ಇನ್ನು ಮುಂದೆ ಫೇಸ್ ಬುಕ್ ನಲ್ಲಿ ಮಾರಿಬಿಡಿ

Posted By:
Subscribe to Oneindia Kannada

ಕ್ಯಾಲಿಫೋರ್ನಿಯಾ, ಅಕ್ಟೋಬರ್ 4: ಇ ಕಾಮರ್ಸ್ ವ್ಯವಹಾರ ದಿನೇ ದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವುದರಿಂದ ಇದೀಗ ಫೇಸ್ ಬುಕ್ ಕೂಡ 'ಮಾರ್ಕೆಟ್ ಪ್ಲೇಸ್' ಎಂಬುದನ್ನು ಆರಂಭಿಸಿದೆ. ಇನ್ನು ಮುಂದೆ ಬಳಕೆದಾರರು ಫೇಸ್ ಬುಕ್ ನಲ್ಲೇ ವಸ್ತುಗಳ ಮಾರಾಟ ಹಾಗೂ ಖರೀದಿ ಮಾಡಬಹುದು.

ಆದರೆ, 18 ವರ್ಷ ದಾಟಿದವರು ಯುಎಸ್ ಎ, ಬ್ರಿಟನ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಲ್ಲಿ ಐಒಎಸ್ ಹಾಗೂ ಆಂಡ್ರಾಯಿಡ್ ಫೇಸ್ ಬುಕ್ ಅಪ್ಲಿಕೇಷನ್ ಮೂಲಕ 'ಮಾರ್ಕೆಟ್ ಪ್ಲೇಸ್' ಬಳಸಬಹುದು. ಮುಂಬರುವ ತಿಂಗಳುಗಳಲ್ಲಿ ಇತರ ದೇಶಗಳಲ್ಲೂ ಈ ಅಪ್ಲಿಕೇಷನ್ ಡೆಸ್ಕ್ ಟಾಪ್ ನಲ್ಲಿ ಸಿಗುವಂತೆ ಮಾಡುತ್ತೇವೆ ಎಂದು ಫೇಸ್ ಬುಕ್ ನ ಪ್ರಾಡಕ್ಟ್ ಮ್ಯಾನೇಜ್ ಮೆಂಟ್ ನಿರ್ದೇಶಕರಾದ ಮೇರಿ ಕು ತಿಳಿಸಿದ್ದಾರೆ.[ಭಾರತ-ಪಾಕ್ ಉದ್ವಿಗ್ನ: ಕಂಪೆನಿಗಳ 2.40 ಲಕ್ಷ ಕೋಟಿ ಬಂಡವಾಳ ಖಲ್ಲಾಸ್]

Now buy and sell items on Facebook

ಇತ್ತೀಚಿನ ವರ್ಷಗಳಲ್ಲಿ ಫೇಸ್ ಬುಕ್ ಬಳಕೆದಾರರು ಹೆಚ್ಚಾಗಿದ್ದಾರೆ. ಅವರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವುದಕ್ಕೆ ಅಥವಾ ಮಾರುವುದಕ್ಕೆ ಒಂದು ಅವಕಾಶ ನೀಡುವುದು ಕಂಪೆನಿ ಉದ್ದೇಶ. ಈ ಚಟುವಟಿಕೆ ನಿಧಾನವಾಗಿ ಬೆಳೆಯುತ್ತದೆ. ಸದ್ಯಕ್ಕೆ ಜಗತ್ತಿನ ನಾನಾ ದೇಶಗಳಲ್ಲಿ ಸರಾಸರಿ ನಲವತ್ತೈದು ಕೋಟಿ ಜನ ಪ್ರತಿ ತಿಂಗಳು ತಮ್ಮ ನೆರೆಹೊರೆಯವರಿಗೆ ವಸ್ತುಗಳನ್ನು ಮಾರುತ್ತಾರೆ ಹಾಗೂ ಖರೀದಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಫೇಸ್ ಬುಕ್ ನ ಗುಂಪುಗಳಲ್ಲಿ ವಸ್ತುಗಳನ್ನು ಖರೀದಿಸುವುದಕ್ಕೆ-ಮಾರುವುದಕ್ಕೆ ಮಾರ್ಕೆಟ್ ಪ್ಲೇಸ್ ತುಂಬ ಅನುಕೂಲಕರವಾದ ವ್ಯವಸ್ಥೆ. ಹತ್ತಿರದಲ್ಲಿರುವವರು ಯಾರು, ಯಾವ ವಸ್ತುಗಳನ್ನು ಮಾರುವುದಕ್ಕೆ ಇರಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಸ್ಥಳ, ಕೆಟಗರಿ, ಬೆಲೆ ಆಧಾರದಲ್ಲೂ ಬೇಕಾದ ವಸ್ತುಗಳನ್ನು ಹುಡುಕಿಕೊಳ್ಳಬಹುದು.[ವೊಡಾಫೋನ್ ಇಂಟರ್ ನೆಟ್: 1 ಜಿಬಿ ರೀಚಾರ್ಜ್ ಗೆ 10 ಜಿಬಿ ಡೇಟಾ]

ಯಾವುದಾದರೂ ವಸ್ತುಗಳು ಇಷ್ಟವಾಗಿ, ಅದನ್ನು ಖರೀದಿಸಬೇಕೆಂದರೆ ಅದರ ಫೋಟೋ ಮೇಲೆ ಕ್ಲಿಕ್ ಮಾಡಿದರೆ ಅದರ ಮಾಲೀಕರು, ಅವರ ಸ್ಥಳ, ಸಂಪರ್ಕ ಸಂಖ್ಯೆ, ಬೆಲೆ ಮತ್ತಿತರ ಮಾಹಿತಿಗಳು ಸಿಗುತ್ತವೆ. ದುಡ್ಡಿನ ಪಾವತಿ ಹಾಗೂ ವಸ್ತುಗಳ ಡೆಲಿವರಿ ಜವಾಬ್ದಾರಿ 'ಮಾರ್ಕೆಟ್ ಪ್ಲೇಸ್'ನದ್ದಲ್ಲ.

ಮಾರಬಹುದು ಅಂತ ಡ್ರಗ್ಸ್, ಸ್ಫೋಟಕಗಳು, ಪ್ರಾಣಿಗಳು ಹಾಗೂ ಮದ್ಯವನ್ನೆಲ್ಲ ಇಲ್ಲಿ ಮಾರುವುದಕ್ಕೆ ಅವಕಾಶ ಇಲ್ಲ ಎಂದು ಕಂಪೆನಿ ಹೇಳಿಕೊಂಡಿದೆ. ಅದರೆ ಭಾರತದಲ್ಲಿ 'ಮಾರ್ಕೆಟ್ ಪ್ಲೇಸ್' ಕಾರ್ಯ ಆರಂಭಿಸುವುದಕ್ಕೆ ಇನ್ನೂ ಕೆಲ ತಿಂಗಳು ಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Facebook launched 'Marketplace'- it helps user-to-user exchange for buying and selling goods. Over the next few days, Marketplace will roll out to everyone over 18 years-old in the US, Britain, Australia, and New Zealand on the Facebook app.
Please Wait while comments are loading...