ನಕಲಿ ವಜ್ರದುಂಗುರ ಕೊಟ್ಟು ಪ್ರೇಮಿಗಳನ್ನು ದೂರಮಾಡಿದ್ದ ನೀರವ್ ಮೋದಿ!
ಬೀಜಿಂಗ್, ಅಕ್ಟೋಬರ್ 08: ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ಬಹುಕೋಟಿ ಹಗರಣದ ರೂವಾರಿ, ವಜ್ರ ವ್ಯಾಪಾರಿ ನೀರವ್ ಮೋದಿ ನಕಲಿ ವಜ್ರದುಂಗುರವನ್ನು ಕೆನಡಾ ಪ್ರಜೆಯೊಬ್ಬರಿಗೆ ಮಾರಿದ್ದರು ಎಂಬ ಸುದ್ದಿಯನ್ನು 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ಪ್ರಕಟಿಸಿದೆ.
ಕೆನಡಾದವರಾಗಿದ್ದ ಪೌಲ್ ಆಲ್ಫಾನ್ಸೋ ಅವರಿಗೆ 2012 ರಲ್ಲಿ ನೀರವ್ ಮೋದಿ ಅವರ ಪರಿಚಯವಾಗಿತ್ತು. ನಂತರ ಇಬ್ಬರೂ ಸ್ನೇಹಿತರಾಗಿದ್ದರು.
ನಂತರ ತಮಗೊಂದು ವಜ್ರದುಂಗುರ ಬೇಕೆಂದು ಆಲ್ಫಾನ್ಸೋ ಅವರು ಮೋದಿಗೆ ಇಮೇಲ್ ಮೂಲಕ ತಿಳಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಮೋದಿ, ಖಂಡಿತವಾಗಿಯೂ ನಿಮಗೆ ಅತ್ಯುತ್ತಮ ಗುಣಮಟ್ಟದ ವಜ್ರದುಂಗುರ ನೀಡುವುದಾಗಿ ಮಾತು ಕೊತ್ಟಿದ್ದರು. ಅದರಂತೆಯೇ ಸುಮಾರು 1.4 ಕೋಟಿ ರೂ.ಪಡೆದು, ಆಲ್ಫಾನ್ಸೋ ಅವರಿಗೆ ವಜ್ರದುಂಗುರ ನೀಡಿದ್ದರು.

ತಮ್ಮ ಪ್ರೇಮಿಗೆ, ಪ್ರೇಮ ನಿವೇದನೆಗಾಗಿ ಈ ಉಂಗುರವನ್ನು ಆಲ್ಫಾನ್ಸೋ ಕೇಳಿದ್ದರು. ನಂತರ ಆಕೆಗೆ ಉಂಗುರ ತೊಡಿಸಲು ಹೋದಾಗ ಈ ಉಂಗುರ ನಕಲಿ ಎಂಬುದು ತಿಳಿದಿದೆ. ಇದರಿಂದ ಈ ಇಬ್ಬರು ಪ್ರೇಮಿಗಳ ಲವ್ ಬ್ರೇಕ್ ಅಪ್ ಆಗಿತ್ತು!
ನೀನು ಇಷ್ಟೆಲ್ಲ ಬುದ್ಧಿವಂತ ಹುಡುಗ ಆಗಿ ಇಷ್ಟೆಲ್ಲ ಹಣವನ್ನು ಅದ್ಹೇಗೆ ನಕಲಿಯೋ, ಅಸಲಿಯೋ ಎಂದು ಸರಿಯಾಗಿ ಪರೀಕ್ಷಿಸದೆ ಕೊಟ್ಟೆ ಎಂದು ಆಲ್ಫಾನ್ಸೋನ ಗರ್ ಫ್ರೆಂಡ್ ಆತನನ್ನು ಪ್ರಶ್ನಿಸಿದ್ದಳು. ತಾನೆಷ್ಟೇ ಬುದ್ಧಿವಂತಾಗಿದ್ದರೂ ನೀರವ್ ಮೋದಿ ತನಗಿಂತಲೂ ಚಾಣಾಕ್ಷತನದಿಂದ ತನಗೆ ಮೋದ ಮಾಡಿದ್ದಾಗಿ ಆಲ್ಫಾನ್ಸೋ ತನ್ನ ಗರ್ಲ್ ಫ್ರೆಂಡ್ ಗೆ ಹೇಳಿದ್ದ. ಈ ಕುರಿತು ಆಲ್ಫಾನ್ಸೋ, ನೀರವ್ ವಿರುದ್ಧ ದೂರ್ನೂ ದಾಖಲಿಸಿದ್ದರು.












Click it and Unblock the Notifications