ಅಕ್ರಮ ಬೈಕ್‌ಗಳನ್ನು ಪುಡಿ ಮಾಡಿಸಿದ ನ್ಯೂಯಾರ್ಕ್ ಮೇಯರ್
ನ್ಯೂಯಾರ್ಕ್, ಜೂ. 28: ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ನಗರ ಪೊಲೀಸರು ವಶಪಡಿಸಿಕೊಳ್ಳಲಾದ ಎಲ್ಲ ಅಕ್ರಮ 100 ಡರ್ಟ್ ಬೈಕ್‌ಗಳನ್ನು ಬುಲ್ಡೋಜರ್ ಮೂಲಕ ನಾಶಪಡಿಸಿದ್ದಾರೆ.
ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಬೈಕ್‌ಗಳನ್ನು ಬುಲ್ಡೋಜರ್ ಹರಿಸಿ ನಾಶಪಡಿಸುವ ಕಾರ್ಯಕ್ಕೆ ಬಾವುಟ ಬೀಸಿ ಚಾಲನೆ ನೀಡಿದರು. ಬಾವುಟದಿಂದ ಚಾಲನೆ ನೀಡುತ್ತಿದ್ದಂತೆ ಬುಲ್ಡೋಜರ್ ಚಾಲಕನು ತನ್ನ ವಾಹನದಿಂದ ಬೈಕ್‌ಗಳ ಮೇಲೆ ಒಂದರ ಮೇಲೆ ಒಂದರಂತೆ ಹರಿಸಿ ನಾಶಗೊಳಿಸಿದನು.
ಮೋಟರ್ ಸೈಕಲ್‌ಗಳು ಮತ್ತು ಡರ್ಟ್ ಬೈಕ್‌ಗಳ ಸಾಲುಗಳ ಮೇಲೆ ಬುಲ್ಡೋಜರ್ ಹತ್ತಿಸಿದ ಚಾಲಕ ನೂರಾರು ಬೈಕ್‌ಗಳನ್ನು ಕೆಲವೇ ನಿಮಿಷದಲ್ಲಿ ನೆಲಸಮ ಮಾಡಿಬಿಟ್ಟನು. ಇದು ಸಾಲದಂತೆ ಅದೇ ಬೈಕ್‌ಗಳ ಮೇಲೆ ಹಿಮ್ಮಖವಾಗಿಯೂ ಚಲಿಸಿ ಮತ್ತೆ ಅರ್ಧದಾರಿಯಲ್ಲಿ ಮತ್ತೆ ಹಿಂದೆ ಮುಂದೆ ಮಾಡಿ ಬೈಕ್‌ಗಳ ಮರಣ ಮೃಂದಗ ಬಾರಿಸಿದನು. ಈ ವಿಡಿಯೋ ಸದ್ಯ ಟ್ವಿಟ್ಟರ್‌ನಲ್ಲಿ ಹೆಚ್ಚು ಓಡಾಡಿದೆ.

ಜನವರಿ 1,2022 ರಂದು ಮೇಯರ್ ಅಧಿಕಾರ ವಹಿಸಿಕೊಂಡ ನಂತರ ಸಾರ್ವಜನಿಕ ಸುರಕ್ಷತೆಯ ಭಾಗವಾಗಿ ನ್ಯೂಯಾರ್ಕ್‌ನಲ್ಲಿ ಅಕ್ರಮ ಡರ್ಟ್ ಬೈಕ್‌ಗಳು, ಎಟಿವಿಗಳು ಮತ್ತು ಮೋಟಾರ್‌ಸೈಕಲ್‌ಗಳನ್ನು ವಶಪಡಿಸಿಕೊಳ್ಳುವುದು ಈ ವರ್ಷ ಹೆಚ್ಚಾಗಿದೆ. ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಕಮಿಷನರ್ ಕೀಚಂಟ್ ಸೆವೆಲ್ ಅವರ ಹೇಳಿಕೆಯ ಪ್ರಕಾರ ಮೇಯರ್ ಹೇಳಿದಂತೆ ಇದು ಕಳೆದ ವರ್ಷ ಈ ಸಮಯದಲ್ಲಿ ನಾವು ತೆಗೆದುಕೊಂಡಿದ್ದಕ್ಕಿಂತ ಸುಮಾರು 80 ಪ್ರತಿಶತ ಹೆಚ್ಚಾಗಿದೆ. ಜನವರಿಯಿಂದ ನ್ಯೂಯಾರ್ಕ್ ನಗರದಾದ್ಯಂತ ಈ ವಾಹನಗಳಲ್ಲಿ 2000 ಕ್ಕಿಂತ ಹೆಚ್ಚು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ನಗರವು ಡರ್ಟ್ ಬೈಕ್‌ಗಳನ್ನು ಮಾರಾಟ ಮಾಡುವ ಅಥವಾ ದಾನ ಮಾಡುವ ಬದಲು ಅವುಗಳನ್ನು ನಾಶಮಾಡಲು ಆಯ್ಕೆ ಮಾಡಿದೆ. ಏಕೆಂದರೆ ಅದು ಅವುಗಳನ್ನು ಶಾಶ್ವತವಾಗಿ ಬೀದಿಯಿಂದ ದೂರವಿಡುತ್ತದೆ ಎಂದು ಮೇಯರ್ ಹೇಳಿದರು. ತಮ್ಮ ಪತ್ರಿಕಾಗೋಷ್ಠಿಯಲ್ಲಿ ಮೇಯರ್, ಅನೇಕ ಬೈಕ್‌ಗಳಿಗೆ ವಿಮೆ ಇಲ್ಲ ಮತ್ತು ವಾಹನಗಳನ್ನು ಮಾರಾಟ ಮಾಡುವ ಮೊದಲು ವಿಮೆಯ ಪುರಾವೆ ಮತ್ತು ನೋಂದಣಿ ದಾಖಲೆಗಳನ್ನು ಕೋರಲು ಎಟಿವಿ ಡೀಲರ್‌ಗಳಿಗೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.

ವಿಮೆ ಇಲ್ಲದೆ ಇರುವುದು ಇದು ಅಜಾಗರೂಕ ಮತ್ತು ಕಾನೂನುಬಾಹಿರವಾಗಿದೆ. ಇದು ಎಲ್ಲರಿಗೂ ಅಪಾಯವನ್ನುಂಟು ಮಾಡುತ್ತದೆ. ಇತರ ಚಾಲಕರು, ಪ್ರಯಾಣಿಕರು, ಪಾದಚಾರಿಗಳು ಮತ್ತು ಬೈಕು ಸವಾರರಿಗೆ ಇದು ಅಪಾಯ ತರುತ್ತದೆ ಎಂದು ಸೆವೆಲ್ ಹೇಳಿದರು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications