Nuclear Weapons: ಪರಮಾಣು ದಾಳಿಗೆ ಸಜ್ಜಾದ ಉತ್ತರ ಕೊರಿಯಾ?
ಅಮೆರಿಕ ವಿರುದ್ಧ ತೊಡೆತಟ್ಟಿ ನಿಂತಿರುವ ಉತ್ತರ ಕೊರಿಯಾ ಇದೀಗ ಮತ್ತೊಂದು ಮಹಾ ವಿನಾಶದ ಕೆಲಸಕ್ಕೆ ಮುಂದಾಗಿದೆ. ತನ್ನಲ್ಲಿರುವ ಪರಮಾಣು ಬಾಂಬ್‌ಗಳನ್ನು ಬಳಸಲು & ಇನ್ನಷ್ಟು ಪರಮಾಣು ಬಾಂಬ್‌ಗಳನ್ನ ತಯಾರಿಸಲು ಅಡ್ಡಿಯಾಗಿದ್ದ ಕಾನೂನಿಗೆ ತಿದ್ದುಪಡಿ ಮಾಡಿದೆ. ಹಾಗಾದರೆ ದಿಢೀರ್ ಉತ್ತರ ಕೊರಿಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಎಂತಹದ್ದು?
ಹೌದು, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಉತ್ತರ ಕೊರಿಯಾ ಸಂವಿಧಾನಕ್ಕೇ ತಿದ್ದುಪಡಿ ತರುತ್ತಿದ್ದಾನೆ. ಇದಕ್ಕಾಗಿ ಉತ್ತರ ಕೊರಿಯಾದ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿದ ಕಿಮ್ ಅಂತಿಮ ನಿರ್ಣಯ ಪ್ರಕಟಿಸಿದ್ದಾನೆ ಎನ್ನಲಾಗಿದೆ. ಮೊದಲೇ ಸರ್ವಾಧಿಕಾರಿ ನಾಡು. ಅಲ್ಲಿನ ಚರ್ಚೆಗಳು ಕೇವಲ ಲೆಕ್ಕಕ್ಕೆ ಮಾತ್ರ ಸೀಮಿತ ಎನ್ನಬಹುದು. ಹೀಗೆ ಕಿಮ್ ಜಾಂಗ್ ಉನ್‌ನ ಆದೇಶಕ್ಕೆ ವಿರುದ್ಧವಾಗಿ ಯಾರೂ ಮಾತನಾಡದೆ ಉತ್ತರ ಕೊರಿಯಾ ಸಂವಿಧಾನಕ್ಕೆ ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಹಾಗಾದರೆ ಇದರಿಂದ ಏನಾಗುತ್ತೆ?

ಭೂಮಿ ಮೇಲೆ ಮತ್ತೊಂದು ಮಹಾಯುದ್ಧ?
ಕಿಮ್ ಜಾಂಗ್ ಉನ್ ಮಾಡುತ್ತಿರುವ ಕಿತಾಪತಿ ಹೇಗಿದೆ ಎಂದರೆ, ತಾನು ಈಗಾಗಲೇ ತನ್ನ ಮನಸ್ಸನ್ನು 3ನೇ ಮಹಾಯುದ್ಧಕ್ಕೆ ಸಿದ್ಧವಾಗಿ ಇಟ್ಟುಕೊಂಡಂತೆ ಕಾಣುತ್ತಿದೆ. ಈ ಕಾರಣಕ್ಕೆ ಪದೇ ಪದೆ ಪರಮಾಣು ಅಸ್ತ್ರವನ್ನು ಪರೀಕ್ಷೆ ಮಾಡುತ್ತಿದ್ದಾನೆ. ಹೀಗಾಗಿ ಉತ್ತರ ಕೊರಿಯಾ ಸಂವಿಧಾನದಲ್ಲಿ ಆತನ ಪರಮಾಣು ಕೆಲಸಗಳಿಗೆ ಅಡ್ಡಿಯಾಗಿದ್ದ ಕಾನೂನು ತಿದ್ದುಪಡಿಗೆ ಮುಂದಾಗಿದ್ದಾನೆ. ಇದು ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿದೆ. ಕೇವಲ 1 ವರ್ಷದ ಅವಧಿಯಲ್ಲಿ ಕಿಮ್ ಜಾಂಗ್ ಉನ್ ಈಗಾಗಲೇ 100ಕ್ಕೂ ಹೆಚ್ಚು ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ಪರೀಕ್ಷೆ ನಡೆಸಿದ್ದಾನೆ.
ದಕ್ಷಿಣ ಕೊರಿಯಾಗೆ ಕಿಮ್ ಗುದ್ದು?
2 ದಿನಗಳ ಹಿಂದೆ ದಕ್ಷಿಣ ಕೊರಿಯಾ ಬೃಹತ್ ಮಟ್ಟದಲ್ಲಿ ತನ್ನ ಸೇನೆ ಮತ್ತು ತನ್ನಲ್ಲಿರುವ ವಿನಾಶಕಾರಿ ಅಸ್ತ್ರಗಳ ಪರೇಡ್ ನಡೆಸಿತ್ತು. ಕಳೆದ 10 ವರ್ಷದಲ್ಲಿ ದ.ಕೊರಿಯಾ ನಡೆಸಿದ ಬೃಹತ್ ಸೇನಾ ಪರೇಡ್ ಇದಾಗಿತ್ತು. ಹೀಗೆ ದಕ್ಷಿಣ ಕೊರಿಯಾವು ಸೇನಾ ಪರೇಡ್ ನಡೆಸಿದ ಒಂದೆರಡು ದಿನದ ಅಂತರದಲ್ಲಿ ಕಿಮ್ ಜಾಂಗ್ ಉನ್ ವಿನಾಶದ ಸೂಚನೆ ಕಳುಹಿಸಿದ್ದಾನೆ. ಉ.ಕೊರಿಯಾ ಸಂವಿಧಾನಕ್ಕೆ ತಿದ್ದುಪಡಿ ತಂದರೆ ಮನಸ್ಸಿಗೆ ಬಂದಂತೆ ಕಿಮ್ ಪರಮಾಣು ಪರೀಕ್ಷೆ ಮಾಡಬಹುದು. ಆದರೆ ಆತನ ತಲೆಯಲ್ಲಿ ಬೇರೆ ಯಾವ ಸ್ಕೆಚ್ ಇದೆಯೋ ಗೊತ್ತಿಲ್ಲ.

ದಿಢೀರ್ ಕಿರಿಕ್ ಶುರುವಾಗಿದ್ದು ಏಕೆ?
ದಕ್ಷಿಣ ಕೊರಿಯಾ 75ನೇ ಸೇನಾ ದಿನಾಚರಣೆ ಹಿನ್ನೆಲೆ ರಾಜಧಾನಿ ಸೋಲ್‌ನಲ್ಲಿ ಅದ್ಧೂರಿಯಾಗಿ ಸೇನಾ ಪರೇಡ್ ನಡೆಸಿತ್ತು. ಹೀಗೆ ಸೇನಾ ಕವಾಯತು ವೇಳೆ ದ.ಕೊರಿಯಾ ತನ್ನ ಉಗ್ರಾಣದಲ್ಲಿ ಇಟ್ಟಿದ್ದ ಭಯಾನಕ ಅಸ್ತ್ರಗಳನ್ನ ತೆಗೆದು ಕಿಮ್‌ಗೆ ವಾರ್ನಿಂಗ್ ಕೊಡ ಕೊಟ್ಟಿತ್ತು. ಇಷ್ಟೇ ಅಲ್ಲದೆ ಖುದ್ದು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ನೇರವಾಗಿ ಕಿಮ್ ಜಾಂಗ್ ಉನ್‌ಗೆ ವಾರ್ನ್ ಮಾಡಿದ್ದರು. ಅಕಸ್ಮಾತ್ ಉ.ಕೊರಿಯಾ ಪರಮಾಣು ಬಾಂಬ್ ಬಳಸಿದರೆ, ಆ ಕ್ಷಣ ಕಿಮ್ ಅಧಿಕಾರ ಕೊನೆಯಾಗಿ ಆಡಳಿತವೇ ನಾಶವಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ದರು ದಕ್ಷಿಣ ಕೊರಿಯಾ ಅಧ್ಯಕ್ಷ. ಈ ಘಟನೆ ಹಿನ್ನೆಲೆ ಈಗ ಕಿಮ್ ಪ್ರತಿಕ್ರಿಯೆ ನೀಡಿದ್ದಾನೆ ಎನ್ನಲಾಗಿದೆ.
ತಾಕತ್ ತೋರಿಸಿದ್ದ ದಕ್ಷಿಣ ಕೊರಿಯಾ!
ಇನ್ನು ಆಧುನಿಕ ಅಸ್ತ್ರಗಳ ಬಂಡಾರವನ್ನೇ ದಕ್ಷಿಣ ಕೊರಿಯಾ ಸಂಗ್ರಹ ಮಾಡಿಟ್ಟುಕೊಂಡಿದೆ ಅಂತಾ ಹೇಳಲಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಎಂದಿಗೂ ಅವುಗಳನ್ನು ಹೊರಗಡೆ ತೆಗೆದು ದಕ್ಷಿಣ ಕೊರಿಯಾ ಜಗತ್ತಿಗೆ ತೋರಿಸಿರಲಿಲ್ಲ. ಯಾವಾಗ ಕಿಮ್ ಜಾಂಗ್ ಉನ್ ರಷ್ಯಾಗೆ ಹೋಗಿ ಬಂದನೋ ಆ ದಿನದಿಂದಲೇ ತೊಡೆತಟ್ಟಿ ಅಖಾಡಕ್ಕೆ ಧುಮುಕಿತ್ತು ದಕ್ಷಿಣ ಕೊರಿಯಾ. ಹೀಗೆ ದಿನದಿಂದ ದಿನಕ್ಕೆ ತನ್ನ ಕೋಪ ಹೆಚ್ಚಿಸಿಕೊಳ್ಳುತ್ತಿದ್ದ ದಕ್ಷಿಣದ ನಾಯಕರು, ನೇರವಾಗಿ ತಮ್ಮಲ್ಲಿರುವ ಎಲ್ಲಾ ಅಸ್ತ್ರ ಪ್ರದರ್ಶನ ಮಾಡುವ ಮೂಲಕ ಕಿಮ್‌ಗೆ ಸೈಲೆಂಟ್ ಆಗಿರುವಂತೆ ಎಚ್ಚರಿಕೆ ನೀಡಿದ್ದರು. ಹೀಗೆ ಎಚ್ಚರಿಕೆ ಕೊಟ್ಟರೆ ಕಿಮ್ ಸುಮ್ಮನೆ ಇರ್ತಾನಾ? ನೀವೆ ಹೇಳಿ.












Click it and Unblock the Notifications