ಕೊರೊನಾ ಮಹಾಮಾರಿಗೆ ಇಟಲಿಯಲ್ಲಿ 100 ವೈದ್ಯರು ಬಲಿ

ಇಟಲಿ, ಏಪ್ರಿಲ್ 10: ಕೊರೊನಾ ವೈರಸ್‌ ಇಡೀ ಜಗತ್ತನ್ನು ಕಿತ್ತು ತಿನ್ನುತ್ತಿದೆ. ಲಕ್ಷಾಂತರ ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಸಾವಿರಾರು ಜನರು ಮೃತಪಟ್ಟಿದ್ದಾರೆ. ಈ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಮತ್ತು ಜನರ ಪ್ರಾಣ ರಕ್ಷಿಸುವಲ್ಲಿ ವೈದ್ಯರು ಬಹುದೊಡ್ಡ ಪಾತ್ರ ನಿರ್ವಹಿಸುತ್ತಿದ್ದಾರೆ.

ದುರಂತ ಅಂದ್ರೆ ಈ ಕೊರೊನಾ ಸೋಂಕಿನಿಂದ ನೂರಾರು ವೈದ್ಯರು ಸಾವನ್ನಪ್ಪಿರುವುದು ಚಿಂತಿಸಬೇಕಾದ ವಿಚಾರ. ಹೌದು, ಇಟಲಿ ದೇಶದಲ್ಲಿ 100 ಜನ ವೈದ್ಯರು ಕೊರೊನಾದಿಂದ ಅಸುನೀಗಿದ್ದಾರೆ ಎಂದು ಸ್ವತಃ ಆರೋಗ್ಯ ಇಲಾಖೆ ಗುರುವಾರ ಮಾಹಿತಿ ನೀಡಿದೆ.

100 ವೈದ್ಯರು ಹಾಗೂ 30 ನರ್ಸ್‌ಗಳು ಕೊವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹಾಗೂ 10 ಸಾವಿರಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.

One Hundred Doctors Died In Italy From COVID19

ಇಟಲಿಯಲ್ಲಿ ಮಾತ್ರ 100 ವೈದ್ಯರು ಮೃತಪಟ್ಟಿದ್ದಾರೆ. ಅದೇ ರೀತಿ ಬೇರೆ ದೇಶಗಳಲ್ಲಿಯೂ ಹಲವು ವೈದ್ಯರು ಸಾವನ್ನಪ್ಪಿರುವ ಬಗ್ಗೆ ವರದಿಗಳಾಗಿವೆ. ಚೀನಾದಲ್ಲಿ ಕೊರೊನಾ ಸೋಂಕು ಎಂದು ಪತ್ತೆ ಹಚ್ಚಿದ ವೈದ್ಯ ಬಲಿಯಾದ. ಕರ್ನಾಟಕದ ಕಲಬುರಗಿಯಲ್ಲಿ ಮೊದಲ ಕೊರೊನಾ ರೋಗಿಗೆ ಚಿಕಿತ್ಸೆ ನೀಡಿದ ವೈದ್ಯನಿಗೆ ಸೋಂಕು ತಗುಲಿತ್ತು.

ಇನ್ನು ಇಟಲಿಯಲ್ಲಿ ಇದುವರೆಗೂ 143,626 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 18,279 ಜನರು ಸಾವನ್ನಪ್ಪಿದ್ದಾರೆ. 28,470 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+