ಭಾರತ ವಿರೋಧಿ ಪಾಕಿಸ್ತಾನಕ್ಕೆ ಶುರುವಾಯ್ತು ಹೊಸ ತಲೆನೋವು!
ಪಾಕಿಸ್ತಾನದ ಕೈಯಲ್ಲಿ ಕವಡೆ ಕಾಸು ಇಲ್ಲ, ಆದರೂ ಬಿಲ್ಡಪ್ ಮಾತ್ರ ಕಡಿಮೆ ಆಗುತ್ತಿಲ್ಲ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಬೆಲೆ ಏರಿಕೆ ಬಿಸಿಯಿಂದ ಪಾಕಿಸ್ತಾನದ ಜನ, ಪಾಕ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದೊಂಬಿ ಎದ್ದಿದ್ದು, ಹಿಂಸೆ ನಿಯಂತ್ರಿಸಲು ಪಾಕ್ ಸರ್ಕಾರ ನಲುಗಿ ಹೋಗಿದೆ.
ಸರಿಯಾಗಿ ದೇಶ ನಡೆಸದ ಪಾಕಿಸ್ತಾನದ ರಾಜಕಾರಣಿಗಳು, ಬರೀ ಅವರಿವರ ವಿರುದ್ಧ ಕಿರಿಕ್ & ಕಿತಾಪತಿ ಮಾಡುತ್ತಾ ಇರುತ್ತಾರೆ. ಇದು ದೊಡ್ಡ ತಲೆನೋವಿಗೆ ಕಾರಣವಾಗಿದೆ. ಪರಿಸ್ಥಿತಿ ಕೈಮೀರಿ ಹೋಗಿದ್ದು, ಪಾಕಿಸ್ತಾನದ ಆರ್ಥಿಕತೆ ಸರಿ ಮಾಡಲು ಒದ್ದಾಡುವಂತಾಗಿದೆ. ಹೀಗೆ ಆರ್ಥಿಕತೆ ಕೈಜಾರಿ ಹೋಗಿರುವ ಕಾರಣಕ್ಕೆ ಪಾಕಿಸ್ತಾನದಲ್ಲಿ ಬೆಲೆ ಏರಿಕೆ ಸಮಸ್ಯೆ ಕೂಡ ಈಗ ನಡುಕ ಹುಟ್ಟಿಸಿದೆ. 1 ಕೆಜಿ ಗೋಧಿ ಹಿಟ್ಟು ಹತ್ತಿರ, ಹತ್ತಿರ 500 ರೂಪಾಯಿ ಗಡಿಗೆ ಬಂದು ತಲುಪಿದೆ. ಈ ಸಮಯದಲ್ಲಿ ಪಾಕ್ ಸರ್ಕಾರದ ವಿರದ್ಧವೇ ಜನರು ದೊಂಬಿ ಎದ್ದಿದ್ದಾರೆ.

2300 ಕೋಟಿ ರೂಪಾಯಿ ರಿಲೀಸ್!
ಪಾಕ್ ಆಕ್ರಮಿತ ಕಾಶ್ಮೀರ ಧಗಧಗ ಹೊತ್ತಿ ಉರಿಯುತ್ತಿದೆ. ಬೆಲೆ ಏರಿಕೆ ಮತ್ತು ದುಬಾರಿ ವಿದ್ಯುತ್ ಬಿಲ್, ಭಾರಿ ತೆರಿಗೆ ವಿರೋಧಿಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೋರಾಟವು ಆರಂಭ ಆಗಿತ್ತು. ಆದರೆ ಈ ಪ್ರತಿಭಟನೆ ಈಗ ಕೈಮೀರಿ ಹೋಗಿದ್ದು, ಹಿಂಸೆಗೆ ತಿರುಗಿದೆ. ಪರಿಸ್ಥಿತಿ ಕೈಮೀರಿದ ಕಾರಣಕ್ಕೆ ಪೊಲೀಸರು ಹಾಗೂ ಸೇನಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆದರೂ ಜನ ಆಕ್ರೋಶಗೊಂಡು ಹೋರಾಟ ಮುಂದುವರಿಸಿದ್ದಾರೆ. ಮತ್ತೊಂದು ಕಡೆ ಪಾಕಿಸ್ತಾನ ಸರ್ಕಾರ ತಕ್ಷಣ ಅಲರ್ಟ್ ಆಗಿದ್ದು, ಒಟ್ಟು 2300 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈಗಿರುವ ಪರಿಸ್ಥಿತಿ ಗಮನಿಸಿದರೆ ಈ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.
ಸರ್ಕಾರದ ಜೊತೆಗೆ ಮಹತ್ವದ ಸಭೆ
'ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ' ಅಂದ್ರೆ ಜೆಎಎಸಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭ ಆಗಿತ್ತು. ಕಡಿಮೆ ವೆಚ್ಚದಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು & ರಿಯಾಯಿತಿ ನೀಡಿ ಗೋಧಿ ಹಿಟ್ಟು ಪೂರೈಕೆ ಮಾಡಬೇಕು ಎಂಬ ಬೇಡಿಕೆ ಇಡಲಾಗಿತ್ತು. ಆದರೆ ಹೋರಾಟದಲ್ಲಿ ಹಿಂಸೆ ಭುಗಿಲೆದ್ದು ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಈಗಾಗಲೇ ಪಾಕಿಸ್ತಾನದ ಸರ್ಕಾರ ಮತ್ತು ಹೋರಾಟಗಾರರ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಹೀಗಾಗಿ ತಕ್ಷಣ ಪಾಕ್ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ಇದು ಸಮಸ್ಯೆಯನ್ನ ಸರಿ ಮಾಡುತ್ತಾ? ಇಲ್ಲ ಹಿಂಸೆಯ ಬೆಂಕಿ ಮತ್ತಷ್ಟು ಹೆಚ್ಚಾಗುತ್ತಾ? ಅಂತಾ ಕಾದು ನೋಡಬೇಕಿದೆ.












Click it and Unblock the Notifications