ಮನೆಯೆದುರಲ್ಲಿ ಪಾಕ್ ಮಾಜಿ ಸಂಸದನ ಬರ್ಬರ ಹತ್ಯೆ

ಕರಾಚಿ, ಡಿಸೆಂಬರ್ 27: ಪಾಕಿಸ್ತಾನದ ಮಾಜಿ ಸಂಸದ ಸಯ್ಯದ್ ಅಲಿ ರಾಜಾ ಅಬಿಡಿ ಅವರನ್ನು ಕರಾಚಿಯಲ್ಲಿರುವ ಅವರ ಮನೆಯೆದುರಲ್ಲೇ ಗುಂಡಿಕ್ಕಿ ಕೊಂದ ಘಟನೆ ನಡೆದಿದೆ.

Pakistan former MP shot dead in Karachi

ಉದ್ಯಮಿಯಾಗಿದ್ದ 46 ವರ್ಷ ವಯಸ್ಸಿನ ಸಯ್ಯದ್ ನಂತರ ರಾಜಕಾರಣಿಯಾಗಿ ಬದಲಾಗಿದ್ದರು. ಗುರುವಾರ ರಾತ್ರಿ ತಮ್ಮ ಕಾರಿನಲ್ಲಿ ಮನೆಗೆ ಬಂದು ಇಳಿಯುತ್ತಿದ್ದ ಸಮಯದಲ್ಲಿ ಬೈಕಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿನ ಸುರಿಮಳೆಗೈದು ಅವರನ್ನು ಕೊಂದಿದ್ದಾರೆ.

ಆರೋಪಿಗಳು ನಾಪತ್ತೆಯಾಗದ್ದು, ಶೋಧ ಕಾರ್ಯ ನಡೆಯುತ್ತಿದೆ.ಶೂಟೌಟ್ ನ ನಂತರ ತಕ್ಷಣವೇ ಅಬಿಡಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ರಕ್ತಸ್ರಾವದಿಂದ ಅವರು ಸಾವನ್ನಪ್ಪಿದ್ದರು ಎಂದು ವರದಿಗಳು ತಿಳಿಸಿವೆ.

ಅವರ ಪಾರ್ಥಿವ ಶರೀರವನ್ನು ಜಿನ್ನಾ ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಸೆಂಟರ್ ಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಮೇಲ್ನೋಟಕ್ಕೆ ಇದು ರಾಜಕೀಯ ಪ್ರೇರಿತ ಹತ್ಯೆ ಎನ್ನಿಸಿದ್ದು, ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+