ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್ ವಿವಿಯ ಕೋವಿಡ್ ಲಸಿಕೆ; ಹೊಸ ಸಂಗತಿ ಬಹಿರಂಗ

|
Google Oneindia Kannada News

ರಿಯೋ ಡಿ ಜನೈರೋ, ಅಕ್ಟೋಬರ್ 26: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ 19 ಲಸಿಕೆ ಯುವ ಮತ್ತು ವೃದ್ಧರಿಗೂ ಉತ್ತಮ ಫಲಿತಾಂಶ ನೀಡಲಿದೆ ಎಂದು ಆಸ್ಟ್ರಾಜೆನೆಕಾ ಹೇಳಿದೆ. ಈಗಾಗಲೇ ಲಸಿಕೆಯ 3ನೇ ಹಂತದ ಪ್ರಯೋಗ ನಡೆಯುತ್ತಿದೆ.

ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳು ಕೋವಿಡ್ 19 ಲಸಿಕೆ ಅಭಿವೃದ್ಧಿಪಡಿಸುತ್ತಿವೆ. ಈ ಲಸಿಕೆಯ ಪ್ರಯೋಗ ಅಮೆರಿಕ, ಯುಕೆ, ಬ್ರೆಜಿಲ್, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಈ ಬಗ್ಗೆ ಸೋಮವಾರ ಆಸ್ಟ್ರಾಜೆನೆಕಾ ಪ್ರಕಟಣೆಯೊಂದನ್ನು ಹೊರಡಿಸಿದೆ.

 ಅಮೆರಿಕದ ಲಸಿಕೆ ಪ್ರಯೋಗ ಮತ್ತೆ ಶುರು, ಜನವರಿಗೆ ಲಭ್ಯ! ಅಮೆರಿಕದ ಲಸಿಕೆ ಪ್ರಯೋಗ ಮತ್ತೆ ಶುರು, ಜನವರಿಗೆ ಲಭ್ಯ!

ಈ ಲಸಿಕೆ ಯುವಕರು, ವೃದ್ಧರಲ್ಲಿ ಒಂದೇ ಮಾದರಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೋವಿಡ್‌ ಸೋಂಕಿನಿಂದಾಗಿ ಮುಕ್ತವಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಆಸ್ಟ್ರಾಜೆನೆಕಾ ಹೇಳಿದೆ.

ಶೇ 61ರಷ್ಟು ಭಾರತೀಯರಿಗೆ ಕೊರೊನಾ ಲಸಿಕೆ ಬಗ್ಗೆಯೇ ಸಂದೇಹ!: ಸಮೀಕ್ಷೆಶೇ 61ರಷ್ಟು ಭಾರತೀಯರಿಗೆ ಕೊರೊನಾ ಲಸಿಕೆ ಬಗ್ಗೆಯೇ ಸಂದೇಹ!: ಸಮೀಕ್ಷೆ

Oxford Covid-19 Vaccine Prompting Immune Response In Young And Old

ಲಸಿಕೆಯ ಪ್ರಯೋಗಕ್ಕೆ ಒಳಗಾಗಿರುವ ಸ್ವಯಂ ಸೇವಕರ ವರದಿಯ ಆಧಾರದ ಮೇಲೆಯೇ ಈ ಮಾಹಿತಿ ತಿಳಿದುಬಂದಿದೆ. AZD1222 ಎಂಬ ಸ್ವಯಂ ಸೇವಕನ ವರದಿಯ ಅನ್ವಯ ರೋಗ ನಿರೋಧಕ ಶಕ್ತಿ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಕೋವಿಡ್ ಭೀತಿಯ ನಡುವೆ ಫ್ಲೂ ಲಸಿಕೆ ಪಡೆದುಕೊಳ್ಳಲು ಜನರ ದೌಡು ಕೋವಿಡ್ ಭೀತಿಯ ನಡುವೆ ಫ್ಲೂ ಲಸಿಕೆ ಪಡೆದುಕೊಳ್ಳಲು ಜನರ ದೌಡು

ವೃದ್ಧರ ಮೇಲೆ ಈ ಲಸಿಕೆ ಪ್ರಯೋಗ ಮಾಡಿದಾಗಲೂ ಒಂದೇ ಮಾದರಿ ಫಲಿತಾಂಶ ಬಂದಿದೆ ಎಂದು ಹೇಳಿದೆ. ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಲಸಿಕೆ 2021ರ ಜನವರಿಯಲ್ಲಿ ಬರಬಹುದು ಎಂಬ ನಿರೀಕ್ಷೆ ಇದೆ.

ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಲಸಿಕೆ ಅಭಿವೃದ್ಧಿಯಲ್ಲಿ ಭಾರತದ ಪುಣೆಯ ಸಿರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ)ದೊಂದಿಗೆ ಸಹ ಕೈ ಜೋಡಿಸಿದೆ.

English summary
Oxford Covid-19 vaccine candidate prompts an immune response in both young and old adults. Vaccine 3rd phase of clinical trials running now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X