ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಪ್ರವಾಹಕ್ಕೆ 1,290 ಜನ ಬಲಿ: 6.3 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ: WHO

|
Google Oneindia Kannada News

ಇಸ್ಲಾಮಾಬಾದ್ ಸೆಪ್ಟೆಂಬರ್ 06: ನಿರಂತರ ಮತ್ತು ಧಾರಾಕಾರ ಮಳೆಯಿಂದಾಗಿ ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿದ್ದು ಭಾರಿ ಸಾವುನೋವುಗಳು ಸಂಭವಿಸಿವೆ. ಪ್ರವಾಹದಿಂದಾಗಿ ಏಕಾಏಕಿ ಸುಮಾರು 1,290 ಜೀವಗಳನ್ನು ಕಳೆದುಕೊಂಡರೆ 12,500 ಜನರು ಗಾಯಗೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) 33 ಮಿಲಿಯನ್‌ಗಿಂತಲೂ ಹೆಚ್ಚು ಜನರು ಬಾಧಿತರಾಗಿದ್ದಾರೆ, ಇದರಲ್ಲಿ 6.4 ಮಿಲಿಯನ್ ಜನರಿಗೆ ಮಾನವೀಯ ನೆರವು ಅಗತ್ಯವಿದೆ ಎಂದು ಹೇಳಿದೆ.

WHO ಪ್ರಕಾರ, 22 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಾಕಿಸ್ತಾನದಲ್ಲಿ ವಿಪತ್ತು ಅಪ್ಪಳಿಸಿದೆ. ಇದರಿಂದಾಗಿ ಸುಮಾರು 6,34,000 ಜನ ಸ್ಥಳಾಂತರಗೊಂಡಿದ್ದಾರೆ. ಪ್ರವಾಹದ ಮಧ್ಯೆ ಪಾಕಿಸ್ತಾನದಲ್ಲಿ ಸುಮಾರು 1,460 ಆರೋಗ್ಯ ಸೌಲಭ್ಯಗಳು ಅಸ್ತವ್ಯಸ್ತಗೊಂಡಿವೆ ಎಂದು WHO ಹೇಳಿದೆ. ಅದರಲ್ಲಿ 4,332 ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿವೆ ಮತ್ತು 1,028 ಭಾಗಶಃ ನಿಷ್ಕ್ರಿಯವಾಗಿವೆ.

ಆರೋಗ್ಯ ಸೌಲಭ್ಯ ಕೇಂದ್ರಗಳು, ಅಗತ್ಯ ಔಷಧಗಳು ಮತ್ತು ಜೀವ-ಸಹಾಯ ಸರಬರಾಜುಗಳ ಪ್ರವೇಶದಲ್ಲಿದ್ದ ಸ್ಟಾಕ್‌ ಮಳೆ ಪ್ರವಾಹದಿಂದ ಜಲಾವೃತಗೊಂಡಿದ್ದರಿಂದ ಸಂಪೂರ್ಣ ಹಾನಿಗೊಳಗಾಗಿದೆ. ಮಾತ್ರವಲ್ಲದೆ ಪಾಕಿಸ್ತಾನದಲ್ಲಿ ಧಾರಾಕಾರ ಮಳೆಯಿಂದಾಗಿ ಮಳೆ ನೀರು ಆವರಿಸಿದ್ದು ಅನೇಕ ಕಾಯಿಗಳು ಹರಡುತ್ತಿರುವುದು ಕಂಡುಬಂದಿದೆ. ಪ್ರವಾಹ ಸ್ಥಳಗಳಲ್ಲಿ ಟೈಫಾಯಿಡ್, ಡೆಂಗ್ಯೂ ಹರಡುವಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ಮಲೇರಿಯಾ ಹರಡುವಿಕೆಯ ಹೆಚ್ಚಳಕ್ಕೂ ಕಾರಣವಾಗಿದೆ.

Pakistan floods kill 1,290: over 6.3 lakh displaced: WHO

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಇಂತಹ ಅನೇಕ ಪ್ರಕರಣಗಳಿಂದಲೂ ಆತಂಕ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ತೀವ್ರವಾದ ಮಲೇರಿಯಾ, ಉಸಿರಾಟದ ಸೋಂಕುಗಳು, ಚರ್ಮ ಮತ್ತು ಕಣ್ಣಿನ ಸೋಂಕುಗಳು ಮತ್ತು ಟೈಫಾಯಿಡ್‌ನಿಂದ ಬಳಲುತ್ತಿರುವ ರೋಗಿಗಳು ಹೆಚ್ಚಾಗುತ್ತಿದ್ದಾರೆ ಎಂದು ಆರಂಭಿಕ ರೋಗ ಕಣ್ಗಾವಲು ಸಂಸ್ಥೆ ಸೂಚಿಸಿದೆ.

ಪೂರ್ವ ಮೆಡಿಟರೇನಿಯನ್‌ನ ಡಬ್ಲ್ಯುಎಚ್‌ಒ ಪ್ರಾದೇಶಿಕ ನಿರ್ದೇಶಕ ಡಾ ಅಹ್ಮದ್ ಅಲ್ ಮಂಧಾರಿ ಪಾಕಿಸ್ತಾನದ ಪ್ರವಾಹಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ವಿನಾಶಕಾರಿ ಮಾನ್ಸೂನ್ ಪ್ರವಾಹದ ಪರಿಣಾಮವಾಗಿ ಪಾಕಿಸ್ತಾನದ ಜನರು ಪ್ರಸ್ತುತ ಎದುರಿಸುತ್ತಿರುವ ಮಾನವೀಯ ಬಿಕ್ಕಟ್ಟನ್ನು ನಾವು ನಿಕಟವಾಗಿ ಮತ್ತು ಆಳವಾದ ಕಾಳಜಿಯಿಂದ ನೋಡುತ್ತಿದ್ದೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಪಾಕಿಸ್ತಾನದ ಜನರೊಂದಿಗೆ, ವಿಶೇಷವಾಗಿ ನೇರವಾಗಿ ಪೀಡಿತ ಸಮುದಾಯಗಳ ಮೇಲಿದೆ. ನಮ್ಮ ಸ್ವಂತ WHO ಸಿಬ್ಬಂದಿ ಮತ್ತು ರಾಷ್ಟ್ರೀಯ ಪಾಲುದಾರರು ಸೇರಿದಂತೆ, ಈ ವಿಪತ್ತಿನಿಂದ ವೈಯಕ್ತಿಕವಾಗಿ ಪ್ರಭಾವಿತರಾಗಿದ್ದರೂ ಸಹ, ಬೃಹತ್ ಆರೋಗ್ಯ ಅಗತ್ಯಗಳಿಗೆ ಪ್ರತಿಕ್ರಿಯಿಸಲು ದಣಿವರಿಯಿಲ್ಲದೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ ಎಂದಿದ್ದಾರೆ.

English summary
Incessant and torrential rains have caused floods in Pakistan causing heavy casualties. About 1,290 lives were lost and 12,500 people were injured due to the flash floods. Also many diseases are spreading.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X