ಲೀಗ್- ನವಾಜ್ ಹಾಗೂ ಪಾಕಿಸ್ತಾನ ಪಿಪಲ್ ಪಕ್ಷಗಳು ಒಪ್ಪಿಗೆ ಸೂಚಿಸಿವೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನ ಸಂಸತ್ ಅಧಿವೇಶನವು ಮುಂದಿನ ತಿಂಗಳ ಆಗಸ್ಟ್ 12ರ ಮಧ್ಯರಾತ್ರಿ ಕೊನೆಗೊಳ್ಳಲಿದೆ. ಇದಕ್ಕೂ ನಾಲ್ಕು ಮೊದಲೇ ಸಂಸತ್ ವಿಸರ್ಜೆಗೆ ತೀರ್ಮಾನಿಸಲಾಗಿದೆ. ಸಂವಿಧಾನ ಪ್ರಕಾರ ಸರ್ಕಾರ ವಿಸರ್ಜನೆಯಾದ ಎರಡು ತಿಂಗಳೊಳಗೆ (60 ದಿನ) ಸಾರ್ವತ್ರಿಕ ಚುನಾವಣೆ ಇಲ್ಲವೇ ಪ್ರಾಂತೀಯ ವಿಧಾನಸಭಾ ಚುನಾವಣೆ ನಡೆಸಬೇಕಿದೆ ಎಂದು ಮೂಲಗಳು ತಿಳಿಸಿವೆ.

ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರವು ಸಮ್ಮಿಶ್ರ ಪಾಲುದಾರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP), ಮಂಗಳವಾರದಂದು ರಾಷ್ಟ್ರೀಯ ಮತ್ತು ಎಲ್ಲಾ ಪ್ರಾಂತೀಯ ಅಸೆಂಬ್ಲಿಗಳನ್ನು ಆಗಸ್ಟ್ 8 ರಂದು ವಿಸರ್ಜಿಸಲು ವಾರದ ಹಿಂದಷ್ಟೇ ಪ್ರಸ್ತಾಪಿಸಲಾಗಿತ್ತು. ಅದರಂತೆ ಮುಂದಿನ ಆಗಸ್ಟ್‌ನಲ್ಲಿ ಐದು ವರ್ಷಗಳ ಸಾಂವಿಧಾನಿಕ ಅವಧಿ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.
ರಾಷ್ಟ್ರೀಯ ಅಸೆಂಬ್ಲಿಯ ಅವಧಿಯನ್ನು ವಿಸ್ತರಿಸಲಾಗಿಲ್ಲ. ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮುಂದೆ ಚುನಾವಣೆ ನಡೆಸಲು ಬದ್ಧರಾಗಿದ್ದೇವೆ ಎಂದು ಕಾನೂನು ಸಚಿವ ಅಜಮ್ ನಜೀರ್ ತರಾರ್ ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಆಯೋಗಕ್ಕೆ ಅನುಕೂಲವಾಗುವಂತೆ ವಿಸರ್ಜನೆ
ಸಂಸದೀಯ ಮಂಡಳಿಯ ಶಿಫಾರಸುಗಳನ್ನು ಸಾರ್ವಜನಿಕ ಮಾಡಲಾಗಿದೆ. ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ (ECP) ಸುಲಭಗೊಳಿಸಲು ಆಗಸ್ಟ್ 13 ರ ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಅಸೆಂಬ್ಲಿಗಳನ್ನು ವಿಸರ್ಜಿಸಬಹುದು ಎಂದು ಆಂತರಿಕ ಸಚಿವ ರಾಣಾ ಸನಾವುಲ್ಲಾ ಮಾಹಿತಿ ನೀಡಿದ್ದಾರೆ ಎಂದು ವರದಿ ಆಗಿದೆ.
ಆಗಸ್ಟ್ 13ರ ಬದಲಿಗೆ ಆಗಸ್ಟ್ 11 ರಂದು ವಿಧಾನಸಭೆ ವಿಸರ್ಜನೆ ಮಾಡಿದರೆ, ಚುನಾವಣೆ ಆಯೋಗಕ್ಕೆ ಮ ಚುನಾವಣೆ ನಡೆಸಲು ಹೆಚ್ಚಿನ ಸಮಯ ಸಿಗಲಿದೆ ಎಂದು ಅವರು ಜಿಯೋ ನ್ಯೂಸ್ ಗೆ ತಿಳಿಸಿದ್ದರು.
ಇನ್ನು ಸನಾವುಲ್ಲಾ ಅವರ ಹೇಳಿಕೆ ಪ್ರಕಾರ, ಪ್ರಸ್ತುತ ಸಂಸತ್ತಿನ ಅವಧಿಯ ಅಂತ್ಯಕ್ಕೆ ಅಂತಿಮ 30 ದಿನಗಳ ಕೌಂಟ್‌ಡೌನ್ ಮತ್ತು ಸರ್ಕಾರದ ಅಧಿಕಾರಾವಧಿಯು ಈ ವಾರ ಪ್ರಾರಂಭವಾಗಲಿದೆ ಮತ್ತು ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತೀಯ ಅಸೆಂಬ್ಲಿಗಳ ಜೊತೆಗೆ ರಾಷ್ಟ್ರೀಯ ಅಸೆಂಬ್ಲಿಯ ಅವಧಿಯನ್ನು ನಿಗದಿಪಡಿಸಲಾಗಿದೆ. ಆಗಸ್ಟ್ 12 ರಂದು ಮುಕ್ತಾಯಗೊಳ್ಳಲಿದೆ ಎನ್ನಲಾಗಿದೆ.












Click it and Unblock the Notifications