Pakistan Election: ಭಾರತದ ಶತ್ರು ದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್
ಸದಾ ಭಾರತದ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ದೇಶದ ಎಲೆಕ್ಷನ್ ಡೇಟ್ ಫಿಕ್ಸ್ ಆಗಿದೆ. ಆರ್ಥಿಕ ಸಮಸ್ಯೆ, ಸಾಲದ ಸುಳಿ, ಉಗ್ರರ ಕಾಟ ಹೀಗೆ ಮೈತುಂಬಾ ತೂತು ಇಟ್ಟುಕೊಂಡಿರುವ ಪಾಕಿಸ್ತಾನಕ್ಕೆ ಚುನಾವಣೆ ನಡೆಯಲಿದೆ. ಕೆಲವು ವಾರದ ಹಿಂದಷ್ಟೇ ಈ ದೇಶದಲ್ಲಿ ಸಂಸತ್ ವಿಸರ್ಜನೆ ಮಾಡಲಾಗಿತ್ತು. ಹಾಗಾದರೆ ಪಾಕ್ ಸಾರ್ವತ್ರಿಕ ಚುನಾವಣೆ ಯಾವಾಗ ನಡೆಯುತ್ತೆ? ಬನ್ನಿ ತಿಳಿಯೋಣ.
ಅಂದಹಾಗೆ ಪಾಕಿಸ್ತಾನದಲ್ಲಿ ನವೆಂಬರ್ 6ರಂದು ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಪಾಕ್ ರಾಷ್ಟ್ರಪತಿ ಆರಿಫ್ ಅಲ್ವಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಬಹುತೇಕ ಅದೇ ದಿನ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮುಖ್ಯ ಚುನಾವಣೆ ಆಯುಕ್ತ ಸಿಕಂದರ್ ಸುಲ್ತಾನ ರಾಜಗೆ ಬರೆದಿರುವ ಪತ್ರದಲ್ಲಿ, ನ್ಯಾಷನಲ್ ಅಸೆಂಬ್ಲಿ ವಿಸರ್ಜಿಸಿ 90 ದಿನ ಮುಗಿಯುವ ಒಳಗೆ ಮತದಾನ ನಡೆಸಲು ಅಲ್ವಿ ಸೂಚಿಸಿದ್ದಾರೆ.

ಪಾಕಿಸ್ತಾನ ಅಧ್ಯಕ್ಷರ ಅಧಿಕಾರ ಏನು?
ಹಾಗೇ ಸಂಸತ್ ವಿಸರ್ಜನೆ ನಂತರ 90 ದಿನಗಳ ಒಳಗೆ ದಿನಾಂಕ ನಿಗದಿಪಡಿಸಲು ಅಧ್ಯಕ್ಷರಿಗೆ ಇರುವ ಅಧಿಕಾರದ ಕುರಿತು, ಸಂವಿಧಾನದ ವಿಧಿ 48(5) ಅನ್ನ ಕೂಡ ಅಲ್ವಿ ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಮೂಲಕ ಸಂಸತ್ ವಿಸರ್ಜನೆಯಾದ 89ನೇ ದಿನವಾದ ನ. 6ಕ್ಕೆ ಚುನಾವಣೆ ನಡೆಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾಕಿಸ್ತಾನ ಹಂಗಾಮಿ ಕಾನೂನು ಸಚಿವ ಅಹ್ಮದ್ ಇರ್ಫಾನ್ ಅಸ್ಲಂ ಸೋಮವಾರ ಪಾಕ್ ಅಧ್ಯಕ್ಷ ಅಲ್ವಿ ಅವರನ್ನು ಭೇಟಿಯಾಗಿದ್ದರು. ಹೀಗೆ ಇಬ್ಬರ ಭೇಟಿ ಬಳಿಕ ಮಹತ್ವದ ಬೆಳವಣಿಗೆ ನಡೆದಿದೆ.
ಪಾಕಿಸ್ತಾನ ಲೋಕಸಭೆ ಒಟ್ಟು ಸದಸ್ಯ ಬಲ 342, ಭಾರತದ ರೀತಿ ಪಾಕಿಸ್ತಾನದಲ್ಲೂ 5 ವರ್ಷ ಅಧಿಕಾರವಧಿ ಇರುತ್ತದೆ. ಅದರೆ ಈ ಅವಧಿಯು ಆಗಸ್ಟ್ 12ಕ್ಕೆ ಕೊನೆಯಾಗುತ್ತಿತ್ತು. ಆದರೆ ಈ ಅವಧಿ ಪೂರ್ಣವಾಗುವ ಮೊದಲು ಅಂದ್ರೆ ಆಗಸ್ಟ್ 9ಕ್ಕೆ ಪಾಕ್ ಸಂಸತ್ ವಿಸರ್ಜನೆ ಶಿಫಾರಸು ಕಳುಹಿಸಿದ್ದರು ಪಾಕ್ ಪ್ರಧಾನಿ. ಹೀಗೆ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕಿಸ್ತಾನ ಸಂಸತ್ತನ್ನು ವಿಸರ್ಜನೆ ಮಾಡಲಾಗಿತ್ತು. ಇದೀಗ ನವೆಂಬರ್ 6ರಂದು ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಇಮ್ರಾನ್ ಶತ್ರು ಪಾಕಿಸ್ತಾನಕ್ಕೆ ವಾಪಸ್
ಪನಾಮಾ ಪೇಪರ್ಸ್ ಪ್ರಕರಣದಲ್ಲಿ ದೇಶ ಬಿಟ್ಟು ಹೋಗಿದ್ದ ಪಾಕಿಸ್ತಾನ ಮಾಜಿ ಪಿಎಂ ನವಾಜ್ ಷರೀಫ್ ವಾಪಸ್ ಪಾಕಿಸ್ತಾನಕ್ಕೆ ಬರ್ತಿದ್ದಾರೆ. ಲಂಡನ್‌ನಲ್ಲಿ ಇರುವ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಅಕ್ಟೋಬರ್ 21ರಂದು ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಲಂಡನ್‌ನಲ್ಲಿರುವ ಶೆಹಬಾಜ್ ಷರೀಫ್ ಘೋಷಿಸಿದ್ದಾರೆ. ಶೆಹಬಾಜ್ ಷರೀಫ್ & ನವಾಜ್ ಷರೀಫ್ ಸಹೋದರರು ಹೌದು. ಹೀಗೆ ನವಾಜ್ ಷರೀಫ್‌ಗೆ ಗ್ರ್ಯಾಂಡ್ ವೆಲ್‌ಕಂ ಹೇಳಿ, ಬರಮಾಡಿಕೊಳ್ಳಲು ವೇದಿಕೆ ಕೂಡ ಸಿದ್ಧವಾಗಿದೆ. ಈ ಮೂಲಕ ಇಮ್ರಾನ್ ಖಾನ್ ಶತ್ರು ನವಾಜ್ ಷರೀಫ್ ಪಾಕಿಸ್ತಾನಕ್ಕೆ ಚುನಾವಣೆ ಸಮಯದಲ್ಲೇ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ.
ಪಾಕ್ ಮಾಜಿ ಪ್ರಧಾನಿಗಳ ಹಣೆಬರಹ..
ಸದಾ ಭಾರತದ ವಿರುದ್ಧ ದ್ವೇಷ ಕಾರುವ ಪಾಕಿಸ್ತಾನದಲ್ಲಿ ಭ್ರಷ್ಟರಿಗೆ ರಾಜ ಮರ್ಯಾದೆ ಇದೆ. ಅದ್ರಲ್ಲೂ ಪಾಕ್ ರಾಜಕಾರಣಿಗಳು ಅದೆಷ್ಟು ಭ್ರಷ್ಟರು ಅಂದರೆ, ಪಾಕ್‌ನಲ್ಲಿ ಬಹುತೇಕ ಮಾಜಿ ಪ್ರಧಾನಿಗಳಿಗೆ ಜೈಲಿನ ದರ್ಶನ ಆಗಿದೆ. ನವಾಜ್ ಶರೀಫ್ ಕೂಡ ಪಾಕ್‌ನಲ್ಲಿ ಜೈಲೂಟ ತಿಂದು, ಬೇರೆ ದೇಶಕ್ಕೆ ಎಸ್ಕೇಪ್ ಆಗಿದ್ದರು. ಪನಾಮಾ ಪೇಪರ್ಸ್ ಹಗರಣ ಹಿನ್ನೆಲೆಯಲ್ಲಿ 2019ರಿಂದ ಲಂಡನ್‌ನಲ್ಲೇ ಇರುವ ಮಾಜಿ ಪ್ರಧಾನಿ ನವಾಜ್, ಪಾಕ್‌ಗೆ ಮರಳಿದರೂ ರಾಜಕೀಯ ಪಕ್ಷಗಳ ನೇತೃತ್ವ ವಹಿಸಲು ಆಗುವುದಿಲ್ಲ.
71 ವರ್ಷ ವಯಸ್ಸಿನ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್, 2018ರಲ್ಲಿ ಪಾಕಿಸ್ತಾನದಲ್ಲಿ 2 ಭ್ರಷ್ಟಾಚಾರ ಕೇಸ್‌ಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ರು. ಜೈಲು ಸೇರುತ್ತಿದ್ದಂತೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಾ ಹೇಳಿ, ಲಾಹೋರ್ ಹೈಕೋರ್ಟ್‌ನ ಅನುಮತಿ ಪಡೆದು ಚಿಕಿತ್ಸೆಗಾಗಿ ತೆರಳಿದ್ದರು. 2019ರಿಂದ ಚಿಕಿತ್ಸೆಗಾಗಿ ಲಂಡನ್‌ನಲ್ಲಿ ವಾಸ ಮಾಡುತ್ತಿರುವ ಕುರಿತು ನವಾಜ್ ಷರೀಫ್ ತಿಳಿಸಿದ್ದರು. ಈಗ ದಿಢೀರ್ ಅವರ ಆರೋಗ್ಯ ಸುಧಾರಿಸಿದೆ. ಹೀಗಾಗಿ ಪಾಕಿಸ್ತಾನಕ್ಕೆ ವಾಪಸ್ ಬರಲು ಸಿದ್ಧರಾಗಿದ್ದಾರೆ.












Click it and Unblock the Notifications