ಗೋಡೆಗೆ ಮೆತ್ತಿದ ಒಂದು ಬಾಳೆಹಣ್ಣಿಗೆ 85 ಲಕ್ಷ ರೂಪಾಯಿ!

ಮಿಯಾಮಿ, ಡಿಸೆಂಬರ್ 07: ಬಾಳೆಹಣ್ಣು ಒಂದಕ್ಕೆ ಎಷ್ಟು ಬೆಲೆ ಇರಬಹುದು, 5 ತೀರಾ ಹೆಚ್ಚೆಂದರೆ 10 ರೂಪಾಯಿ ಇರಬಹುದೇನೋ ಆದರೆ ಇಲ್ಲೊಬ್ಬ ಭೂಪ ಒಂದು ಬಾಳೆಹಣ್ಣಿಗೆ ಬರೋಬ್ಬರಿ 85 ಲಕ್ಷ ರೂಪಾಯಿ ನೀಡಿದ್ದಾನೆ.

85 ಲಕ್ಷ ರೂಪಾಯಿಗೆ ಸೇಲ್ ಆಗಿರುವ ಬಾಳೆಹಣ್ಣು ಸಾಮಾನ್ಯ ಬಾಳೆಹಣ್ಣಲ್ಲ ಇದೊಂದು ಕಲಾಕೃತಿ! ಹೌದು ಮಿಯಾಮಿಯಲ್ಲಿ ನಡೆದ 'ಆರ್ಟ್‌ ಬ್ಯಾಸೆಲ್' ನಲ್ಲಿ ಇದನ್ನು ಪ್ರದರ್ಶಿಸಲಾಗಿದೆ.

ಬಿಳಿಯ ಗೋಡೆಗೆ ಟೇಪ್ ಸಹಾಯದಿಂದ ಬಾಳೆಹಣ್ಣನ್ನು ಅಂಟಿಸಲಾಗಿತ್ತು, ಈ 'ಕಲಾಕೃತಿ'ಯನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಈ ಕಲಾಕೃತಿಯ ಮುಂದೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟಿದ್ದಾರೆ. ಈ 'ಕಲಾಕೃತಿ'ಯ ಹೆಸರು 'ಕಮಿಡಿಯನ್'.

One Banana Sold For 85 lakh Rupees In Miami

ಇಟಿಲಿಯ ಕಲಾವಿದ ಮಾರಿಜಿಯೋ ಕ್ಯಾಟಿಲಿಯನ್ ಎಂಬಾದ ಈ ಕಲಾಕೃತಿಯ ಸೃಷ್ಟಿಕರ್ತ. ಅಲ್ಲೇ ಮಿಯಾಮಿಯ ಅಂಗಡಿಯೊಂದರಲ್ಲಿ ಬಾಳೆ ಹಣ್ಣು ಖರೀದಿಸಿ, ಒಂದು ಡಕ್ಟ್ ಟೇಪ್ ಅನ್ನು ತೆಗೆದುಕೊಂಡು ಅದನ್ನು ಗೋಡೆಗೆ ಅಂಟಿಸಿ ಅದಕ್ಕೆ ಕಮಿಡಿಯನ್ ಎಂದು ಹೆಸರಿಟ್ಟು ಲಕ್ಷಾಂತರ ಹಣ ಗಳಿಸಿದ್ದಾನೆ.

ಈ ಕಲಾಕೃತಿಯು ಜಾಗತಿಕ ವ್ಯಾಪಾರ, ದ್ವಂದ್ವಾರ್ಥ ಮತ್ತು ಹಾಸ್ಯದ ಸಂಕೇತವಾಗಿದೆ ಎಂದು ಪ್ಯಾರಿಸ್ ಮೂಲದ ಪೆರ್ರೋಟಿನ್ ಗ್ಯಾಲರಿಯ ಎಮಾನ್ಯುಯೆಲ್ ಪೆರ್ರೋಟಿನ್ ಎಂಬಾತ ವಿಮರ್ಶೆ ಸಹ ಮಾಡಿದ್ದಾನೆ.

One Banana Sold For 85 lakh Rupees In Miami

ಈ ಮೊದಲು ಕಂಚಿನ ಬಾಳೆಹಣ್ಣನ್ನು ಕಲಾವಿದ ಮಾರಿಜಿಯೋ ಕ್ಯಾಟಿಲಿಯನ್ ಬಳಸಿದ್ದನಂತೆ ಅದು ಸರಿಕಾಣಲಿಲ್ಲವೆಂದು ನಿಜವಾದ ಬಾಳೆಹಣ್ಣನ್ನೇ ಬಳಸಿದ್ದಾನೆ. ಕಲಾಕೃತಿ ಖರೀದಿಸಿದವರು ಬಾಳೆಹಣ್ಣನ್ನು ಬದಲಾಯಿಸಬಹುದಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+