ಟ್ರಂಪ್ ಗೆ ಕ್ಷಿಪಣಿಯಲ್ಲೇ ಚುಚ್ಚಿದ ಉತ್ತರ ಕೊರಿಯ ಸರ್ವಾಧಿಕಾರಿ

Subscribe to Oneindia Kannada

ಬೆಂಗಳೂರು, ಫೆಬ್ರವರಿ 12: ಸದಾ ಅಮೆರಿಕಾದ ಜತೆ ಕಾಲು ಕೆರೆದು ಜಗಳಕ್ಕಿಳಿಯುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಈ ಬಾರಿ ಡೊನಾಲ್ಡ್ ಟ್ರಂಪ್ ರನ್ನೇ ಕೆಣಕಿದ್ದಾರೆ.

ಕ್ಷಿಪಣಿ ಉಡಾವಣೆ ಮಾಡಿರುವ ಉತ್ತರ ಕೊರಿಯಾ, ಟ್ರಂಪ್ ಪ್ರತಿಕ್ರಿಯೆ ಏನಿರಬಹುದು ಎಂಬುದನ್ನು ನೋಡಲಿ ಈ ಕ್ಷಿಪಣಿ ಪರೀಕ್ಷೆ ಮಾಡುತ್ತಿರುವುದಾಗಿ ಹೇಳಿದೆ. ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ಉತ್ತರ ಕೊರಿಯಾ ಪರೀಕ್ಷೆಗೆ ಒಳಪಡಿಸುತ್ತಿರುವ ಮೊದಲ ಕ್ಷಿಪಣಿ ಇದಾಗಿದೆ. [ಅಫ್ಘಾನಿಸ್ತಾನ ಸುಪ್ರಿಂ ಕೋರ್ಟ್ ಮೇಲೆ ಆತ್ಮಾಹುತಿ ದಾಳಿ; 19 ಕ್ಕೂ ಹೆಚ್ಚು ಸಾವು]

North Korea fires ballistic missile, to test the Trump’s response

ಕೊರಿಯಾದ ಪಶ್ಚಿಮ ಭಾಗಕ್ಕಿರುವ ಪ್ಯೊಂಗ್ಯನ್ ಪ್ರಾಂತ್ಯದ ಬ್ಯಾಂಗ್ಯಾನ್ ವಾಯುನೆಲೆಯಿಂದ ಭಾನುವಾರ ಸ್ಥಳೀಯ ಕಾಲಮಾನ 7:55 ಕ್ಕೆ ಈ ಕ್ಷಿಪಣಿ ಉಡಾವಣೆ ಮಾಡಲಾಗಿದೆ. ಜಪಾನಿನತ್ತ ಮುಖಮಾಡಿ ಉತ್ತರ ಕೊರಿಯಾ ಈ ಕ್ಷಿಪಣಿ ಉಡಾಯಿಸಿದ್ದು 550 ಕಿಲೋ ಮೀಟರ್ ದೂರ ಕ್ರಮಿಸಿದೆ. ಇದರಿಂದ ಜಪಾನ್ ಬೆಚ್ಚಿ ಬಿದ್ದಿದೆ. ಆದರೆ ಯಾವುದೇ ಭಯ ಪಡಬೇಡಿ ನಾನಿದ್ದೇನೆ ಅಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಡ್ರಂಪ್ ಜಪಾನ್ ಅಧ್ಯಕ್ಷ ಶಿಂಜೋ ಅಭೆಗೆ ಅಭಯ ನೀಡಿದ್ದಾರೆ.

ಶಿಂಜೋ ಅಭೆ ಅಮೆರಿಕಾ ಪ್ರವಾಸ ಕೈಗೊಂಡಿದ್ದು ಇದೇ ವೇಳೆಯಲ್ಲಿ ಉತ್ತರ ಕೊರಿಯಾ ಈ ಕ್ಷಿಪಣಿ ಪರೀಕ್ಷೆ ಮಾಡಿ ಜಪಾನ್ ಮತ್ತು ಅಮೆರಿಕಾ ಎರಡೂ ದೇಶಗಳನ್ನು ಕೆಣಕಿದೆ. ಅಧ್ಯಕ್ಷರಾದ ನಂತರ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ಡೊನಾಲ್ಡ್ ಟ್ರಂಪ್ ಇದಕ್ಕೆ ಏನು ಪ್ರತಿಕ್ರಿಯೆ ನೀಡುತ್ತಾರೋ ಗೊತ್ತಿಲ್ಲ. [ಅಫ್ಘಾನಿಸ್ತಾನದಲ್ಲಿ ಭೀಕರ ಹಿಮ ಕುಸಿತ; 100ಕ್ಕೂ ಹೆಚ್ಚು ಸಾವು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
North Korea has fired a ballistic missile in an apparent provocation to test the response from United States President Donald Trump. It is the first such test since Donald Trump took office as US president.
Please Wait while comments are loading...