Imran Khan Arrest: ಮಾಜಿ ಪ್ರಧಾನಿಗೆ 5 ವರ್ಷ ಅಮಾನತು ಶಿಕ್ಷೆ!

ಪಾಕಿಸ್ತಾನದ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ, ಅದರಲ್ಲೂ ಪಾಕಿಸ್ತಾನದ ರಾಜಕಾರಣಿಗಳ ಸ್ಥಿತಿ ಇನ್ನೂ ಕೆಟ್ಟದಾಗಿದೆ. ಪಾಕ್‌ನ ಮಾಜಿ ಪ್ರಧಾನಿಗಳ ಪೈಕಿ ಬಹುತೇಕರು ಕಂಬಿ ಎಣಿಸಿದ್ದು, ಇಮ್ರಾನ್ ಖಾನ್ ಕೂಡ ಜೈಲು ಸೇರಿದ್ದಾರೆ. ಇಮ್ರಾನ್ ವಿರುದ್ಧ ತೋಶಾಖಾನಾ ಕರಪ್ಷನ್ ಕೇಸ್ ಸಾಬೀತಾಗಿದ್ದು, 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇದೇ ವೇಳೆ ಇಮ್ರಾನ್ ಖಾನ್‌ಗೆ ಮತ್ತೊಂದು ಶಾಕ್ ಕೊಟ್ಟಿದೆ ಪಾಕಿಸ್ತಾನ ಚುನಾವಣಾ ಆಯೋಗ.

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಈಗಾಗಲೇ ಜೈಲು ಸೇರಿ ಎರಡು ದಿನಗಳನ್ನ ಅಲ್ಲೇ ಕಳೆದಿದ್ದಾರೆ. ಇದೇ ಹೊತ್ತಲ್ಲಿ ಪಾಕಿಸ್ತಾನ ಚುನಾವಣಾ ಆಯೋಗ ಕೂಡ ನಿರ್ಧಾರ ಪ್ರಕಟಿಸಿದ್ದು, 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಇಮ್ರಾನ್ ಖಾನ್‌ಗೆ ಆಘಾತ ನೀಡಿದೆ. 5 ವರ್ಷ ಇಮ್ರಾನ್ ರಾಜಕೀಯದಲ್ಲಿ ತೊಡಗಿಸಿಕೊಳ್ಳದಂತೆ ಇಮ್ರಾನ್ ಅನರ್ಹವಾಗಿದ್ದು, ಈ ಮೂಲಕ ಪಾಕ್ ಮಾಜಿ ಪ್ರಧಾನಿ ರಾಜಕೀಯ ಜೀವನಕ್ಕೆ ಹಾಲಿ ಸರ್ಕಾರವು ಪರೋಕ್ಷವಾಗಿ ಕೊನೇ ಮೊಳೆ ಹೊಡೆದಿದೆ. ನಾಳೆ ಸಂಸತ್ ವಿಸರ್ಜನೆಗೆ ತಯಾರಿ ನಡೆಸಿರುವ ಹೊತ್ತಲ್ಲೇ ಖಾನ್ ವಿರುದ್ಧ ಈ ತೀರ್ಮಾನ ಪ್ರಕಟವಾಗಿದೆ.

Pak medias said that Election Commission of Pakistan disqualifies former PM Imran Khan for 5 years

ಜೈಲಿನಲ್ಲಿ ಇಮ್ರಾನ್ ಖಾನ್‌ಗೆ ಹಿಂಸೆ?

ಇನ್ನು ಜೈಲು ಪಾಲಾಗಿರುವ ಇಮ್ರಾನ್ ಖಾನ್‌ಗೆ ಬೇಕು ಅಂತಲೇ ಹಿಂಸೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಭ್ರಷ್ಟಾಚಾರ ಕೇಸ್‌ನಲ್ಲಿ ಅಟಕ್‌ ಜೈಲು ಸೇರಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ತಿಗಣೆ ಕಾಟ ಇರುವ ಮತ್ತು ತೆರೆದ ಶೌಚಾಲಯದ, ಅತಿ ಚಿಕ್ಕದಾದ ಕೊಠಡಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇಮ್ರಾನ್‌ ಖಾನ್‌ ಕಾನೂನು ಹೋರಾಟಕ್ಕೆ ಸಂಬಂಧಿಸಿ ಸಹಿ ಪಡೆಯಲು ವಕೀಲ ನಯೀಮ್‌ ಹೈದರ್‌ ಪಂಜೋತಾ ಜೈಲಿಗೆ ತೆರಳಿದ್ದರು. ಈ ವೇಳೆ 45 ನಿಮಿಷಗಳ ಕಾಲ ಭೇಟಿಯಾಗಿ ಬಂದ ಪಂಜೋತಾ, ಜೈಲಿನಲ್ಲಿ ಇಮ್ರಾನ್‌ಗೆ ಒದಗಿರುವ ಸ್ಥಿತಿ ಬಗ್ಗೆ ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಳೆ ಪಾಕ್ ಸಂಸತ್ ವಿಸರ್ಜನೆಗೆ ಮುಹೂರ್ತ?

ಆಗಸ್ಟ್‌ 9ರಂದು ಸಂಸತ್‌ ವಿಸರ್ಜನೆ ಮಾಡುವುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಕೆಲ ದಿನಗಳ ಹಿಂದೆ ಮಾಹಿತಿ ನೀಡಿದ್ದರು. ಸಂಸತ್ ಕೆಳಮನೆ ಅವಧಿ ಮುಕ್ತಾಯಕ್ಕೆ 3 ವರ್ಷ ಬಾಕಿ ಇದೆ ಆದರೂ ವಿಸರ್ಜನೆ ಮಾಡುವುದಾಗಿ ಪಾಕ್ ಹಾಲಿ ಪಿಎಂ ಘೋಷಣೆ ಮಾಡಿದ್ದಾರೆ. ವಿಸರ್ಜನೆ ಮಾಡಿದ 90 ದಿನದ ಒಳಗೆ ಚುನಾವಣೆ ನಡೆವ ನಿರೀಕ್ಷೆ ಇದೆ. ಆದರೆ ಮತ್ತೊಂದು ಮೂಲ ಹೇಳುವ ಪ್ರಕಾರ ಪಾಕಿಸ್ತಾನದಲ್ಲಿ ಚುನಾವಣೆ ಇನ್ನೂ ತಡವಾಗುವ ನಿರೀಕ್ಷೆ ಇದೆ. ಹೀಗೆ ಗೊಂದಲದ ನಡುವೆ ನಾಳೆ ಪಾಕಿಸ್ತಾನ ಸಂಸತ್ ವಿಸರ್ಜನೆಯಾಗಲಿದೆ ಎನ್ನಲಾಗಿದೆ.

Pak medias said that Election Commission of Pakistan disqualifies former PM Imran Khan for 5 years

ಹಿಂಸಾಚಾರದ ತವರಲ್ಲಿ ಮತ್ತೆ ಹಿಂಸೆ?
ಪಾಕಿಸ್ತಾನ ಈಗಾಗಲೇ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಇಮ್ರಾನ್ ಖಾನ್ ಬಂಧನದ ಬಳಿಕ ತಿಕ್ಕಾಟ ಜೋರಾಗಿದೆ. ಸಂಸತ್‌ ವಿಸರ್ಜನೆ ಮಾಡುವ ತೀರ್ಮಾನ ಕೈಗೊಂಡು ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಸಂಸತ್‌ ವಿಸರ್ಜನೆ ಬಗ್ಗೆ ಪ್ರಧಾನಿ ಶೆಹಬಾಜ್‌ ಅಧ್ಯಕ್ಷ ಆರೀಫ್ ಅಲವಿಗೆ ಆಗಸ್ಟ್‌ 9ಕ್ಕೆ ಅಂದರೆ ನಾಳೆಯೇ ಅಧಿಸೂಚನೆ ಕಳುಹಿಸುವ ಸಾಧ್ಯತೆಯು ಇದೆ. ಪಾಕಿಸ್ತಾನದ ಸಂವಿಧಾನದ ಪ್ರಕಾರ ಪಾಕ್ ಪ್ರಧಾನಿ ಕಳುಹಿಸಿದ ಅಧಿಸೂಚನೆಗೆ ರಾಷ್ಟ್ರಪತಿಯ ಮುದ್ರೆ ಬಿದ್ದ ತಕ್ಷಣ ಸಂಸತ್‌ ವಿಸರ್ಜನೆಯಾಗಲಿದೆ. ಆದರೆ ಚುನಾವಣೆಯಲ್ಲಿ ಇಮ್ರಾನ್ ಸ್ಪರ್ಧೆ ಮಾಡಲು ಆಗದೇ ಇರುವುದು ಚುನಾವಣಾ ಆಯೋಗದ ನಿರ್ಧಾರದ ಮೂಲಕ ಗ್ಯಾರಂಟಿ ಆಗಿದೆ.

ಹೀಗೆ ಪಾಕಿಸ್ತಾನದ ಮಾಜಿ ಪ್ರಧಾನಿಗೆ ಭೀಕರ ಪರಿಸ್ಥಿತಿ ಎದುರಾಗಿದೆ. ಈವರೆಗೂ ಪಾಕ್ ಪ್ರಧಾನಿಗಳ ಪೈಕಿ ಅನೇಕರು ಜೈಲು ಸೇರಿದ್ದಾರೆ. ಅವರ ಸಾಲಿಗೆ ಇಮ್ರಾನ್ ಈಗಾಗಲೇ ಸೇರಿದ್ದರು. ಮೇ ತಿಂಗಳಲ್ಲೇ ಮೊದಲ ಬಾರಿ ಇಮ್ರಾನ್ ಖಾನ್‌ಗೆ ಜೈಲಿನ ದರ್ಶನವಾಗಿದೆ. ಇದೀಗ ಮತ್ತೊಮ್ಮೆ ಇಮ್ರಾನ್ ಜೈಲು ಸೇರಿದ್ದು, ಈ ಬಾರಿ ಮೂರು ವರ್ಷಗಳ ಶಿಕ್ಷೆಗೂ ಗುರಿಯಾಗಿದ್ದಾರೆ. ಜೊತೆಗೆ ತಾವು ಚುನಾವಣೆಗೆ ಸ್ಪರ್ಧಿಸಲು ಆಗದ ಪರಿಸ್ಥಿತಿಗೆ ಖಾನ್ ಸಿಲುಕಿದ್ದು, ಇಮ್ರಾನ್ ಅಭಿಮಾನಿಗಳ ಆಕ್ರೋಶದ ಬೆಂಕಿ ಮತ್ತೊಮ್ಮೆ ಭುಗಿಲೇಳುವ ಭಯ ಪಾಕ್ ಜನರನ್ನ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+