ಫೇಸ್ಬುಕ್ ನಲ್ಲಿ ಬೇಕಾಬಿಟ್ಟಿ ಸ್ಟೇಟಸ್ ಹಾಕಿದವನಿಗೆ ಭಯಂಕರ ದಂಡ

ಸಿಡ್ನಿ, ಆಗಸ್ಟ್ 08: ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಕಂಡ ಕಂಡವರ ಮೇಲೆ ಕೆಂಡಕಾರುವ ಪೋಸ್ಟ್ ಗಳನ್ನು ಹಾಕುವವರಿಗೆ ಈ ಸುದ್ದಿ ಪಾಠವಾಗಬಹುದು, ಹೋಟೆಲ್ ಮಾಲೀಕರೊಬ್ಬರ ಬಗ್ಗೆ ಪೋಸ್ಟ್ ಹಾಕಿದ್ದ ವ್ಯಕ್ತಿಗೆ ಲಕ್ಷಾಂತರ ಡಾಲರ್ ದಂಡ ಬಿದ್ದಿದೆ.

ಫೇಸ್​ಬುಕ್ ಪೋಸ್ಟಿನಲ್ಲಿ ಅವಹೇಳನಕಾರಿ ಬರಹ ಹಾಕಿದ್ದ ವ್ಯಕ್ತಿಯೊಬ್ಬನಿಗೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನ ಜಿಲ್ಲಾ ಕೋರ್ಟ್ ನ್ಯಾಯಾಧೀಶೆ ಜುಡಿತ್ ಗಿಬ್ಸನ್ ಅವರು ಭಾರಿ ದಂಡ ಹಾಕಿದ್ದಾರೆ.

ಹೋಟೆಲ್ ಮಾಲೀಕರೊಬ್ಬರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ತಪ್ಪಿಗೆ 1,50,000 ಡಾಲರ್ ಪರಿಹಾರ ನೀಡುವಂತೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.[ರಾಕೇಶ್ ವಿರುದ್ಧ ಕಾಮೆಂಟ್ ಮಾಡಿದ ಯುವಕರ ವಿರುದ್ಧ ಕೇಸ್]

Man ordered to pay $150,000 for defamatory Facebook post

ಘಟನೆ ಹಿನ್ನಲೆ: 2014ರ ಮಾರ್ಚ್ ತಿಂಗಳಲ್ಲಿ ಎಲೆಕ್ಟ್ರೀಷಿಯನ್ ಡೇವಿಡ್ ಸ್ಕಾಟ್ ಎಂಬ ವ್ಯಕ್ತಿ ತನ್ನ ಫೇಸ್ ಬುಕ್ ಪೋಸ್ಟ್​ನಲ್ಲಿ 'ಬಾಲ ಕಾಮಿಗಳಿದ್ದಾರೆ(Pedophile) ಎಚ್ಚರಿಕೆ: ನಂಬುಕ್ಕಾ ಪಟ್ಟಣ ಈಗ ಈ ರಾಕ್ಷಸರ, ಬ್ಲೂ ಡಾಲ್ಪಿನ್- ನಿರ್ವಾಣ ಹೋಟೆಲ್ ಮತ್ತು ಭಾರತೀಯ ರೆಸ್ಟೋರೆಂಟ್​ಗಳಿಗಾಗಿ ಬಳಸಲಾಗುತ್ತಿದೆ. ಈ ಹೋಟೆಲ್​ಗಳ ಮುಂಭಾಗದಲ್ಲಿ ಸರಿಯಾಗಿ ಬಸ್ಸುಗಳನ್ನು ನಿಲ್ಲಿಸಲಾಗುತ್ತಿರುವುದು ನಮ್ಮ ಮಕ್ಕಳಿಗಾಗಿಯೇ?' ಎಂದು ಫೇಸ್ ಬುಕ್ ವಾಲ್ ನಲ್ಲಿ ಹಾಕಿಕೊಂಡಿದ್ದ.[ಫೇಸ್ಬುಕ್ ಫೋಟೊ ಪಬ್ಲಿಕ್ ಆಗುತ್ತಂತೆ, ಫೇಕ್ ನ್ಯೂಸ್ ಕಣ್ರಿ]

ಈ ಹೋಟೆಲ್​ ನ ಮಾಲೀಕರಾದ ಕೆನ್ನೆತ್ ರೋಥೆ ಅವರು ಈ ಮಾನಹಾನಿಕರ ಪೋಸ್ಟ್​ಗಾಗಿ ಕ್ಷಮೆ ಕೇಳಿ ಪೋಸ್ಟ್ ಪ್ರಕಟಿಸುವಂತೆ ಮನವಿ ಮಾಡಿದರು. ಆದರೆ, ಇದಕ್ಕೆ ಪ್ರತಿಯಾಗಿ ಕೆನ್ನೆತ್ ರೋಥೆ ಆವರನ್ನು ಸ್ಕಾಟ್ ಹಾಗೂ ಸಂಗಡಿಗರು ಚೆನ್ನಾಗಿ ತದುಕಿದ್ದಾರೆ.

ಶಾಲೆಯೊಂದರ ಮಾಜಿ ಮುಖ್ಯೋಪಾಧ್ಯಯರಾಗಿರುವ 74 ವರ್ಷ ವಯಸ್ಸಿನ ರೋಥೆ ಅವರು ಈ ಆಘಾತದಿಂದ ಚೇತರಿಸಿಕೊಳ್ಳಲು ಆರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು.[ಫೇಸ್ ಬುಕ್ ನಿಂದ ವಿಡಿಯೋ ಡೌನ್ ಲೋಡ್ ಮಾಡುವುದು ಹೇಗೆ?]

ಈ ಪ್ರದೇಶದದಲ್ಲಿ ಬಾಲ ಕಾಮಿಗಳು ನೆಲೆಸಲು ರೋಥೆ ಅವರು ಅವಕಾಶ ನೀಡಿಲ್ಲ ಎಂಬುದು ಸಾಬೀತಾದ ಹಿನ್ನಲೆಯಲ್ಲಿ ಸ್ಕಾಟ್ ಗೆ ಭಾರಿ ದಂಡ ವಿಧಿಸಲಾಗಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. (ಐಎಎನ್ ಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+