ಚಿತ್ರಗಳು : ಇಟಲಿಯಲ್ಲಿ ಭೂಕಂಪ, 250ಕ್ಕೇರಿದ ಸಾವಿನ ಸಂಖ್ಯೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಅಮಾಟ್ರಿಸ್, ಆಗಸ್ಟ್ 25 : ಇಟಲಿಯ ಅಮಾಟ್ರಿಸ್ ನಗರದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 250ಕ್ಕೆ ಏರಿದೆ. ನೂರಾರು ಜನರು ಗಾಯಗೊಂಡಿದ್ದು, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.

ನಾರ್ಸಿಯಾ ಪಟ್ಟಣದ ಭೂಕಂಪದ ಕೇಂದ್ರ ಬಿಂದುವಾಗಿತ್ತು. ಬುಧವಾರ ಮುಂಜಾನೆ 3.30ರ ಹೊತ್ತಿಗೆ ಭೂಕಂಪ ಸಂಭವಿಸಿದ್ದು ನಿದ್ರೆಯಲ್ಲಿದ್ದ ಜನರು ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ.[ಇಟಲಿಯಲ್ಲಿ ಭೂಕಂಪ, 36 ಸಾವು]

ಅಮಾಟ್ರಿಸ್, ಅಕ್ಯೂಮೊಲಿ, ಲಾಜಿಯೋ, ಮಾರ್ಚೆ ಮುಂತಾದ ನಗರಗಳಿಗೆ ಭಾರೀ ಹಾನಿ ಉಂಟಾಗಿದೆ. ಅವಶೇಷಗಳಡಿ ಎಷ್ಟು ಜನರು ಸಿಲುಕಿದ್ದಾರೆ ಎಂಬ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗುತ್ತಿಲ್ಲ. ನೂರಾರು ಕಟ್ಟಡಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ.[ಭೀಕರ ಭೂಕಂಪಕ್ಕೆ ತುತ್ತಾಗಲಿದೆಯೇ ಭಾರತ-ಬಾಂಗ್ಲಾ?]

2009ರಲ್ಲಿ ಸಂಭವಿಸಿದ ಭೂಕಂಪದಲ್ಲಿ 300 ಜನರು ಸಾವನ್ನಪ್ಪಿದ್ದರು. ಅದರ ನಂತರ ನಡೆಯುತ್ತಿರುವ ಮಹಾದುರಂತವಿದಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಲಿದ್ದು, ಅವಶೇಷಗಳಡಿ ಬದುಕುಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಲೇ ಇದೆ....

ರಾತ್ರಿಯೂ ಮುಂದುವರೆದ ಕಾರ್ಯಾಚರಣೆ

ರಾತ್ರಿಯೂ ಮುಂದುವರೆದ ಕಾರ್ಯಾಚರಣೆ

ಬುಧವಾರ ಮುಂಜಾನೆ ಭೂಕಂಪ ಸಂಭವಿಸಿತ್ತು. ರಾತ್ರಿಯಾದರೂ ರಕ್ಷಣಾ ತಂಡಗಳು ಅವಶೇಷಗಳಡಿ ಸಿಲುಕಿದ ಜನರಿಗಾಗಿ ಹುಡುಕಾಟ ಮುಂದುವರೆಸಿದವು. ಮತ್ತೆ ಭೂಕಂಪವಾಗುವ ಭಯದಲ್ಲಿ ಜನರು ಬಯಲಿನಲ್ಲಿಯೇ ಟೆಂಟ್ ನಿರ್ಮಿಸಿಕೊಂಡು ರಾತ್ರಿ ಕಳೆದರು.

2009ರ ಬಳಿಕ ದೊಡ್ಡ ದುರಂತ

2009ರ ಬಳಿಕ ದೊಡ್ಡ ದುರಂತ

2009ರ ಬಳಿಕ ಇಟಲಿಯಲ್ಲಿ ಸಂಭವಿಸಿದ ಭೀಕರ ದುರಂತ ಇದಾಗಿದೆ. ಅಮಾಟ್ರಿಸ್ ನಗರದ ಅರ್ಧದಷ್ಟು ಭಾಗಕ್ಕೆ ಭೂಕಂಪದಿಂದಾಗಿ ಹಾನಿ ಉಂಟಾಗಿದೆ. ಅಕ್ಯೂಮೊಲಿ, ಲಾಜಿಯೋ, ಮಾರ್ಚೆ ಮುಂತಾದ ಪ್ರದೇಶಗಳಲ್ಲಿಯೂ ಭಾರೀ ಹಾನಿ ಉಂಟಾಗಿದೆ.

ಎಷ್ಟು ಜನ ಸಿಲುಕಿದ್ದಾರೆ ಲೆಕ್ಕವಿಲ್ಲ

ಎಷ್ಟು ಜನ ಸಿಲುಕಿದ್ದಾರೆ ಲೆಕ್ಕವಿಲ್ಲ

ಅಮಾಟ್ರಿಸ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅವಶೇಷಗಳಡಿ ಎಷ್ಟು ಜನರು ಸಿಲುಕಿದ್ದಾರೆ ಎಂಬ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗುತ್ತಿಲ್ಲ. ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 250ಕ್ಕೆ ಏರಿಕೆಯಾಗಿದೆ. ನೂರಾರು ಜನರು ಗಾಯಗೊಂಡಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಎರಡು ಕಂಪನಗಳು ದಾಖಲು

ಎರಡು ಕಂಪನಗಳು ದಾಖಲು

ಬುಧವಾರ ಮುಂಜಾನೆ 3.30ರ ಹೊತ್ತಿಗೆ ಮೊದಲ ಕಂಪನ ದಾಖಲಾಗಿದೆ. ಯುನೈಟೆಡ್ ಸ್ಟೇಟ್ಸ್‌ ಜಿಯಾಲಾಜಿಕಲ್ ಸರ್ವೆ ಪ್ರಕಾರ ಕಂಪನದ ತೀವ್ರತೆ 6.2. ಈ ಕಂಪನ ಸಂಭವಿಸಿದ ಒಂದು ಗಂಟೆ ಬಳಿಕ 5.4 ತೀವ್ರತೆಯ ಮತ್ತೊಂದು ಕಂಪನ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The number of deaths from a earthquake at Amatrice Italy raised to 247 on Thursday. Hundreds of others were injured and an unknown number were trapped under the collapsed buildings.
Please Wait while comments are loading...