• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಫೇಲ್ ಡೀಲ್: ರಿಲಯನ್ಸ್ ಹೆಸರನ್ನು ನಾನು ಸೂಚಿಸಿಲ್ಲ ಎಂದ ಫ್ರಾನ್ಸ್

|

ಪ್ಯಾರಿಸ್, ಸೆಪ್ಟೆಂಬರ್ 22: ರಫೇಲ್ ಖರೀದಿಗಾಗಿ ಭಾರತೀಯ ಪಾಲುದಾರರನ್ನು ಆಯ್ಕೆ ಮಾಡಿದ್ದರಲ್ಲಿ ನನ್ನ ಪಾತ್ರವಿಲ್ಲ ಎಂದು ಫ್ರಾನ್ಸ್ ನ ವಿದೇಶಾಂಗ ಸಚಿವಾಲಯ ತಿಳಿಸಿದೆ.

ರಫೇಲ್ ಯುದ್ಧ ವಿಮಾನ ತಯಾರಿಕೆಗೆ ಅನಿಲ್ ಅಂಬಾನಿ ಅವರ ಡಿಫೆನ್ಸ್ ಇಂಡಸ್ಟ್ರೀಸ್ ಅನ್ನು ನಾಮನಿರ್ದೇಶನ ಮಾಡುವಂತೆ ಭಾರತ ಸರ್ಕಾರವೇ ಫ್ರೆಂಚ್ ಸರ್ಕಾರವನ್ನು ಕೋರಿತ್ತು ಎಂಬ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೋ ಒಲಾಂಡ್ ಹೇಳಿದ ಮಾತಿಗೆ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.

ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ

ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಭಾರತ ಮತ್ತು ಫ್ರಾನ್ಸ್ ಒಪ್ಪಂದ ಮಾಡಿಕೊಂಡಿದ್ದು, ಯುದ್ಧ ವಿಮಾನದ ಬಿಡಿಭಾಗಗಳ ತಯಾರಿಕೆಗೆ ಎಚ್ ಎ ಎಲ್ ಬದಲಾಗಿ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಅನ್ನು ಭಾರತ ಸರ್ಕಾರ ಆಯ್ಕೆ ಮಾಡಿಕೊಂಡಿದ್ದು ಭಾರೀ ವಿವಾದ ಸೃಷ್ಟಿಸಿತ್ತು.

ಆದರೆ ರಿಲಯನ್ಸ್ ಅನ್ನೇ ಭಾರತ ರಫೇಲ್ ಯುದ್ಧ ವಿಮಾನ ತಯಾರಿಕೆ ತನ್ನ ಪಾಲುದಾರ ಸಂಸ್ಥೆಯನ್ನಾಗಿ ಆಯ್ಕೆ ಮಾಡಲು ತನ್ನ ಪಾತ್ರವೇನೂ ಇಲ್ಲ, ಅದು ಭಾರತ ಸರ್ಕಾರದ ನಿರ್ಧಾರ ಎಂದು ಫ್ರಾನ್ಸ್ ಸ್ಪಷ್ಟಪಡಿಸಿದೆ.

ಎಚ್‌ಎಎಲ್‌ಗೆ ಸಿಗದ ಅವಕಾಶ: ಸಚಿವೆ ನಿರ್ಮಲಾ ಸುಳ್ಳು ಹೇಳಿದರೇ?

ಶುಕ್ರವಾರ ಮಾತನಾಡಿದ್ದ ಫ್ರಾನ್ಸ್ ಮಾಜಿ ಅಧ್ಯಕ್ಷ ಒಲಾಂಡ್, 'ರಿಲಯನ್ಸ್ ಕಂಪನಿಯನ್ನೇ ಯುದ್ಧ ವಿಮಾನ ತಯಾರಿಕೆಗೆ ಸೂಚಿಸುವಂತೆ ಭಾರತ ಫ್ರಾನ್ಸ್ ಸರ್ಕಾರವನ್ನು ಕೋರಿತ್ತು' ಎಂಬ ಸ್ಫೋಟಕ ಹೇಳಿಕೆ ನೀಡಿದ್ದರು. ಈ ಕುರಿತು ಕೇಂದ್ರ ಸರ್ಕಾರವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದು, ಮುಂಬರುವ ಲೋಕಸಭಾ ಚುನಾವಣೆಯ ಹೊತ್ತಿಗೆ ರಫೇಲ್ ಡೀಲ್, ಆಡಳಿತಾರೂಢ ಎನ್ ಡಿಎ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ.

English summary
Spokesperson of France's Ministry of Europe and Foreign Affairs said that the French government had no role to play in choosing partner companies in India for the purpose of offsets contracts in the Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X