ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ.8: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಮೇ.8: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

5.23: ಯುಕೆಯಲ್ಲಿ ಕನ್ಸರ್ವೇಟಿವ್ ಪಾರ್ಟಿ ಜಯಭೇರಿ ಡೇವಿಡ್ ಕ್ಯಾಮರೂನ್ ಮತ್ತೆ ಅಧಿಕಾರಕ್ಕೆ ಮೋದಿಯಿಂದ ಕ್ಯಾಮರೂನ್ ಗೆ ಅಭಿನಂದನೆ

10.45: ಯುಕೆ ಮತ ಎಣಿಕೆ: ಡೇವಿಡ್ ಕ್ಯಾಮರೂನ್ ಅವರು ಮತ್ತೊಮ್ಮೆ ಅಧಿಕಾರ ಸ್ಥಾಪಿಸಲಿದ್ದಾರೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ವರದಿ.

10.40: ಎಸ್ಎನ್ ಪಿ ಪಕ್ಷ 54 ಕ್ಷೇತ್ರಗಳಲ್ಲಿ ಜಯಿಸಿ ಸ್ಕಾಟ್ಲೆಂಡ್ ವಶ ಪಡಿಸಿಕೊಂಡಿದ್ದು, ಲೇಬರ್ ಪಕ್ಷಕ್ಕೆ ಮುಖಭಂಗವಾಗಿದೆ.

David Cameron

10.35: ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿಗೆ ಅಲ್ಪ ಮುನ್ನಡೆ ಸಿಕ್ಕಿದೆ.

10.30: ಬ್ರಿಟನ್ನಿನ ಒಟ್ಟು 650 ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಆರಂಭ. ಮೇ.18 ಸಂಸತ್ ಆರಂಭಗೊಳ್ಳಲಿದ್ದು ಅಷ್ಟರಲ್ಲಿ ನೂತನ ಸರ್ಕಾರ ರಚನೆಯಾಗಬೇಕಿದೆ. ಸ್ಪಷ್ಟ ಬಹುಮತ ಪಡೆಯಲು ಮ್ಯಾಜಿಕ್ ನಂಬರ್ 326.

10.15: ಹಿಟ್ ಅಂಡ್ ರನ್ ಕೇಸಿನಲ್ಲಿ ದೋಷಿಯಾಗಿರುವ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟಿನಲ್ಲಿ ಶುಕ್ರವಾರ ನಡೆಯಲಿದೆ.[ಇಡೀ ದಿನದ ಅಪ್ಡೇಟ್ಸ್ ಇಲ್ಲಿದೆ]

10.00:
ಪಶ್ಚಿಮ ಬಂಗಾಳ ನನ್ ರೇಪ್ ಕೇಸಿನಲ್ಲಿ ಪ್ರಮುಖ ಆರೋಪಿ ಮಿಲನ್ ಸರ್ಕಾರ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

English summary
News Flash: UK polls: David Cameron on track to return to power as PM, suggests exit poll. Follow all news updates in brief here on Friday, May8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X