ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Swami Nithyananda: ನಿತ್ಯಾನಂದನ ಕೈಲಾಸ: 30 ಯುಎಸ್ ನಗರಗಳಲ್ಲಿ ಸಿಸ್ಟರ್ ಸಿಟಿ ಹಗರಣ: ವರದಿ

ನಿತ್ಯಾನಂದನ 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ' ಅಮೆರಿಕದ 30 ಕ್ಕೂ ಹೆಚ್ಚು ನಗರಗಳೊಂದಿಗೆ "ಸಾಂಸ್ಕೃತಿಕ ಪಾಲುದಾರಿಕೆ" ಗೆ ಸಹಿ ಹಾಕಿದೆ ಎಂದು ಮಾಧ್ಯಮ ವರದಿಯೊಂದು ಇತ್ತೀಚೆಗೆ ತಿಳಿಸಿದೆ.

|
Google Oneindia Kannada News

ನ್ಯೂಯಾರ್ಕ್ ಮಾರ್ಚ್ 18: ಅತ್ಯಾಚಾರ ಆರೋಪದಿಂದ ದೇಶ ಬಿಟ್ಟಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಮತ್ತೆ ಸುದ್ದಿಗೆ ಬಂದಿದ್ದಾನೆ. ದೇಶವನ್ನು ಬಿಟ್ಟು ಪರಾರಿಯಾಗಿರುವ ನಿತ್ಯಾನಂದ ಈಕ್ವೆಡಾರ್‌ನ ಕರಾವಳಿಯಲ್ಲಿ ನೆಲೆಗೊಂಡಿರುವ ಒಂದು ದ್ವೀಪದಲ್ಲಿ ತನ್ನದೇ ಆದ ಕೈಲಾಸ ಎಂಬ ದೇಶವನ್ನು ನಿರ್ಮಾಣಮಾಡಿಕೊಂಡಿದ್ದಾನೆ.

ಇದರೊಂದಿಗೆ ನಿತ್ಯಾನಂದನ 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ' ಅಮೆರಿಕದ 30 ಕ್ಕೂ ಹೆಚ್ಚು ನಗರಗಳೊಂದಿಗೆ "ಸಾಂಸ್ಕೃತಿಕ ಪಾಲುದಾರಿಕೆ" ಗೆ ಸಹಿ ಹಾಕಿದೆ ಎಂದು ಮಾಧ್ಯಮ ವರದಿಯೊಂದು ಇತ್ತೀಚೆಗೆ ತಿಳಿಸಿದೆ. ಆದರೆ ಒಪ್ಪಂದ ಮಾಡಿಕೊಂಡಿರುವ ದೇಶಗಳಿಗೆ ನಿತ್ಯಾನಂದ ಅಥವಾ ಕೈಲಾಸದ ಅಸಲಿಯತ್ತುಗಳು ತಿಳಿಯದೇ ಇರುವುದು ಪರಿಶೀಲನೆ ಬಳಿಕ ತಿಳಿದು ಬಂದಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ನೆವಾರ್ಕ್ ಮತ್ತು ನಕಲಿ "ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ" ನಡುವಿನ 'ಸಹೋದರ-ನಗರ' ಒಪ್ಪಂದಕ್ಕೆ ಈ ವರ್ಷ ಜನವರಿ 12 ರಂದು ಸಹಿ ಹಾಕಲಾಗಿದೆ. ಸಹಿ ಮಾಡುವ ಸಮಾರಂಭ ನೆವಾರ್ಕ್‌ನ ಸಿಟಿ ಹಾಲ್‌ನಲ್ಲಿ ನಡೆದಿದೆ. ಆಶ್ಚರ್ಯ ಅಂದರೆ ನೆವಾರ್ಕ್ ಗೆ ಒಪ್ಪಂದದ ವೇಳೆ ಕೈಲಾಸದ ಬಗ್ಗೆ ಆಗಲಿ ಅಥವಾ ನಿತ್ಯಾನಂದನ ಬಗ್ಗೆಯಾಗಲಿ ತಿಳಿದಿರಲಿಲ್ಲ. ತಿಳಿದ ಬಳಿಕ ಈ ಕಾಲ್ಪನಿಕ ದೇಶದೊಂದಿಗೆ 'ಸಿಸ್ಟರ್ ಸಿಟಿ' ಒಪ್ಪಂದವನ್ನು ನೆವಾರ್ಕ್ ರದ್ದುಗೊಳಿಸಿದೆ.

ಕೈಲಾಸದೊಂದಿಗೆ ಸಾಂಸ್ಕೃತಿಕ ಪಾಲುದಾರಿಕೆಗೆ ಸಹಿ

ಕೈಲಾಸದೊಂದಿಗೆ ಸಾಂಸ್ಕೃತಿಕ ಪಾಲುದಾರಿಕೆಗೆ ಸಹಿ

ನಿತ್ಯಾನಂದ 2019 ರಲ್ಲಿ "ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ" ಎಂಬ ದೇಶವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾನೆ. ಈ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ವೆಬ್‌ಸೈಟ್ ಪ್ರಕಾರ, 30 ಕ್ಕೂ ಹೆಚ್ಚು ಅಮೇರಿಕನ್ ನಗರಗಳು ನಕಲಿ ರಾಷ್ಟ್ರವಾದ ಕೈಲಾಸದೊಂದಿಗೆ ಸಾಂಸ್ಕೃತಿಕ ಪಾಲುದಾರಿಕೆಗೆ ಸಹಿ ಹಾಕಿವೆ. ರಿಚ್ಮಂಡ್, ವರ್ಜೀನಿಯಾದಿಂದ ಡೇಟನ್, ಓಹಿಯೋ, ಬ್ಯೂನಾ ಪಾರ್ಕ್, ಫ್ಲೋರಿಡಾದವರೆಗಿನ ನಗರಗಳು ಕೈಲಾಸದೊಂದಿಗೆ ಸಾಂಸ್ಕೃತಿಕ ಪಾಲುದಾರಿಕೆಗೆ ಸಹಿ ಹಾಕಿವೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಆದರೆ ಸುಪ್ರೀಂ ಕೋರ್ಟ್ ನಕಲಿ ಮಠಾಧೀಶ ನಿತ್ಯಾನಂದ ವಂಚಿಸಿದ ನಗರಗಳ ದೀರ್ಘ ಪಟ್ಟಿಯನ್ನು ಹೊಂದಿದೆ. ಹೀಗಾಗಿ ಈ ಕಾಲ್ಪನಿಕ ದೇಶದೊಂದಿಗೆ ಒಪ್ಪಂದದ ಮುನ್ನೆಚ್ಚರಿಕೆಗಳನ್ನು ನೀಡಿದೆ. ನಿತ್ಯಾನಂದನ ಬಗ್ಗೆ ತಿಳಿಯದ ಹಲವು ದೇಶಗಳು ಒಪ್ಪಂದದ ಬಳಿಕ ಮೋಸ ಹೋಗಿವೆ. ಇನ್ನೂ ಹಲವು ಕೈಲಾಸವನ್ನು ನಂಬಿ ಒಪ್ಪಂದ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಫಾಕ್ಸ್ ನ್ಯೂಸ್ ಪರಿಶೀಲನೆ

ಫಾಕ್ಸ್ ನ್ಯೂಸ್ ಪರಿಶೀಲನೆ

ಹೀಗಾಗಿ ನಕಲಿ ರಾಷ್ಟ್ರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಕುರಿತು ಪ್ರತಿಕ್ರಿಯೆಗಾಗಿ ಯುಎಸ್‌ನ ಕೆಲವು ನಗರಗಳನ್ನು ತಲುಪಿ ಫಾಕ್ಸ್ ನ್ಯೂಸ್ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದೆ. ಇಲ್ಲಿಯವರೆಗೆ ಹೆಚ್ಚಿನ ನಗರಗಳು ನೆವಾರ್ಕ್ ಹಾಗೂ ಕೈಲಾಸದ ಸಿಸ್ಟರ್ ಸಿಟಿ ಒಪ್ಪಂದ ಘೋಷಣೆಗಳು ನಿಜವೆಂದು ದೃಢಪಡಿಸಿವೆ ಎಂದು ವರದಿ ಹೇಳಿದೆ.

ನಾರ್ತ್ ಕೆರೊಲಿನಾದ ಜ್ಯಾಕ್ಸನ್‌ವಿಲ್ಲೆ, ಫಾಕ್ಸ್ ನ್ಯೂಸ್‌ಗೆ ಮಾತನಾಡಿ: "ಕೈಲಾಸದೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ನಿಜ ಮತ್ತು ಯಾವ ಎಚ್ಚರಿಯ ಬಗ್ಗೆ ನಮಗೆ ಮಾಹಿತಿ ತಿಳಿದಿಲ್ಲ" ಎಂದಿದ್ದಾರೆ. ಒಪ್ಪಂದ ಮಾಡಿಕೊಳ್ಳುತ್ತಿರುವ ರಾಷ್ಟ್ರಗಳು ನಕಲಿ ರಾಷ್ಟ್ರದ ಬಗ್ಗೆ ಮಾಹಿತಿಗಾಗಿ "ಗೂಗ್ಲಿಂಗ್" ಕೂಡ ಮಾಡುತ್ತಿಲ್ಲ ಎಂದು ಫಾಕ್ಸ್ ನ್ಯೂಸ್ ನಗರಗಳನ್ನು ದೂಷಿಸಿದೆ.

ಹೀಗಾಗಿ ಫಾಕ್ಸ್ ನ್ಯೂಸ್ ಈ ಬಗ್ಗೆ ಮಾಹಿತಿಯನ್ನು ನೀಡಿ, ಅದೊಂದು ವಿಲಕ್ಷಣ ಹಿಂದೂ ದ್ವೀಪ, ಅವರು ನಿಮ್ಮ ಹೆಸರನ್ನು ಬೀದಿಗೆ ತರುತ್ತಿದ್ದಾರೆ ಎಂದು ಮನವರಿಕೆ ಮಾಡಿದೆ. ಈ ನಕಲಿ ರಾಷ್ಟ್ರಕ್ಕೆ ಕೇವಲ ಮೇಯರ್‌ಗಳು ಅಥವಾ ಸಿಟಿ ಕೌನ್ಸಿಲ್‌ಗಳಲ್ಲ, ಫೆಡರಲ್ ಸರ್ಕಾರವನ್ನು ನಡೆಸುತ್ತಿರುವ ಜನರೂ ಬೀಳುತ್ತಿದ್ದಾರೆ ಎಂದು ವರದಿ ಹೇಳುತ್ತದೆ.

ನಕಲಿ ಗುರು ನಿತ್ಯಾನಂದನಿಂದ ಮೋಸ

ನಕಲಿ ಗುರು ನಿತ್ಯಾನಂದನಿಂದ ಮೋಸ

ನಕಲಿ ಗುರು ನಿತ್ಯಾನಂದನ ಪ್ರಕಾರ, ಕಾಂಗ್ರೆಸ್‌ನ ಇಬ್ಬರು ಸದಸ್ಯರು ಕೈಲಾಸಕ್ಕೆ "ವಿಶೇಷ ಕಾಂಗ್ರೆಸ್ ಮಾನ್ಯತೆ" ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಅವರಲ್ಲಿ ಒಬ್ಬರು ಕ್ಯಾಲಿಫೋರ್ನಿಯಾದ ಕಾಂಗ್ರೆಸ್ ಮಹಿಳೆ ನಾರ್ಮಾ ಟೊರೆಸ್, ಅವರು ಹೌಸ್ ಅಪ್ರೊಪ್ರಿಯೇಷನ್ಸ್ ಕಮಿಟಿಯಲ್ಲಿದ್ದಾರೆ. ಕೈಲಾಸದ ದೇವಮಾನವನಿಗೆ ವಿದೇಶಗಳ ಸಹಾಯ ಇರುವುದರಿಂದ ವಂಚನೆಗೆ ಸುಲಭ ದಾರಿಯಾಗುತ್ತಿದೆ ಎಂದು ಫಾಕ್ಸ್ ನ್ಯೂಸ್ ಹೇಳಿದೆ.

ಈ ತಿಂಗಳ ಆರಂಭದಲ್ಲಿ, ನೆವಾರ್ಕ್ ನಗರದ ಸಂವಹನ ವಿಭಾಗದ ಪತ್ರಿಕಾ ಕಾರ್ಯದರ್ಶಿ ಸುಸಾನ್ ಗರೊಫಾಲೊ ಅವರು ಪಿಟಿಐಗೆ ಇಮೇಲ್‌ನಲ್ಲಿ ಹೀಗೆ ಬರೆದಿದ್ದಾರೆ- "ನಾವು ಕೈಲಾಸ ಸುತ್ತಮುತ್ತಲಿನ ಪರಿಸ್ಥಿತಿಗಳ ಬಗ್ಗೆ ತಿಳಿದ ತಕ್ಷಣ, ನೆವಾರ್ಕ್ ನಗರವು ಜನವರಿ 18 ರಂದು ತಕ್ಷಣ ಕ್ರಮ ಕೈಗೊಂಡು ಸಹೋದರಿ ನಗರ ಒಪ್ಪಂದವನ್ನು ರದ್ದುಗೊಳಿಸಿದೆ."

ನಿತ್ಯಾನಂದನ ಬಗ್ಗೆ ತಿಳಿಯ ಸತ್ಯ-ವಿದೇಶಗಳಿಗೆ ವಂಚನೆ

ನಿತ್ಯಾನಂದನ ಬಗ್ಗೆ ತಿಳಿಯ ಸತ್ಯ-ವಿದೇಶಗಳಿಗೆ ವಂಚನೆ

ಲಾರ್ಜ್ ಲೂಯಿಸ್ ಕ್ವಿಂಟಾನಾದಲ್ಲಿ ನೆವಾರ್ಕ್ ಕೌನ್ಸಿಲ್ಮನ್ ಒಪ್ಪಂದವನ್ನು ರದ್ದುಗೊಳಿಸಿದರು. ಬಳಿಕ ಅವರು ಮಾತನಾಡಿ, ಯಾವುದೇ ನಗರ ಸಿಸ್ಟರ್ ಸಿಟಿ ಒಪ್ಪಂದಕ್ಕೆ ಪ್ರವೇಶಿಸುವುದಕ್ಕೆ 'ಮಾನವ ಹಕ್ಕುಗಳ ಉತ್ತಮ ಗುಣಮಟ್ಟವನ್ನು ಹೊಂದಿರಬೇಕು'."ನಾವು ಸಿಸ್ಟರ್ ಸಿಟೀಸ್ ಇಂಟರ್ನ್ಯಾಷನಲ್ ಅನ್ನು ವಿವಾದವಿರುವ ಸಮಸ್ಯೆಗೆ ತರಲು ಸಾಧ್ಯವಿಲ್ಲ. ಇದು ಪ್ರಮಾದವಾಗಿದೆ, ಇನ್ನು ಮುಂದೆ ನಡೆಯಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು, ಮಾನವ ಹಕ್ಕುಗಳಿಲ್ಲದ ಸಹೋದರಿ ನಗರ ಇರುವಂತಹ ಪರಿಸ್ಥಿತಿಯಲ್ಲಿ ನೆವಾರ್ಕ್ ಮೋಸ ಹೋಗಲು ಸಾಧ್ಯವಿಲ್ಲ'' ಎಂದರು.

ಈ ಬಗ್ಗೆ ಮಾತನಾಡಿದ ನೆವಾರ್ಕ್ ನಿವಾಸಿಯೊಬ್ಬರು ನಕಲಿ ರಾಷ್ಟ್ರದೊಂದಿಗಿನ ಸಹೋದರಿ-ನಗರ ಒಪ್ಪಂದಕ್ಕೆ ಮುಂದಾಗಿದ್ದು ನಗರಕ್ಕೆ ಮುಜುಗರದ ವಿಷಯವಾಗಿದೆ. ನೆವಾರ್ಕ್ ನಕಲಿ ರಾಷ್ಟ್ರದ ಹಿನ್ನೆಲೆ ಸಂಶೋಧನೆ ಮಾಡದಿರುವುದು ಮುಜುಗರದ ಸಂಗತಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು ಎಂದು ಫಾಕ್ಸ್ ನ್ಯೂಸ್ ವರದಿ ತಿಳಿಸಿದೆ.

ಕಳೆದ ತಿಂಗಳು, USK ಪ್ರತಿನಿಧಿಗಳು ಜಿನೀವಾದಲ್ಲಿ ಎರಡು UN ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದರು. ಫೆಬ್ರವರಿ 22 ರಂದು ಮಹಿಳೆಯರ ವಿರುದ್ಧ ತಾರತಮ್ಯ ನಿರ್ಮೂಲನೆ ಸಮಿತಿ (CEDAW) ಆಯೋಜಿಸಿದ 'ನಿರ್ಣಾಯಕ ವ್ಯವಸ್ಥೆಗಳಲ್ಲಿ ಮಹಿಳೆಯರ ಸಮಾನ ಮತ್ತು ಅಂತರ್ಗತ ಪ್ರಾತಿನಿಧ್ಯ' ಕುರಿತು ಸಾಮಾನ್ಯ ಚರ್ಚೆ, ಮತ್ತು ಫೆಬ್ರವರಿ 24 ರಂದು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯು (CESCR) ಆಯೋಜಿಸಿದ ಆರ್ಥಿಕ, ಸಾಮಾಜಿಕ ಸಾಂಸ್ಕೃತಿಕ ಹಕ್ಕುಗಳು ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತಾದ ಸಾಮಾನ್ಯ ಅಭಿಪ್ರಾಯದ ಕುರಿತು ಸಾಮಾನ್ಯ ಚರ್ಚೆ ಇದಾಗಿತ್ತು. CEDAW ಸಾಮಾನ್ಯ ಚರ್ಚೆಯ ದಿನದಂದು, USK ಸದಸ್ಯರು ಸಮ್ಮೇಳನದ ಕೊಠಡಿಯ ಮುಂದೆ ಮತ್ತು ಒಳಗೆಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಭಾಗವಹಿಸುವ ಕುರಿತು ಪ್ರಚಾರ ಸಾಮಗ್ರಿಗಳನ್ನು ವಿತರಿಸುವುದನ್ನು ತಡೆಯಲಾಯಿತು.

English summary
Nityananda's 'United States of Kailash' has signed "Sister City " with more than 30 American cities, a media report said recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X