ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಸೇನಾಧಿಕಾರಿಗಳಿದ್ದ ಹೆಲಿಕಾಪ್ಟರ್ ಬಲೂಚಿಸ್ತಾನದಲ್ಲಿ ನಾಪತ್ತೆ!

|
Google Oneindia Kannada News

ಇಸ್ಲಮಾಬಾದ್, ಆಗಸ್ಟ್ 2: ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿದ್ದ ಪಾಕಿಸ್ತಾನ ವಾಯುಸೇನೆಯ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂದು ಪಾಕಿಸ್ತಾನ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ ಖಚಿತಪಡಿಸಿದೆ.

ಪಾಕಿಸ್ತಾನದ ಸಶಸ್ತ್ರ ಪಡೆಗಳ ISPR ನ ಮಾಧ್ಯಮ ವಿಭಾಗವು ಹೆಲಿಕಾಪ್ಟರ್‌ನಲ್ಲಿ XII ಪಾಕಿಸ್ತಾನ್ ಸೇನೆಯ ಹಿರಿಯ ಅಧಿಕಾರಿಗಳಿದ್ದರು. ಈ ಪೈಕಿ ಕಾರ್ಪ್ಸ್‌ನ ಕಮಾಂಡರ್ ಜನರಲ್ ಸರ್ಫ್ರಾಜ್ ಅಲಿ ಮತ್ತು ಬಲೂಚಿಸ್ತಾನ್‌ನಲ್ಲಿ ನಡೆಸಲಾಗುತ್ತಿರುವ ಪ್ರವಾಹ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆಯ ಇತರ 5 ಹಿರಿಯ ಮಿಲಿಟರಿ ಅಧಿಕಾರಿಗಳು ಇದ್ದರು ಎಂದು ತಿಳಿದು ಬಂದಿದೆ.

ಇದು ಪಾಕಿಸ್ತಾನದಲ್ಲಿ ಕೆಎಫ್‌ಸಿ ರೈಡರ್ ಆಗಿ ನೈಟ್ ಡ್ಯೂಟಿ ಮಾಡುವ ಹುಡುಗಿ ಕಥೆಇದು ಪಾಕಿಸ್ತಾನದಲ್ಲಿ ಕೆಎಫ್‌ಸಿ ರೈಡರ್ ಆಗಿ ನೈಟ್ ಡ್ಯೂಟಿ ಮಾಡುವ ಹುಡುಗಿ ಕಥೆ

"ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿದ್ದ ಪಾಕಿಸ್ತಾನ ಸೇನೆಯ ಹೆಲಿಕಾಪ್ಟರ್ ಎಟಿಸಿ ಸಂಪರ್ಕವನ್ನು ಕಳೆದುಕೊಂಡಿತು. ಪ್ರವಾಹ ಪರಿಹಾರ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಕಮಾಂಡರ್ 12 ಕಾರ್ಪ್ಸ್ ಸೇರಿದಂತೆ ಆರು ವ್ಯಕ್ತಿಗಳು ವಿಮಾನದಲ್ಲಿದ್ದರು. ಈ ಹೆಲಿಕಾಪ್ಟರ್ ಶೋಧಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ," ಎಂದು ಸೇನೆ ಟ್ವೀಟ್ ಮಾಡಿದೆ.

Pakistan army helicopter carrying senior officers goes missing at Balochistan

ಐದು ಗಂಟೆಗಳಿಂದ ಸಂಪರ್ಕ ಕಳೆದುಕೊಂಡ ಹೆಲಿಕಾಪ್ಟರ್: ಹೆಲಿಕಾಪ್ಟರ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಯೊಂದಿಗೆ ಸಂಪರ್ಕ ಕಳೆದುಕೊಂಡು ಕಳೆದ ಐದು ಗಂಟೆಗಳಿಂದ ನಾಪತ್ತೆಯಾಗಿದೆ ಎಂದು ಪಾಕಿಸ್ತಾನ ಮಾಧ್ಯಮ ವರದಿಗಳು ತಿಳಿಸಿವೆ.

ದೇಶದ ಕೆಲವು ಭಾಗಗಳಲ್ಲಿ ಸೃಷ್ಟಿಯಾಗಿರುವ ಪ್ರವಾಹದ ಮಧ್ಯೆ ಸಾವಿರಾರು ಜನರು ಸಿಲುಕಿದ್ದಾರೆ. ಈ ಹಿನ್ನೆಲೆ ಪಾಕಿಸ್ತಾನ ಸೇನೆಯು ಪ್ರವಾಹ ಪೀಡಿತ ಜಿಲ್ಲೆಗಳಾದ ಬಲೂಚಿಸ್ತಾನ್, ಸಿಂಧ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಖೈಬರ್ ಪಖ್ತುಂಕ್ವಾದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಬಲೂಚಿಸ್ತಾನವು "ಜುಲೈ 1 ರಿಂದ ಪಾಕಿಸ್ತಾನದಲ್ಲಿ ಸುರಿದ ಶೇ.467ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ತಿಳಿಸಿದೆ. ಇದರಿಂದ ದೇಶದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಬಲೂಚಿಸ್ತಾನದಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ 29 ಜಿಲ್ಲೆಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ವಿಶೇಷವಾಗಿ ಲಾಸ್ಬೆಲಾ, ಕೆಚ್, ಕ್ವೆಟ್ಟಾ, ಸಿಬ್ಬಿ, ಖುಜ್ದಾರ್ ಮತ್ತು ಕೊಹ್ಲು ಮಳೆ ಹೊಡೆತಕ್ಕೆ ಹೈರಾಣಾಗಿವೆ.

Recommended Video

ಕ್ಯಾಪ್ಟನ್ ಕೂಲ್ ದಾಖಲೆ ಮುರಿದ ಕೌರ್ | OneIndia Kannada

English summary
Pakistan army helicopter carrying senior officers goes missing at Balochistan. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X