ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪ್ರವಾಹಕ್ಕೆ ನಲುಗಿದ ಪಾಕಿಸ್ತಾನ, ಮುಳುಗಿದ 50 ಹಳ್ಳಿಗಳು

|
Google Oneindia Kannada News

ಇಸ್ಲಾಮಾಬಾದ್‌, ಜುಲೈ 31: ಬಲೂಚಿಸ್ತಾನದಿಂದ ಹಠಾತ್ ಪ್ರವಾಹವು ಪಾಕಿಸ್ತಾನವನ್ನು ಪ್ರವೇಶಿಸಿದ ಕಾರಣ ಸಿಂಧ್ ಪ್ರಾಂತ್ಯದಲ್ಲಿ ಸುಮಾರು 30 ಹಳ್ಳಿಗಳು ಮುಳುಗಿದ್ದ ವರದಿಯಾಗಿತ್ತು. ಈಗ ಗುಡ್ಡಗಾಡು ಪ್ರದೇಶದಲ್ಲಿ ಮುಳುಗಿದ ಹಳ್ಳಿಗಳನ್ನು ಸೇರಿಸಿ ಪ್ರವಾಹದಲ್ಲಿ ಸುಮಾರು 50 ಹಳ್ಳಿಗಳು ಮುಳುಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಲೂಚಿಸ್ತಾನದಲ್ಲಿ ಧಾರಾಕಾರ ಮಳೆ ಮತ್ತು ಹಠಾತ್ ಪ್ರವಾಹ ಮುಂದುವರಿದಂತೆ, ಪ್ರವಾಹವು ಪಕ್ಕದ ಕಂಬರ್-ಶಹದಾದ್ಕೋಟ್ ಜಿಲ್ಲೆ ಮತ್ತು ದಾದು ಜಿಲ್ಲೆಯ ಕಚೋ ಗುಡ್ಡಗಾಡು ಪ್ರದೇಶಗಳಿವೆ ವ್ಯಾಪಿಸಿದ್ದು, ವಿವಿಧ ಪ್ರದೇಶಗಳಲ್ಲಿ ಭಾರೀ ನಷ್ಟವನ್ನು ಉಂಟುಮಾಡಿದೆ ಎಂದು ವರದಿಯಾಗಿವೆ.

ಮೂಲಗಳ ಪ್ರಕಾರ, ಕಚೋದಲ್ಲಿನ ಇನ್ನೂ ಮೂವತ್ತು ಹಳ್ಳಿಗಳು ಮತ್ತು ಸಂಪರ್ಕ ರಸ್ತೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಗುಡ್ಡಗಾಡು ಪ್ರದೇಶದಲ್ಲಿ ಮುಳುಗಿದ ಹಳ್ಳಿಗಳ ಒಟ್ಟು ಸಂಖ್ಯೆ 50ಕ್ಕೆ ತಲುಪಿದೆ.

Pakistan floods: Over 50 Villages Submerged In Flash Floods

ARY ನ್ಯೂಸ್ ಪ್ರಕಾರ, ಪ್ರವಾಹ ಪೀಡಿತ ಪ್ರದೇಶಗಳ ಜನರು ತಮ್ಮ ಜೀವ ಉಳಿಸಲು ಬೆಟ್ಟಗಳು ಮತ್ತು ಆಶ್ರಯ ಶಿಬಿಯಗಳಲ್ಲಿ ರಕ್ಷಣೆ ಪಡೆಯುವಂತೆ ತಿಳಿಸಲಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಬಲೂಚಿಸ್ತಾನದಲ್ಲಿ ಈ ಬಾರಿಯ ಮಾನ್ಸೂನ್ ಋತುವಿನಲ್ಲಿ ಭಾರೀ ಮಳೆ ಬೀಳುತ್ತಿದೆ.

ಭಾರೀ ಮಳೆ ಮತ್ತು ಪ್ರವಾಹದಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಜನರು ಬಲೂಚಿಸ್ತಾನ್ ಮತ್ತು ಖೈಬರ್ ಪ್ರಾಂತ್ಯಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶನಿವಾರದಂದು ಪಾಕಿಸ್ತಾನದ ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳಿದ್ದಾರೆ.

Pakistan floods: Over 50 Villages Submerged In Flash Floods

ಕಳೆದ 24 ಗಂಟೆಗಳಲ್ಲಿ, ಬಲೂಚಿಸ್ತಾನದಲ್ಲಿ ಪ್ರವಾಹಕ್ಕೆ ಸಿಲುಕಿ ಒಂದೇ ಕುಟುಂಬದ ಒಂಬತ್ತು ಸದಸ್ಯರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪಿಡಿಎಂಎ ಉಲ್ಲೇಖಿಸಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಬಲಿಯಾದವರಲ್ಲಿ ಏಳು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದ್ದಾರೆ ಎಂದು ವರದಿಯಾಗಿದೆ.

ಖೈಬರ್ ಪಖ್ತುಂಖ್ವಾದಲ್ಲಿ, ಪ್ರವಾಹ ಮತ್ತು ಮೇಲ್ಛಾವಣಿ ಕುಸಿದು ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 17 ಜನರು ಗಾಯಗೊಂಡಿದ್ದಾರೆ. ಕಳೆದ 36 ಗಂಟೆಗಳಲ್ಲಿ, ಸುಮಾರು 100 ಮನೆಗಳು ಪ್ರವಾಹದಲ್ಲಿ ಸಂಪೂರ್ಣವಾಗಿ ಹಾನಿಗೊಳಗಾಗಿವೆ.

ಬಲೂಚಿಸ್ತಾನದಲ್ಲಿ ಭಾರೀ ಮಳೆಯ ಅನಾಹುತದ ಹಿನ್ನೆಲೆಯಲ್ಲಿ, ಪ್ರಾಂತೀಯ ಅಧಿಕಾರಿಗಳು ಪ್ರಾಂತ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.

English summary
flash floods in Pakistan: Over 50 villages submerged in Pakistan after flash floods from Balochistan entered the province local media reported. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X