ಭಾರತದ ಶತ್ರು ಪಾಕಿಸ್ತಾನದ ಕಥೆ ಚಿತ್ರಾನ್ನಾ ಅಥವಾ ಮೊಸ್ರನ್ನಾ?
ಪಾಕಿಸ್ತಾನದ ರಾಜಕೀಯ ಅರಾಜಕತೆ ಮತ್ತೆ ಮುಂದುವರಿದಿದೆ. ಅಲ್ಲಿನ ಪರಿಸ್ಥಿತಿ ಈಗ ಹೇಗೆ ಆಗಿದೆ ಅಂದ್ರೆ, ಯಾರೇ ಅಧಿಕಾರಕ್ಕೆ ಬಂದರೂ ಬೆಂಕಿ ಹೊತ್ತಿಕೊಳ್ಳುವುದು ಪಕ್ಕಾ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಸಮಯದಲ್ಲಿ ಚುನಾವಣೆ ಫಲಿತಾಂಶ ಅರ್ಧ ಹೊರಬಿದ್ದು ಸಂಚಲನ ಸೃಷ್ಟಿಯಾಗಿದೆ. ಯಾಕೆ ಗೊತ್ತಾ? ಭಾರತದ ಶತ್ರು ಪಾಕಿಸ್ತಾನದ ಕಥೆ ಚಿತ್ರಾನ್ನಾ ಅಥವಾ ಮೊಸ್ರನ್ನಾ ಆಗುತ್ತಾ? ಅಂತಾ ಚರ್ಚೆ ಜೋರಾಗಿದೆ.
ಹೌದು ನಿನ್ನೆ ಪಾಕಿಸ್ತಾನದ ಸಂಸತ್‌ಗೆ ಚುನಾವಣೆ ನಡೆದಿತ್ತು. ಹಾಗೇ ಸ್ಥಳೀಯ ಪ್ರಾಂತ್ಯದ ವಿಧಾನಸಭೆಗಳಿಗೂ ಎಲೆಕ್ಷನ್ ನಡೆದು ಮತ ಎಣಿಕೆ ಶುರುವಾಗಿತ್ತು. ಪಾಕಿಸ್ತಾನ ಚುನಾವಣೆ ಆಯೋಗದ ಪ್ರಕಾರ ಪಾಕ್ ಸಂಸತ್‌ನ 266 ಸ್ಥಾನ ಪೈಕಿ 265 ಸ್ಥಾನಕ್ಕೆ ಚುನಾವಣೆ ನಡೆಸಲಾಗಿದೆ 5121 ಅಭ್ಯರ್ಥಿಗಳು ಮತ್ತು 4 ಪ್ರಾಂತೀಯ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ 12,695 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಈಗ ಅರ್ಧಕರ್ಧ ಫಲಿತಾಂಶ ಹೊರಬಿದ್ದಿದ್ದು, ಬಹುಮತ ಸಿಗದೆ ಪಾಕಿಸ್ತಾನ ಸಂಸತ್ ಚಿತ್ರಾನ್ನಾ ಆಗೋದು ಪಕ್ಕಾ ಆಗುತ್ತಿದೆ. ಈ ಬಗ್ಗೆ ನಿಮಗೆ ಅಂಕಿ & ಅಂಶಗಳ ಮಾಹಿತಿಗೆ ಮುಂದೆ ಓದಿ.

124 ಸ್ಥಾನಗಳ ರಿಸಲ್ಟ್ ಔಟ್!
ಈಗಿನ ಮಾಹಿತಿಗಳ ಪ್ರಕಾರ ಈವರೆಗೂ ಪಾಕಿಸ್ತಾನದ ಸಂಸತ್‌ನ 124 ಸ್ಥಾನಗಳ ಫಲಿತಾಂಶ ಹೊರಬಿದ್ದಿದ್ದು, ಈ ಪೈಕಿ ಇಮ್ರಾನ್ ಖಾನ್ ಪಕ್ಷವನ್ನು ಬೆಂಬಲಿಸುವವರು ಸೇರಿ ಪಕ್ಷೇತರ ಅಭ್ಯರ್ಥಿಗಳು ಬರೋಬ್ಬರಿ 49 ಸ್ಥಾನದಲ್ಲಿ ಗೆದ್ದಿದ್ದಾರೆ. ನವಾಜ್ ಷರೀಫ್ ಅವರ PML-Nಗೆ 38 ಸ್ಥಾನ ಸಿಕ್ಕಿದ್ದರೆ, PPP ಪಕ್ಷಕ್ಕೆ 31 ಸ್ಥಾನ ಸಿಕ್ಕಿದೆಯಂತೆ.
ಇತರರು ಒಟ್ಟಾರೆ 6 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಇನ್ನೂ 141 ಸ್ಥಾನಗಳ ಫಲಿತಾಂಶ ಬಾಕಿ ಉಳಿದಿದೆ. ಹಾಗಾದರೆ ಇಮ್ರಾನ್ ಖಾನ್‌ಗೆ ಜೈಲಿನಲ್ಲಿ ಇದ್ದರೂ ಪರೋಕ್ಷವಾಗಿ ಅಧಿಕಾರ ಸಿಗಲಿದೆಯಾ? ಎಂಬ ಪ್ರಶ್ನೆ ಬಲು ಜೋರಾಗಿದೆ.

ಭಾರತ & ಪಾಕಿಸ್ತಾನ ಎಲೆಕ್ಷನ್!
ಪಾಕಿಸ್ತಾನದ ಲೋಕಸಭೆ ಸದಸ್ಯ ಬಲ 342 ಆಗಿದೆ. ನಮ್ಮ ಭಾರತದ ರೀತಿಯೇ ಪಾಕಿಸ್ತಾನದಲ್ಲಿ ಕೂಡ 5 ವರ್ಷ ಅಧಿಕಾರವಧಿಯು ಇರುತ್ತೆ. ಈ ಅವಧಿ 2023 ರ ಆಗಸ್ಟ್ 12ಕ್ಕೆ ಕೊನೆಯಾಗಿತ್ತು, ಆದ್ರೆ ಅವಧಿಗೆ ಮೊದ್ಲು ಅಂದ್ರೆ ಆಗಸ್ಟ್ 9ಕ್ಕೆ ಪಾಕ್ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ರು ಅಂದಿನ ಪಾಕ್ ಪ್ರಧಾನಿ. ಆಗಿನ ಪ್ರಧಾನಿ ಶಿಫಾರಸು ಹಿನ್ನೆಲೆ, ಪಾಕಿಸ್ತಾನ ಸಂಸತ್ ವಿಸರ್ಜನೆ ಮಾಡಲಾಗಿತ್ತು. ಈಗ ಚುನಾವಣೆ ನಡೆದು ಮತ ಎಣಿಕೆ ಕೂಡ ಆರಂಭವಾಗಿದೆ. ಆದರೂ, ಈ ದೇಶದಲ್ಲಿ ಸಾಲು ಸಾಲು ಸವಾಲು ಎದುರಾಗಿದೆ.
ಯಾರ್ ಗೆಲ್ತಾರೆ? ಯಾರ್ ಸೋಲುತ್ತಾರೆ?
ಪಾಕಿಸ್ತಾನದಲ್ಲಿ ಏನೂ ಸರಿ ಇಲ್ಲ ಅಲ್ಲಿ ಸಾಮಾನ್ಯ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ. ಯಾವಾಗ ಯಾವ ಉಗ್ರ ಬಂದು ಬಾಂಬ್ ಹಾಕುತ್ತಾನೋ, ಎಷ್ಟು ಜನರನ್ನ ಕೊಲೆಗೈದು ಹೋಗುತ್ತಾನೋ ಗೊತ್ತಿಲ್ಲ. ಹೀಗಿದ್ದಾಗ ಪಾಪಿ ಪಾಕಿಸ್ತಾನದಲ್ಲಿ ಇದೀಗ ಚುನಾವಣೆ ನಡೆದಿದೆ.
ಇದೇ ಸ್ಥಿತಿಯಲ್ಲಿ ಪಾಕ್‌ನ ಹಲವು ಪ್ರದೇಶದಲ್ಲಿ ರಕ್ತ ಚೆಲ್ಲಾಡಿದೆ ಎಂಬ ಮಾಹಿತಿ ಹೊರಬೀಳುತ್ತಿದೆ. ಈ ಮಧ್ಯೆ ಮತ್ತೆ ಇಮ್ರಾನ್ ಖಾನ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವುದು ಸಖತ್ ಗಮನ ಸೆಳೆದಿದೆ. ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ..? ಅಂತಾ ಕಾದು ನೋಡಬೇಕಿದೆ. ಈ ಬಗ್ಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಸ್ಪಷ್ಟ ಚಿತ್ರಣ ಕೂಡ ಇಡೀ ಜಗತ್ತಿಗೆ ಸಿಗಲಿದೆ.












Click it and Unblock the Notifications