ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕೊರಿಯಾದಲ್ಲಿ 11 ದಿನ 'ನಗು' ಕೂಡ ಬ್ಯಾನ್!

|
Google Oneindia Kannada News

ಉತ್ತರ ಕೊರಿಯಾ ಸರ್ಕಾರವು ಮಾಜಿ ನಾಯಕ ಕಿಮ್ ಜಾಂಗ್ ಇಲ್ 10ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಉತ್ತರ ಕೊರಿಯಾದಲ್ಲಿ 11 ದಿನಗಳ ಕಾಲ ನಗು, ಮದ್ಯಪಾನ ಹಾಗೂ ಶಾಪಿಂಗ್ ನಿಷೇಧಿಸಿದೆ.

ನಿಷೇಧಿಸಲಾಗಿದ್ದು, ಶೋಕಾಚರಣೆ ನಡೆಸುವಂತೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

2025ರವರೆಗೆ ಕಡಿಮೆ ಆಹಾರ ಸೇವಿಸುವಂತೆ ಕಿಮ್‌ ಜಾಂಗ್ ಉನ್ ಮನವಿ2025ರವರೆಗೆ ಕಡಿಮೆ ಆಹಾರ ಸೇವಿಸುವಂತೆ ಕಿಮ್‌ ಜಾಂಗ್ ಉನ್ ಮನವಿ

ಈ ಕುರಿತಂತೆ ಈಶಾನ್ಯ ಗಡಿ ನಗರವಾದ ಸಿನುಯಿಜುವಿನ ನಾಗರಿಕರೊಬ್ಬರು ರೇಡಿಯೋ ಫ್ರೀ ಏಷ್ಯಾಗೆ ಪ್ರತಿಕ್ರಿಯಿಸಿದ್ದು, ಪ್ರಜೆಗಳು ಮದ್ಯಪಾನ, ದಿನಸಿ, ಶಾಪಿಂಗ್ ಮಾಡಬಾರದು ಮತ್ತು ವಿರಾಮ ಚಟುವಟಿಕೆಯಲ್ಲಿ ತೊಡಗಬಾರದು. ಒಂದು ವೇಳೆ 11 ದಿನಗಳ ಶೋಕಾಚರಣೆಯ ಅವಧಿಯಲ್ಲಿ ಈ ನಿಯಮಗಳನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಿರುವುದಾಗಿ ತಿಳಿಸಿದ್ದಾರೆ.

North Korea Bans Citizens From Laughing, Drinking And Shopping For 11 Days

ಕಿಮ್ ಜಾಂಗ್ ಇಲ್ ಅವರ ಪುಣ್ಯತಿಥಿಯ ಪ್ರಯುಕ್ತ ಉತ್ತರ ಕೊರಿಯಾದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇವುಗಳಲ್ಲಿ ಅವರ ಫೋಟೋ ಮತ್ತು ಪೇಟಿಂಗ್ ಅನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ ಮತ್ತು ಸಂಗೀತ ಕಚೇರಿಯನ್ನು ಏರ್ಪಡಿಸಲಾಗಿದೆ.

ಈ ಮುನ್ನ ಶೋಕಾಚರಣೆಯ ವೇಳೆ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಕೆಲವರನ್ನು ಬಂಧಿಸಿ ಅವರನ್ನು ಸೈದ್ಧಾಂತಿಕ ಅಪರಾಧಿಗಳೆಂದು ಪರಿಗಣಿಸಿ ಪೊಲೀಸರು ಕರೆದೊಯ್ದಿದ್ದರು. ಆದರೆ ಮತ್ತೆ ಅವರು ಕಾಣಿಸಿಕೊಂಡಿಲ್ಲ. ಅಲ್ಲದೇ ಶೋಕಾಚರಣೆಯ ಸಮಯದಲ್ಲಿ ಕುಟುಂಬದ ಸದಸ್ಯರೇ ಸತ್ತರೂ ಜೋರಾಗಿ ಅಳುವಂತಿಲ್ಲ. ಶೋಕಾಚರಣೆ ಮುಗಿದ ನಂತರವಷ್ಟೇ ದೇಹವನ್ನು ಹೊರತೆಗೆಯಬೇಕು.

ಶೋಕ ದಿನಗಳಲ್ಲಿ ಜನ್ಮದಿನವನ್ನು ಆಚರಿಸಿಕೊಳ್ಳುವಂತಿಲ್ಲ. ಶೋಕಾಚರಣೆಯ ಅವಧಿಯಲ್ಲಿ ಮನಸ್ಥಿತಿಗೆ ಹಾನಿ ಮಾಡುವವರನ್ನು ಗುರುತಿಸಿ ಶಿಕ್ಷಿಸಲು ಪೊಲೀಸರಿ ಅಧಿಕಾರ ನೀಡಲಾಗಿರುವುದಾಗಿ ತಿಳಿಸಿದ್ದಾರೆ.

ನೈಋತ್ಯ ಪ್ರಾಂತ್ಯದ ದಕ್ಷಿಣ ಹ್ವಾಂಗ್‌ಹೇಯ ಮತ್ತೊಂದು ಮೂಲವು ತನ್ನ ಪ್ರತಿಕ್ರಿಯೆಯಲ್ಲಿ, ಶೋಕಾಚರಣೆಯ ಅವಧಿಯಲ್ಲಿ ಸೂಕ್ತವಾಗಿ ದುಃಖ ವ್ಯಕ್ತಪಡಿಸಲು ವಿಫಲರಾದ ಜನರನ್ನು ವೀಕ್ಷಿಸಲೆಂದೇ ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

''ಡಿಸೆಂಬರ್ ಮೊದಲ ದಿನದಿಂದ, ಸಾಮೂಹಿಕ ಶೋಕಾಚರಣೆಯ ಮನಸ್ಥಿತಿಗೆ ಹಾನಿ ಮಾಡುವವರನ್ನು ದಮನ ಮಾಡುವ ವಿಶೇಷ ಕರ್ತವ್ಯವನ್ನು ಪೊಲೀಸರು ಹೊಂದಿರುತ್ತಾರೆ. ಇದು ಪೊಲೀಸರಿಗೆ ಒಂದು ತಿಂಗಳ ವಿಶೇಷ ಕರ್ತವ್ಯವಾಗಿದ್ದು, ಕಾನೂನು ಜಾರಿ ಅಧಿಕಾರಿಗಳು ನಿದ್ರಿಸಲೂ ಸಮಯವಿಲ್ಲ ಎಂದು ನಾನು ಕೇಳಿದೆ'' ಎಂದು ಪ್ರತಿಕ್ರಿಯಿಸಿದ್ದಾರೆ.

ಉತ್ತರ ಕೊರಿಯಾದಲ್ಲಿ ಸದ್ಯ ಆಹಾರ ಬಿಕ್ಕಟ್ಟಿನ ಸಮಸ್ಯೆಯಿದೆ. ಆದ್ದರಿಂದ ಶೋಕಾಚರಣೆಯ ಅವಧಿಯಲ್ಲಿ ಬಡತನದಲ್ಲಿರುವವರನ್ನು ನೋಡಿಕೊಳ್ಳಲು ನಾಗರಿಕರ ಗುಂಪುಗಳು ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಆದೇಶಿಸಲಾಗಿದೆ ಎಂದು ಮೂಲವು ತಿಳಿಸಿದೆ.

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶದ ಅಡಿಯಲ್ಲಿ, ಉತ್ತರ ಕೊರಿಯಾದ ಜನರು ಡಿಸೆಂಬರ್ 17 ರಂದು ದಿನಸಿ ವಸ್ತುಗಳನ್ನು ಖರೀದಿಸಲು ಸಹ ಅನುಮತಿಯಿಲ್ಲ. ಪಾಲಿಸದವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಕಳೆದ ವರ್ಷವೂ ರಾಷ್ಟ್ರೀಯ ಶೋಕಾಚರಣೆಯ ಸಂದರ್ಭದಲ್ಲಿ, ಮದ್ಯಪಾನ ಅಥವಾ ಅಮಲು ಪದಾರ್ಥ ಸೇವಿಸಿದ ಜನರನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಶೋಕಾಚರಣೆಯ ಸಮಯದಲ್ಲಿ ಯಾರಾದರೂ ಸತ್ತರೆ, ಅವರ ಕುಟುಂಬದವರು ಕೂಡ ಅಳಲು ಅನುಮತಿ ಇಲ್ಲದಾಗಿದೆ. ಅಲ್ಲದೆ, ಈ ಅವಧಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸುವವರು ಕೂಡ ಜನ್ಮದಿನವನ್ನು ಆಚರಿಸುವಂತಿಲ್ಲ. ಒಟ್ಟಿನಲ್ಲಿ ಇಡೀ 11 ದಿನ ಜನರು ಬೇಡವೆಂದರೂ ಈ ನಿಯಮವನ್ನು ಪಾಲಿಸಲೇ ಬೇಕು. ಇಲ್ಲದಿದ್ದರೆ ಶಿಕ್ಷೆ ತಪ್ಪಿದಲ್ಲ.

ಪೊಲೀಸರು ದಕ್ಷಿಣ ಹ್ವಾಂಘೆಯ ನೈಋತ್ಯ ಪ್ರಾಂತ್ಯದಲ್ಲೂ ಜನರ ಮೇಲೆ ನಿಕಟ ನಿಗಾ ಇಟ್ಟಿದ್ದಾರೆ. ರಾಷ್ಟ್ರೀಯ ಶೋಕಾಚರಣೆಯ ಸಮಯದಲ್ಲಿ ದುಃಖ ಅಥವಾ ದುಃಖ ತೋರದ ವ್ಯಕ್ತಿಯನ್ನು ಪೊಲೀಸರು ಬಂಧಿಸಬಹುದು. ಈ 11 ದಿನಗಳ ಅವಧಿ ಪೊಲೀಸ್ ಅಧಿಕಾರಿಗಳಿಗೂ ತೊಂದರೆಯಾಗಿದೆ. ಏಕೆಂದರೆ ಯಾರಾದರೂ ಆದೇಶವನ್ನು ಉಲ್ಲಂಘಿಸಿದಂತೆ ನೋಡಿಕೊಳ್ಳಬೇಕಾಗಿದೆ.

English summary
North Korea has imposed a ban on its citizens barring them from laughing, drinking and grocery shopping for the next 11 days starting Friday to mark the tenth anniversary of former leader Kim Jong Il’s death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X