ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಬುಲೆಟ್ ಟ್ರೇನ್, ಯಾಕೆ? ಏತಕ್ಕೆ?

|
Google Oneindia Kannada News

ಭಾರತದ ರೈಲ್ವೆಯಲ್ಲಿ ಮಹತ್ತರ ಬದಲಾವಣೆ ಪರ್ವ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ನಡುವೆ ನಡೆದ ಒಪ್ಪಂದ ಬುಲೆಟ್ ರೈಲಿನ ಹೊಸ ಸಾಧ್ಯತೆಗಳನ್ನು ದೇಶದ ಮುಂದೆ ಇರಿಸಿದೆ.

ಹೈಸ್ಪೀಡ್ ಬುಲೆಟ್ ಟ್ರೇನ್ ಗೆ ಸಂಬಂಧಿಸಿ ಭಾರತ ಮತ್ತು ಜಪಾನ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಕೂಡಾ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಆರು ವರ್ಷಗಳ ನಂತರ ದೆಹಲಿ-ಅಹಮದಾಬಾದ್ ನಡುವೆ ಬುಲೆಟ್ ರೈಲಿನಲ್ಲಿ ಸಂಚಾರ ಮಾಡಬಹುದು.

ಭಾರತ-ಜಪಾನ್ ಸಂಯೋಜನೆಯಲ್ಲಿ ರೈಲ್ವೆಗೆ ಹೊಸ ಸ್ಪರ್ಶ

* ಭಾರತದ ರೈಲ್ವೆ ಇಲಾಖೆಯ ಎಲ್ಲ ಘಟಕಗಳು( ಆರ್ ಡಿ ಎಸ್ ಒ, ಆರ್ ಟಿ ಆರ್ ಐ) ಯೋಜನೆ ಸಾಕಾರಕ್ಕೆ ದುಡಿಯಲಿವೆ.
* ಪರಿಸರ ಸಂರಕ್ಷಣೆಯೊಂದಿಗೆ ಯೋಜನೆಯನ್ನು ಗುರಿ ತಲುಪಿಸುವ ಧ್ಯೇಯ ಇಟ್ಟುಕೊಳ್ಳಲಾಗಿದೆ.
* ಜಪಾನ್ ಸಹಕಾರದಲ್ಲಿ ರೈಲ್ವೆ ಇಲಾಖೆ ಬುಲೆಟ್ ರೈಲು ನಿರ್ಮಾಣ ಆರಂಭ ಮಾಡಲಿದೆ.[ನೈಸರ್ಗಿಕ ಅನಿಲ ಪೂರೈಕೆ 'ಟಾಪಿ' ಯೋಜನೆ, ಏನಿದರ ಮಹತ್ವ?]

Oneindia Explainer: Bullet Train Between Mumbai- Ahmedabad

ಹೈ ಸ್ಪೀಡ್ ರೈಲಿನ ಮಹತ್ವವೇನು?

* ಭಾರತದ ಪ್ರಯಾಣಿಕ ರೈಲಿನಲ್ಲಿ ಸಮಯವ ವ್ಯರ್ಥ ಮಾಡುವುದನ್ನು ತಪ್ಪಿಸುವುದು.
* ಪ್ರಯಾಣಿಕರಿಗೆ ಎಲ್ಲ ಬಗೆಯ ಸೌಲಭ್ಯ ಒದಗಿಸುವುದು.
* ಅಭಿವೃದ್ಧಿ ಮತ್ತು ಕ್ಷಿಪ್ರ ಸಂಚಾರ ಗಮನದಲ್ಲಿ ಇಟ್ಟುಕೊಂಡು ಯೋಜನೆ ಕಾರ್ಯಗತ ಮಾಡುವುದು

* ಹೊಸ ಸುಸಜ್ಜಿತ ನಗರ ನಿರ್ಮಾಣ ಮತ್ತು ಸಕಲ ಸಂಚಾರ ಸಾರಿಗೆ ವ್ಯವಸ್ಥೆ ಕಲ್ಪಿಸುವುದು.
* ಕೈಗಾರಿಕೆಗಳನ್ನು ಚಿಕ್ಕ ಪಟ್ಟಣ ಮತ್ತು ನಗರಗಳಿಗೆ ತಲುಪಿಸಿ ಉದ್ಯೋಗವಕಾಶ ಹೆಚ್ಚು ಮಾಡುವುದು.
* ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರ ಎರಡಕ್ಕೂ ಒಂದೇ ಬಗೆಯಲ್ಲಿ ಉತ್ತೇಜನ ನೀಡುವುದು.[ಎಲ್ ಇಡಿ, ಸಿಎಫ್ ಎಲ್ ಮತ್ತು ಸಾಮಾನ್ಯ ಬಲ್ಬ್ ನಡುವಿನ ವ್ಯತ್ಯಾಸಗಳು]

ಯೋಜನೆ ಸಾಕಾರ ಹೇಗೆ?

* ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ಟ್ರೇನ್ ಸಂಚಾರ ಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
* ರೈಲ್ವೆ ಇಲಾಖೆ ಅಧಿಕಾರಿಗಳು ಎರಡು ವರ್ಷ ಶ್ರಮವಹಿಸಿ ಈ ಬಗ್ಗೆ ವರದಿ ಸಿದ್ಧ ಮಾಡಿ ನೀಡಿದ್ದಾರೆ.
* 50 ವರ್ಷಗಳ ಅವಧಿಗೆ ಜಪಾನ್ ಸಾಲ ನೀಡಲಿದ್ದು 15 ವರ್ಷದ ಅವಧಿಗೆ ಶೇ. 0.1 ಬಡ್ಡಿ ನೀಡಬೇಕಿದೆ.

ಆರ್ಥಿಕ ಅಭಿವೃದ್ಧಿ ಮತ್ತುಮ ವೆಚ್ಚ

* ಬುಲೆಟ್ ಟ್ರೇನ್ ಗೆ ಸಂಬಂಧಿಸಿದ ಒಂದು ಕಿಮೀ ಹಳಿ ಸಿದ್ಧಮಾಡಲು 140 ಕೋಟಿ ರು. ಬೇಕಾಗುತ್ತದೆ.
* ವಿಜಯವಾಡದ ಮೆಟ್ರೋದ ಒಂದು ಕಿಮೀಗೆ 288 ಕೋಟಿ ರು. ತಗಲುತ್ತಿದೆ.
* ದೆಹಲಿ ಮೆಟ್ರೋ ನಿರ್ಮಾಣದ ವೇಳೆಯೂ ಜಪಾನ್ ಹಣಕಾಸು ನೆರವು ನೀಡಿತ್ತು.
* ಸದ್ಯ ಎಸಿ ಕೋಚ್ ನಲ್ಲಿ ಸಂಚರಿಸುವ ದರವನ್ನು ಬುಲೆಟ್ ಟ್ರೇನ್ ಟಿಕೆಟ್ ಗೆ ನೀಡಬೇಕಾಗುತ್ತದೆ.[ಭಾರತಕ್ಕೆ ಬರುತ್ತಿರುವ ಬುಲೆಟ್ ರೈಲಿನ ವಿಶೇಷತೆಗಳೇನು?]

ಮೇಕ್ ಇನ್ ಇಂಡಿಯಾಕ್ಕೆ ಶಕ್ತಿ

* ಮೇಕ್ ಇನ್ ಇಂಡಿಯಾ ಯೋಜನೆ ಅನ್ವಯವೇ ಎಲ್ಲ ಪರಿಕರಗಳ ಉತ್ಪಾದನೆ ಆರಂಭವಾಗಲಿದೆ.
* ಭಾರತದ ಲಕ್ಷಾಂತರ ಜನರಿಗೂ ಉದ್ಯೋಗವಕಾಶ ಲಭಿಸಲಿದೆ.
* ಜಪಾನ್ ಇಂಟರ್ ನ್ಯಾಶನಲ್ ಕೋ ಆಪರೇಶನ್ ಏಜೆನ್ಸಿ ಸಂಯೋಜನೆಯಲ್ಲಿ ರೈಲ್ವೆ ಕೆಲಸಗಳು ನಡೆಯಲಿವೆ.

ಜಪಾನ್ ಸಹಕಾರ ಭಾರತಕ್ಕೇನು ಲಾಭ?
* ಜಪಾನ್ ನ ಶಿಂಕಾನ್ಸೆನ್ ಟೆಕ್ನಾಲಜಿ ಹೇಳುವಂತೆ ಇದು ಮುಂದಿನ ಅನೇಕ ದಶಕಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿಕೊಂಡ ಯೋಜನೆ.
* ಜಪಾನ್ ರೈಲಿನ ಟೈಮಿಂಗ್ ಮತ್ತು ಪ್ರಯಾಣದ ವೇಳೆ ಪ್ರಪಂಚದಲ್ಲೇ ಮೆಚ್ಚುಗೆ ಪಡೆದಿದೆ.
* ಭೂ ಕಂಪನ ಎದುರಿಸುವ ಸಾಮರ್ಥ್ಯವನ್ನು ಕಂಪನಿ ಯೋಜನೆಯಲ್ಲಿ ಅಳವಡಿಸಲಿದೆ.
* ಯುರೋಪಿನ ಕೆಲ ಕಂಪನಿಗಳು ಸಹ ಜಪಾನ್ ನೀಡುವಷ್ಟು ಭದ್ರತೆ ನೀಡುವಲ್ಲಿ ವಿಫಲವಾಗಿದ್ದವು.

English summary
Oneindia Explainer: A Rs 98,000-crore project to lay India's first bullet train network between commercial nerve centre of Mumbai and Ahmedabad was finalised at the annual summit talks between Prime Minister Narendra Modi and his Japanese counterpart Shinzo Abe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X