Nobel Prize: ಸಾಹಿತ್ಯ ವಿಭಾಗದ ‘ನೊಬೆಲ್’ ಪ್ರಶಸ್ತಿ ಘೋಷಣೆ
ಜಗತ್ತಿನ ಶ್ರೀಮಂತ ಪ್ರಶಸ್ತಿ ಎಂಬ ಹೆಗ್ಗಳಿಕೆ ಪಡೆದಿರುವ 'ನೊಬೆಲ್' ಬಹುಮಾನ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಈಗಾಗಲೇ ವೈದ್ಯಶಾಸ್ತ್ರ, ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಭಾಗದ ಪ್ರಶಸ್ತಿ ಘೋಷಣೆ ಆಗಿದ್ದು, ಈಗ ಸಾಹಿತ್ಯ ವಿಭಾಗದ ಪ್ರಶಸ್ತಿ ಘೋಷಿಸಲಾಗಿದೆ. ಹಾಗಾದರೆ ಈ ಬಾರಿಯ ಸಾಹಿತ್ಯ ವಿಭಾಗದ 'ನೊಬೆಲ್' ಪ್ರಶಸ್ತಿ ಪಡೆದಿದ್ದು ಯಾರು?
1901 ರಿಂದ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ. ಸಂಶೋಧಕ ಆಲ್ಫ್ರೆಡ್ ನೊಬೆಲ್ ಆಶಯಕ್ಕೆ ಅನುಗುಣವಾಗಿ ಜಗತ್ತಿನ ಪ್ರಗತಿಗೆ ಕಾರಣವಾದ ಕಾರ್ಯಕ್ಕೆ ನೊಬೆಲ್ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷ ಬಹುಮಾನ ವಿಜೇತರನ್ನು ಅಕ್ಟೋಬರ್ 2ರ ಸೋಮವಾರದಿಂದ ಅಕ್ಟೋಬರ್ 9ರ ತನಕ ಪ್ರತಿದಿನ ಪ್ರಕಟಿಸಲಾಗುತ್ತಿದೆ.

ಈ ವರ್ಷದ ನೊಬೆಲ್ ಪ್ರಶಸ್ತಿಗಳನ್ನು ಗೆಲ್ಲುವವರಿಗೆ 11 ಮಿಲಿಯನ್ ಸ್ವೀಡಿಷ್ ಕ್ರೌನ್ ಸಿಗಲಿದೆ, ಅಮೆರಿಕದ ಡಾಲರ್‌ನಲ್ಲಿ 9,86,000ನಷ್ಟು ಆಗುತ್ತದೆ. ಇದು ಹತ್ತಿರ ಹತ್ತಿರ ಸುಮಾರು 8 ಕೋಟಿಗೆ ಸಮವಾಗಿದೆ. ವೈದ್ಯಶಾಸ್ತ್ರ, ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಭಾಗದ ಬಳಿಕ ಈಗ ಸಾಹಿತ್ಯ ವಿಭಾಗದಲ್ಲಿನ ಪ್ರಶಸ್ತಿ ಪ್ರಕಟವಾಗಿದೆ.
ಯಾರಿಗೆ ಸಿಕ್ಕಿದೆ ಸಾಹಿತ್ಯದ 'ನೊಬೆಲ್'?
ಅಂದಹಾಗೆ ಈ ಬಾರಿ 'ನೊಬೆಲ್' ಸಾಹಿತ್ಯ ವಿಭಾಗದ ಪ್ರಶಸ್ತಿ ನಾರ್ವೆ ಮೂಲದ ಸಾಹಿತಿ ಜಾನ್ ಫೊಸ್ಸೆ ಅವರಿಗೆ ಸಿಕ್ಕಿದೆ. ಸಾಹಿತ್ಯ ಲೋಕದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ಜಾನ್ ಫೊಸ್ಸೆ ಅವರಿಗೆ 'ನೊಬೆಲ್' ಸಾಹಿತ್ಯ ವಿಭಾಗದ ಪ್ರಶಸ್ತಿ ಸಿಕ್ಕಿರುವುದು ಸಾಕಷ್ಟು ಸಂತಸ ತರಿಸಿದೆ. 2023ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ವಿಜ್ಞಾನಿಗಳಾದ ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆ್ಯನಿ ಎಲ್ ಹಲ್ಲಿಯರ್ ಪಡೆದಿದ್ದರು. ಹಾಗೇ ವೈದ್ಯಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ 'ಕೊರೊನಾ' ಲಸಿಕೆ ಕಂಡುಹಿಡಿಯಲು ಸಹಾಯ ಮಾಡಿದ್ದ ಕ್ಯಾಟಲಿನ್ ಕಾರಿಕೋ ಹಾಗೂ ಡ್ರೂ ವೈಸ್‌ಮನ್ ಅವರಿಗೆ ಸಿಕ್ಕಿತ್ತು. ಇದೀಗ ಸಾಹಿತ್ಯ ವಿಭಾಗದ ಪ್ರಶಸ್ತಿ ಕೂಡ ಪ್ರಕಟವಾಗಿದೆ.
ಸಂಶೋಧನಾ ಕ್ಷೇತ್ರದ ಆಸ್ಕರ್ ಅವಾರ್ಡ್ 'ನೊಬೆಲ್ ಪ್ರಶಸ್ತಿ'ಗೆ ಸಾಹಿತ್ಯ ವಿಭಾಗದ ಸಾಧಕ ಮುತ್ತಿಟ್ಟಿದ್ದಾರೆ. ಅದರಲ್ಲೂ ಈ ಬಾರಿಯ 'ನೊಬೆಲ್' ಬಹುಮಾನ 1 ಮಿಲಿಯನ್ ಸ್ವೀಡಿಷ್ ಕ್ರೌನ್ ಹೆಚ್ಚಾಗಿ ಸಿಗಲಿದೆ. ಈ ಮೂಲಕ ಸಂಶೋಧಕರಿಗೆ ಮತ್ತಷ್ಟು ಸಹಾಯ ಮಾಡಲಿದೆ. ಈ ರೀತಿ ಇನ್ನೂ 4 ದಿನ ಕಾಲ ವಿವಿಧ ಕ್ಷೇತ್ರಗಳ ಸಾಧಕರಿಗೆ ಇದೇ ರೀತಿ ನೊಬೆಲ್ ಪ್ರಶಸ್ತಿಯನ್ನು ಪ್ರಕಟಿಸಲಾಗುತ್ತದೆ. ಹೀಗಾಗಿ ಮುಂದೆ ಯಾರೆಲ್ಲಾ ಪ್ರತಿಷ್ಠಿತ 'ನೊಬೆಲ್' ಪ್ರಶಸ್ತಿಯನ್ನು ಪಡೆಯಲಿದ್ದಾರೆ? ಎಂಬ ಕುತೂಹಲ ಕಾಡುತ್ತಿದೆ.












Click it and Unblock the Notifications