ಅಲಿ ಖಮೇನಿ ಸಾವಿಗೆ ಸೇಡು, ಇರಾನ್‌ನ ನೂತನ ಸರ್ವಾಧಿಕಾರಿಗೆ ಜನರ ಆಗ್ರಹ | Operation Roaring Lion
ಇಸ್ರೇಲ್ ಸೇನೆ ಪಕ್ಕಾ ಪ್ಲಾನ್ ಮಾಡಿ ನಡೆಸಿದ ಭೀಕರ ದಾಳಿಯಲ್ಲಿ ಇರಾನ್ ಸರ್ವಾಧಿಕಾರಿ ಖಮೇನಿ ಕಥೆ ಮುಗಿದು ಹೋಗಿದೆ. ಗುಟ್ಟಾದ ಸ್ಥಳದಲ್ಲಿ ಇದ್ದರೂ ಅಲಿ ಖಮೇನಿ ಮಾತ್ರ ಜೀವ ಉಳಿಸಿಕೊಳ್ಳಲು ಆಗಿಲ್ಲ, ಹಲವು ತಿಂಗಳಿಂದ ಪಕ್ಕಾ ಪ್ಲಾನ್ ಮಾಡಿದ್ದ ಇಸ್ರೇಲ್ ಸೇನೆ ದಿಢೀರ್ ನುಗ್ಗಿ ದಾಳಿ ನಡೆಸಿದೆ. ಪರಿಣಾಮ ಸುಮಾರು 3 ದಶಕ ಎಂದರೆ 30 ವರ್ಷಗಳಿಂದ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳ ಪಾಲಿಗೆ ವಿಲನ್ ಆಗಿದ್ದ ಅಲಿ ಖಮೇನಿ ಕಥೆ ಮುಗಿದು ಹೋಗಿದೆ. ಆದರೆ ಇದೇ ಸಮಯದಲ್ಲಿ ಇರಾನ್ ನೆಲದಲ್ಲಿ ಜನರಿಂದ ಆಕ್ರೋಶ ಕೂಡ ಸ್ಫೋಟವಾಗಿದ್ದು, ಸೇಡಿಗೆ ಸೇಡು ಎಂದು ತೊಡೆ ತಟ್ಟಿದ್ದಾರೆ ಇರಾನ್ ಜನ.
ಖಮೇನಿ ಇರಾನ್ ಸರ್ವಾಧಿಕಾರಿಯಾಗಿ, ಎಲ್ಲಾ ಹಿಡಿತವನ್ನೂ ತನ್ನ ಬಳಿಯೇ ಇಟ್ಟುಕೊಂಡಿದ್ದ ವ್ಯಕ್ತಿ. 1939ರಲ್ಲಿ ಇರಾನ್‌ನ ಮಶ್ಹದ್ ನಗರದಲ್ಲಿ ಜನಿಸಿದ ಖಮೇನಿ, ಸ್ಥಳೀಯ ಧಾರ್ಮಿಕ ನಾಯಕ ಜವಾದ್ ಖಮೇನಿಯ 2ನೇ ಪುತ್ರ. ಹೀಗಿದ್ಧಾಗ 1989ರ ನಂತರ ಇರಾನ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಇದೇ ಖಮೇನಿ, ಮುಂದೆ ನೋಡ ನೋಡುತ್ತಲೇ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳನ್ನು ಎದುರು ಹಾಕಿಕೊಂಡು ಶತ್ರು ಪಡೆಯನ್ನೇ ಹುಟ್ಟು ಹಾಕಿದ್ದು ಘರ್ಷಣೆಗೆ ಕಾರಣ ಆಗಿತ್ತು. ಅಮೆರಿಕ ಕೂಡ ಈ ವಿಚಾರದಲ್ಲಿ ಪದೇ ಪದೇ ಪ್ರಯತ್ನ ಮಾಡುತ್ತಾ, ಖಮೇನಿ ಹತ್ಯೆಗೆ ಯತ್ನಿಸಿತ್ತು. ಆದರೆ ಈ ವಿಚಾರದಲ್ಲಿ ಈಗ ಇಸ್ರೇಲ್ ಯಶಸ್ಸು ಕಂಡಿದೆ.

ಖಮೇನಿ ಸಾವಿಗೆ ಸೇಡು ಗ್ಯಾರಂಟಿ?
ಇರಾನ್ ಇದೀಗ ನಡೆಸುತ್ತಿರುವ ದಾಳಿ ಬಗ್ಗೆ ಅಲ್ಲಿನ ಪ್ರಜೆಗಳಿಗೆ ತೃಪ್ತಿ ಇಲ್ಲ, ಬದಲಾಗಿ ಇನ್ನೂ ದೊಡ್ಡ ಮಟ್ಟದಲ್ಲಿ ದಾಳಿ ಮಾಡಿ ಹಾಗೂ ಸೇಡಿ ಸೇಡು ತೀರಿಸಿಕೊಳ್ಳಿ ಎಂದು ಇರಾನ್‌ನಲ್ಲಿ ಒಂದು ಬಣವು ಆಗ್ರಹ ಮಾಡುತ್ತಿದೆ. ಇದೇ ಸಮಯದಲ್ಲಿ ಅದೇ ಇರಾನ್ ದೇಶದ ಮತ್ತಷ್ಟು ಪ್ರಜೆಗಳು ಖಮೇನಿ ಸಾವು ಆಗಿದ್ದು ಆಯ್ತು, ಇನ್ನಾದರೂ ಶಾಂತಿ ನೆಲೆಸಲಿ ಎಂದು ಆಗ್ರಹ ಮಾಡುತ್ತಿದ್ದಾರೆ. ಹೀಗಾಗಿ ಇರಾನ್ ನೆಲದಲ್ಲೇ ಗೊಂದಲ ಮೂಡಿದ್ದು, ಆಂತರಿಕ ಪ್ರತಿಭಟನೆ ಭೀತಿ ಕೂಡ ಇದೀಗ ಆವರಿಸಿದೆ. ಇರಾನ್ ಸೇನೆ ಇದೀಗ ಕುವೈತ್, ಯುಎಇ, ಕತಾರ್ ಸೇರಿದಂತೆ ಹಲವು ದೇಶಗಳ ಮೇಲೆ ದಾಳಿ ನಡೆಸುತ್ತಿದ್ದು, ಈಗಾಗಲೇ ಅಪಾರ ಪ್ರಮಾಣದ ಹಾನಿ ಆಗಿರುವ ಬಗ್ಗೆ ವರದಿಯಾಗಿದೆ.












Click it and Unblock the Notifications