ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾದಕವಸ್ತು ನಿಷೇಧ, ತಾಲಿಬಾನ್ ಪ್ರತಿಜ್ಞೆ ನಡುವೆಯೂ ಮುಂದುವರೆದ ಅಫೀಮು ಕೃಷಿ

|
Google Oneindia Kannada News

ಕಾಬೂಲ್, ನವೆಂಬರ್ 9: ಅಫ್ಘಾನಿಸ್ತಾನದಲ್ಲಿ ಮಾದಕವಸ್ತು ವ್ಯಾಪಾರವನ್ನು ನಿರ್ಮೂಲನೆ ಮಾಡುವ ಮತ್ತು ಅಫೀಮು ಉತ್ಪಾದನೆಯನ್ನು ನಿಷೇಧಿಸುವ ತಾಲಿಬಾನ್‌ನ ಕ್ರಮವು ಹಲವಾರು ರಂಗಗಳಲ್ಲಿ ಸವಾಲುಗಳನ್ನು ಎದುರಿಸಿದೆ. ಅಫ್ಘಾನಿಸ್ತಾನ ಅಫೀಮಿನ ಅತಿದೊಡ್ಡ ಉತ್ಪಾದಕ ದೇಶಗಳಲ್ಲಿ ಒಂದಾಗಿದೆ. ಆದರೆ ಪರ್ಯಾಯ ಜೀವನೋಪಾಯದ ಕೊರತೆಯಿಂದಾಗಿ ತಾಲಿಬಾನ್‌ನ ಎಚ್ಚರಿಕೆಯ ಹೊರತಾಗಿಯೂ ರೈತರು ಅಫೀಮು ಕೃಷಿಯನ್ನು ಮುಂದುವರೆಸಿದ್ದಾರೆ. ಅಕ್ರಮ ಅಫೀಮು ವ್ಯಾಪಾರ ಅಫ್ಘಾನಿಸ್ತಾನದ ಆರ್ಥಿಕತೆಯೊಂದಿಗೆ ಹೆಣೆದುಕೊಂಡಿದೆ. ತಾಲಿಬಾನ್ ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಆಗಸ್ಟ್ 15 ರಂದು ಅಧಿಕಾರಕ್ಕೆ ಬಂದ ಕೂಡಲೇ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್, ಹೊಸ ಸರ್ಕಾರ ದೇಶದಲ್ಲಿ ಮಾದಕವಸ್ತು ವ್ಯಾಪಾರವನ್ನು ಅನುಮತಿಸುವುದಿಲ್ಲ ಎಂದು ಹೇಳಿದರು. "ನಾವು ಮಾದಕ ದ್ರವ್ಯಗಳ ವಿರುದ್ಧವಾಗಿದ್ದೇವೆ ಮತ್ತು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಮಾದಕ ದ್ರವ್ಯಗಳ ಉತ್ಪಾದನೆಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇಡೀ ಜಗತ್ತು ರೈತರನ್ನು ಸಬಲೀಕರಣಗೊಳಿಸಲು ಮತ್ತು ಅವರ ಜೀವನೋಪಾಯಕ್ಕಾಗಿ ಅವರಿಗೆ ಪರ್ಯಾಯವನ್ನು ಒದಗಿಸಲು ನಮಗೆ ಸಹಾಯ ಮಾಡಿದಾಗ ಮಾತ್ರ ಇದು ಸಾಧ್ಯ" ಎಂದು ಅವರು ಹೇಳಿದರು.

ಕಳೆದ ವರ್ಷದಲ್ಲಿ ಅಫೀಮು ಕೃಷಿಯು ಶೇ.37 ರಷ್ಟು ಏರಿಕೆಯಾಗಿದೆ ಮತ್ತು ಇದು ದೇಶದಾದ್ಯಂತ ಆದಾಯದ ಪ್ರಮುಖ ಮೂಲವಾಗಿದೆ. ಅಫೀಮಿನಿಂದ ಉತ್ಪಾದಿಸುವ ಔಷಧಗಳು ಮಿಲಿಯನ್ ಡಾಲರ್ ಉದ್ಯಮವಾಗಿದೆ. ವಿಶ್ವಸಂಸ್ಥೆಯ ಪ್ರಕಾರ, ಅಫೀಮು ಕೊಯ್ಲು 2019 ರಲ್ಲಿ 1,20,000 ಜನರಿಗೆ ಉದ್ಯೋಗವನ್ನು ಒದಗಿಸಿದೆ. ಆದಾಗ್ಯೂ ಅಫೀಮು ಉತ್ಪಾದನೆಯು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಹದಗೆಟ್ಟಿದೆ. ಆಫ್ಘಾನಿಸ್ತಾನದಲ್ಲಿ ಪ್ರಮುಖ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ತಾಲಿಬಾನ್ ವಿದೇಶಿ ನೆರವನ್ನು ತಡೆಯುವ ಬೆದರಿಕೆಯನ್ನು ಹಾಕಿದೆ.

Opium cultivation continues even as Taliban vows crackdown on Afghanistans drug trade

"ನನಗೆ ಇತರ ಆಲೂಗಡ್ಡೆ, ಈರುಳ್ಳಿ ಮತ್ತು ದಾಳಿಂಬೆ ತೋಟಗಳಿವೆ. ಆದರೆ ಗಡಿಗಳನ್ನು ಮುಚ್ಚಿದ್ದರಿಂದ ಇಡೀ ಇಳುವರಿ ವ್ಯರ್ಥವಾಗಿದೆ. ಇದು ಅಂತಾರಾಷ್ಟ್ರೀಯ ಖರೀದಿದಾರರನ್ನು ತಲುಪಲು ಸಾಧ್ಯವಿಲ್ಲ. ಆದರೆ ನಾನು ಅಫೀಮು ಕೃಷಿ ಮಾಡುವಾಗ, ಖರೀದಿದಾರರು ಅದನ್ನು ನಗದು ರೂಪದಲ್ಲಿ ಖರೀದಿಸಲು ನನ್ನ ಮನೆಗೆ ಬರುತ್ತಾರೆ. ಅದನ್ನು ಮಾರಾಟ ಮಾಡಲು ನಾವು ಮಾರುಕಟ್ಟೆಗೆ ಹೋಗಬೇಕಾಗಿಲ್ಲ. ಇದರಿಂದ ಲಾಭವೂ ಇದೆ" ಎಂದು ಆಫ್ಘಾನ್ ರೈತ ಹಾಜಿ ಮುಹಮ್ಮದ್ ಹಾಶಿಮ್ ಹೇಳುತ್ತಾರೆ. ಅಫೀಮು ಉತ್ಪಾದನೆಯು ದೇಶದ ಬಹುಪಾಲು ಭಾಗವನ್ನು ಉಳಿಸಿಕೊಂಡಿದ್ದರೂ ಸಹ ಆಫ್ಘನ್ ಸಮಾಜದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ.

ಮೇ 2020 ರ ವರದಿಯಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು "ಒಟ್ಟಾರೆ ತಾಲಿಬಾನ್ ವಾರ್ಷಿಕ ಸಂಯೋಜಿತ ಆದಾಯವು 300 ದಶಲಕ್ಷ ಡಾಲರ್‌ನಿಂದ ವರ್ಷಕ್ಕೆ 1.5 ಬಿಲಿಯನ್ ಡಾಲರ್‌ವರೆಗೆ ಇದೆ" ಎಂದು ಅಂದಾಜಿಸಿದೆ. 2019ರ ಅಂಕಿ ಅಂಶಗಳು ಸ್ವಲ್ಪ ಕಡಿಮೆ ಇದ್ದರೂ, "ತಾಲಿಬಾನ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದು ಮತ್ತು ನಗದು ಬಿಕ್ಕಟ್ಟನ್ನು ಅನುಭವಿಸುತ್ತಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯ" ಎಂದೂ ಅಧಿಕಾರಿಗಳು ಹೇಳಿದ್ದಾರೆ.

Opium cultivation continues even as Taliban vows crackdown on Afghanistans drug trade

Recommended Video

ವಿರಾಟ್ & ರವಿಶಾಸ್ತ್ರಿ ಜೋಡಿ ಕ್ರಿಕೆಟ್ ಇತಿಹಾಸದಲ್ಲಿ ಸಾಧಿಸಿದ್ದೇನು? | Oneindia Kannada

ತಾಲಿಬಾನ್ ನಿಧಿಯ ಪ್ರಾಥಮಿಕ ಮೂಲವೆಂದರೆ ಮಾದಕವಸ್ತು ವ್ಯಾಪಾರ ಎಂದು 2 ದಶಕಗಳಿಂದ ಹಲವು ವರದಿಗಳು ತೋರಿಸಿವೆ. ಇನ್ನೊಂದೆಡೆ, ಇತ್ತೀಚಿನ ವರ್ಷಗಳಲ್ಲಿ ಅವರ ಆದಾಯವು ಕಡಿಮೆಯಾಗಿದ್ದು, ಇದಕ್ಕೆ ಕಾರಣ ಪಾಪ್ಪಿ (ಅಫೀಮು ನೀಡುವ ಒಂದು ಸಸ್ಯ) ಸಸ್ಯ ಬೆಳೆಯುವಿಕೆ ಕಡಿಮೆಯಾಗಿರುವುದು ಹಾಗೂ ಆದಾಯ ಕಡಿಮೆಯಾಗಿರುವುದು ಮತ್ತು ಅಭಿವೃದ್ಧಿ ಯೋಜನೆಗಳಿಂದ ಕಡಿಮೆ ತೆರಿಗೆಯ ಆದಾಯ ಹಾಗೂ ಆಡಳಿತ ಯೋಜನೆಗಳ ಮೇಲಿನ ಖರ್ಚಿನಿಂದಾಗಿ ಬಳಲುತ್ತಿದೆ. ಹೀಗಾಗಿ ಆದಾಯದ ಮೂಲವಾಗಿರುವ ಅಫೀಮು ಕೃಷಿ ಆಫ್ಘಾನಿಸ್ತಾನದಲ್ಲಿ ಸದ್ದಿಲ್ಲದೇ ಮುಂದುವರೆದಿದೆ. ಅಫ್ಘಾನಿಸ್ತಾನದಲ್ಲಿ ಮಾದಕವಸ್ತು ವ್ಯಾಪಾರವನ್ನು ನಿರ್ಮೂಲನೆ ಮಾಡುವ ಮತ್ತು ಅಫೀಮು ಉತ್ಪಾದನೆಯನ್ನು ನಿಷೇಧಿಸುವ ತಾಲಿಬಾನ್‌ ಆದೇಶದ ಮಧ್ಯೆ ಅಫೀಮು ಕೃಷಿ ನಡೆಯುತ್ತಿದೆ.

English summary
The Taliban's move to eradicate the drug trade in Afghanistan and ban opium production has faced challenges on several fronts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X