ಅಣ್ಣನನ್ನೇ ವಿಷವುಣಿಸಿ ಕೊಂದ ಉತ್ತರ ಕೊರಿಯಾ ಸರ್ವಾಧಿಕಾರಿ?

Subscribe to Oneindia Kannada
ಬೆಂಗಳೂರು, ಫೆಬ್ರವರಿ 16: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರ ಕಿಮ್ ಜಾಂಗ್ ನಾಮ್ ರನ್ನು ಮಲೇಷಿಯಾದಲ್ಲಿ ಕೊಲೆ ಮಾಡಲಾಗಿದೆ. ಜನನಿಬಿಡ ಕೌಲಾಲಂಪುರ್ ವಿಮಾನ ನಿಲ್ದಾಣದಲ್ಲಿ ಇಬ್ಬರು ಯುವತಿಯರು ವಿಷ ರಾಸಾಯನಿಕ ಸ್ಪ್ರೇ ಮಾಡಿ ಆತನನ್ನು ಕೊಂದಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಇಬ್ಬರು ಯುವತಿಯರನ್ನು ಮಲೇಷ್ಯಾ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನುಳಿದ 4 ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಿಮ್ ಜಾಂಗ್ ನಾಮ್ ಸೋಮವಾರ ಸಾವನ್ನಪ್ಪಿದ್ದು ಕೌಲಾಲಂಪುರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೀನಾದ ಮಕಾವ್ ಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.[ಮಡಿವಂತಿಕೆ ಮಡಚಿಟ್ಟು ಮತ್ತೆ ನಗ್ನ ಚಿತ್ರ ಮುದ್ರಿಸಿದ 'ಪ್ಲೇಬಾಯ್']

North Korea Dictator Kim Jong Un’s Brother Killed in Malasia

ಉತ್ತರ ಕೊರಿಯಾದಿಂದ ಕಿಮ್ ಜಾಂಗ್ ನಾಮ್ ರನ್ನು ಗಡಿಪಾರು ಮಾಡಲಾಗಿತ್ತು. ನಂತರ ನಾಮ್ ತಮ್ಮಷ್ಟಕ್ಕೆ ತಾವೇ ಜೀವಿಸಿಕೊಂಡಿದ್ದರು. ಕಳೆದ ಕಲೆವು ವರ್ಷಗಳಿಂದ ಚೀನಾ ಈತನ ಭದ್ರತೆಗಳನ್ನು ನೋಡಿಕೊಳ್ಳುತ್ತಿತ್ತು ಎನ್ನಲಾಗಿದೆ. ಸಾರ್ವಜನಿಕವಾಗಿ ಅಷ್ಟಾಗಿ ಗುರುತಿಸಿಕೊಳ್ಳದ ನಾಮ್, ತಮ್ಮ ಕಿಮ್ ಜಾಂಗ್ ಉನ್ ಸರ್ವಾಧಿಕಾರಿ ನಡವಳಿಕೆಯನ್ನು ಮಾತ್ರ ವಿರೋಧಿಸುತ್ತಾ ಬಂದಿದ್ದರು.[ಟ್ರಂಪ್ ಗೆ ಕ್ಷಿಪಣಿಯಲ್ಲೇ ಚುಚ್ಚಿದ ಉತ್ತರ ಕೊರಿಯ ಸರ್ವಾಧಿಕಾರಿ]

ಉತ್ತರ ಕೊರಿಯಾವೇ ಕಿಮ್ ಜಾಂಗ್ ನಾಮ್ ರನ್ನು ಕೊಲೆ ಮಾಡಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಉತ್ತರ ಕೊರಿಯಾದ ಇಬ್ಬರು ಗೂಢಚರರು ಈ ಕೊಲೆ ಮಾಡಿದ್ದಾರೆ ಎಂದು ಅದು ಶಂಕೆ ವ್ಯಕ್ತಪಡಿಸಿದೆ. ಒಂದೊಮ್ಮೆ ಈ ಸುದ್ದಿ ನಿಜವೇ ಆಗಿದ್ದರೆ, ಈ ಘಟನೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರ ಕ್ರೂರತೆಗೆ ಹಿಡಿದ ಕೈಗನ್ನಡಿಯಾಗಲಿದೆ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಹ್ಯಾಂಗ್ ಕ್ಯೊ ಆನ್ ಹೇಳಿದ್ದಾರೆ.

ಕೌಲಾಲಂಪುರ್ ನಿಲ್ದಾಣದ ಶಾಪಿಂಗ್ ಮಾಲಿನಲ್ಲಿದ್ದ ಸಂದರ್ಭ 46 ವರ್ಷದ ನಾಮ್ ಮೇಲೆ ಕೆಮಿಕಲ್ ಸ್ಪ್ರೇಯಿಂದ ದಾಳಿ ಮಾಡಲಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಅವರನ್ನು ಉತ್ತರ ಕೊರಿಯಾ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಬೇಡಿಕೆ ಹಿಂದಿನಿಂದಿಲೂ ಇತ್ತು. ಆದರೆ ಕಿಮ್ ಜಾಂಗ್ ನಾಮ್ ಮಾತ್ರ ಸಿಂಗಾಪುರ, ಮಲೇಷ್ಯಾ, ಮಕಾವ್ ಗಳಲ್ಲೇ ವಾಸಿಸುತ್ತಿದ್ದರು. ದೇಶಕ್ಕೆ ಹೋಗುತ್ತಿರಲಿಲ್ಲ. 2012ರಲ್ಲೂ ಕಿಮ್ ಜಾಂಗ್ ನಾಮ್ ಕೊಲೆ ಮಾಡುವ ಪ್ರಯತ್ನ ನಡೆದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kim Jong Nam was killed on Monday after apparently being poisoned while waiting to board a flight in Kuala Lumpur International Airport, Malaysia. Nam was the half brother of North Korean leader Kim Jong Un.
Please Wait while comments are loading...