ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ನ ಜಲಾಂತರ್ಗಾಮಿ ಕ್ಷಿಪಣಿ ಬಾಬರ್-III ಯಶಸ್ವಿ

|
Google Oneindia Kannada News

ಇಸ್ಲಾಮಾಬಾದ್, ಜನವರಿ 10: ಜಲಾಂತರ್ಗಾಮಿಯಿಂದ (ಸಬ್ ಮರೀನ್) ಉಡಾಯಿಸಬಹುದಾದ ಪಾಕಿಸ್ತಾನದ ಮೊದಲ ಕ್ಷಿಪಣಿ ಬಾಬರ್-III ಪರೀಕ್ಷೆ ಯಶಸ್ವಿಯಾಗಿದೆ. ಇದು 450 ಕಿ.ಮೀ ವರೆಗೆ ತಲುಪುವ ಶಕ್ತಿ ಹೊಂದಿದೆ. ಕ್ಷಿಪಣಿ ಯಶಸ್ಸಿನ ಹಿಂದೆ ಕೆಲಸ ಮಾಡಿರುವ ಎಲ್ಲರಿಗೂ ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಅಭಿನಂದನೆ ಸಲ್ಲಿಸಿದ್ದಾರೆ.

ಹಿಂದೂ ಮಹಾಸಾಗರದ ಅಜ್ಞಾತ ಸ್ಥಳವೊಂದರಿಂದ ಕ್ಷಿಪಣಿ ಪ್ರಯೋಗ ನಡೆಸಲಾಯಿತು ಎಂದು ಪಾಕಿಸ್ತಾನ ರೇಡಿಯೋ ವರದಿ ಮಾಡಿದೆ. ನೀರಿನಾಳದಿಂದ ಇದನ್ನು ಉಡಾಯಿಸಿದ್ದು, ನಿರ್ದಿಷ್ಟ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಬಾಬರ್-III ಸಮುದ್ರದಿಂದ ಬಳಸುವಂಥ ಬಾಬರ್-II ಮಾದರಿಯ ಕ್ಷಿಪಣಿ. ಇನ್ನು ಬಾಬರ್-II ನೆಲದಿಂದ ಉಡಾಯಿಸುವಂಥ ಕ್ಷಿಪಣಿ, ಡಿಸೆಂಬರ್ ಕೊನೆಯಲ್ಲಿ ಅದರ ಪರೀಕ್ಷೆ ಮಾಡಿತ್ತು ಪಾಕಿಸ್ತಾನ.[ಸ್ವದೇಶಿ ನಿರ್ವಿುತ ಅಗ್ನಿ 5 ಕ್ಷಿಪಣಿ ಯಶಸ್ವಿ ಪರೀಕ್ಷೆ]

Pak test-fires submarine-launched cruise missile

ಈಗ ಪರೀಕ್ಷೆ ಮಾಡಿರುವ ಬಾಬರ್-III ಅತ್ಯುನ್ನತ ತಂತ್ರಜ್ಞಾನವನ್ನು ಹೊಂದಿದೆ. ನೀರಿನಾಳದಿಂದ ನಿಯಂತ್ರಿಸಬಹುದಾದ ಮತ್ತು ಆಧುನಿಕ ಸೂಚನೆಗಳನ್ನು ಅನುಸರಿಸುವ, ಜಾಗತಿಕ ಮಟ್ಟದಲ್ಲಿ ಯಾವ ಸ್ಥಳವನ್ನು ಬೇಕಾದರೂ ತಲುಪಬಹುದಾದ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ. ಕ್ಷಿಪಣಿ ಯಶಸ್ವಿಯಾದ ಬಗ್ಗೆ ಅಲ್ಲಿನ ಪತ್ರಿಕೆ ಡಾನ್ ವರದಿ ಮಾಡಿದೆ.

English summary
Pakistan on Monday successfully test-fired its first ever submarine-launched cruise missile Babur-III, Director General Inter-Services Public Relations (ISPR) Maj Gen Asif Ghafoor said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X