ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ವರ್ಷ ಕೊರೊನಾಗೆ ಹೊಸ ಲಸಿಕೆ ಸೂತ್ರದ ಅವಶ್ಯಕತೆ ಎದುರಾಗಲಿದೆ

|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್ 04: ಮುಂದಿನ ವರ್ಷದ ವೇಳೆಗೆ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಹೊಸ ರೀತಿಯ ಲಸಿಕೆಗಳ ಅವಶ್ಯಕತೆ ಬರಬಹುದು ಎಂದು ಕೊರೊನಾ ಸೋಂಕಿನ ವಿರುದ್ಧ ವಿಶ್ವದಲ್ಲೇ ಮೊದಲು ಲಸಿಕೆ ಅಭಿವೃದ್ಧಿಪಡಿಸಿದ ಬಯೋಎನ್‌ಟೆಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಗುರ್ ಸಾಹಿನ್ ಅಂದಾಜಿಸಿದ್ದಾರೆ.

ಇದೀಗ ಕೊರೊನಾ ಸೋಂಕಿನ ಹೊಸ ರೂಪಾಂತರಗಳು ಸೃಷ್ಟಿಯಾಗುತ್ತಿದ್ದು, ಭವಿಷ್ಯದ ಕೊರೊನಾ ರೂಪಾಂತರಗಳ ವಿರುದ್ಧ ರಕ್ಷಣೆ ಪಡೆಯಲು ಮುಂದಿನ ವರ್ಷದ ಮಧ್ಯದ ವೇಳೆಗೆ ಸೋಂಕಿನ ವಿರುದ್ಧ ಹೊಸ ಸೂತ್ರವನ್ನು ಕಂಡುಕೊಳ್ಳುವ ಅವಶ್ಯಕತೆ ಬರಬಹುದು ಎಂದು ಹೇಳಿದ್ದಾರೆ.

'ಮೂರನೇ ಅಲೆ ಬಗ್ಗೆ ಎಚ್ಚರ ವಹಿಸಬೇಕು': ಸಚಿವ ಡಾ. ಕೆ. ಸುಧಾಕರ್'ಮೂರನೇ ಅಲೆ ಬಗ್ಗೆ ಎಚ್ಚರ ವಹಿಸಬೇಕು': ಸಚಿವ ಡಾ. ಕೆ. ಸುಧಾಕರ್

ಕೊರೊನಾ ಸೋಂಕಿನ ಪ್ರಸ್ತುತ ರೂಪಾಂತರಗಳಾದ ಡೆಲ್ಟಾ ಸೋಂಕು, ಈಗಿರುವ ಲಸಿಕೆಗಳನ್ನು ದುರ್ಬಲಗೊಳಿಸುವಷ್ಟು ಸಮರ್ಥವಾಗಿರದಿದ್ದರೂ ಮುಂದೆ ಕಾಣಿಸಿಕೊಳ್ಳಲಿರುವ ಹೊಸ ರೂಪಾಂತರಗಳು ಬೂಸ್ಟರ್ ಲಸಿಕೆಗಳ ಶಕ್ತಿಯನ್ನೂ ಮೀರಿ ದೇಹ ಹೊಕ್ಕಬಹುದು. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಾಮರ್ಥ್ಯದೊಂದಿಗೆ ಸೋಂಕು ಸೃಷ್ಟಿಯಾಗಬಹುದು ಎಂದು ತಿಳಿಸಿದ್ದಾರೆ.

New Vaccines Will Be Needed Next Year Says Worlds First Covid Vaccine Maker

ಈ ವರ್ಷ ಸದ್ಯ ಯಾವುದೇ ಹೊಸ ಲಸಿಕೆ ಅನಗತ್ಯವಾಗಿದೆ. ಆದರೆ ಮುಂದಿನ ವರ್ಷದ ಮಧ್ಯದ ವೇಳೆಗೆ ಬೇರೆ ಪರಿಸ್ಥಿತಿಯೇ ಎದುರಾಗಬಹುದು. ಆಗ ಸೋಂಕಿನ ನಿಯಂತ್ರಣಕ್ಕೆ ಈಗಿರುವ ಲಸಿಕೆಗಳು ಸಾಲದೇ ಬೇರೆ ಸೂತ್ರದ ಅಗತ್ಯವೇ ಬರಬಹುದು ಎಂದಿದ್ದಾರೆ.

ರೂಪಾಂತರ ಸೃಷ್ಟಿ ನಿರಂತರ ವಿಕಸನವಾಗಿದ್ದು, ವಿಕಸನ ಈಗಷ್ಟೇ ಆರಂಭವಾಗಿದೆ. ಸೋಂಕು ನಮ್ಮೊಂದಿಗೇ ಉಳಿದಿರುತ್ತದೆ ಹಾಗೂ ವೈರಸ್ ಇನ್ನಷ್ಟು ರೂಪಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅವಶ್ಯಕವಿದೆ. ಆಗಷ್ಟೇ ನಾವು ಹೆಚ್ಚಿನ ಸಾವು ನೋವುಗಳನ್ನು ತಡೆಯಲು ಸಾಧ್ಯ ಎಂದು ಹೇಳಿದ್ದಾರೆ.

ದೇಶದಲ್ಲಿ ಮಕ್ಕಳಿಗೆ ನೀಡಲು ಅನುಮೋದನೆ ಪಡೆದಿರುವ ಝೈಕೋವ್ ಡಿ ಲಸಿಕೆ ಬೆಲೆ ಎಷ್ಟು?ದೇಶದಲ್ಲಿ ಮಕ್ಕಳಿಗೆ ನೀಡಲು ಅನುಮೋದನೆ ಪಡೆದಿರುವ ಝೈಕೋವ್ ಡಿ ಲಸಿಕೆ ಬೆಲೆ ಎಷ್ಟು?

ಬಯೋಎನ್‌ಟೆಕ್ ಕೊರೊನಾ ಲಸಿಕೆಯ ಅಭಿವೃದ್ಧಿಗೆ ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಫೈಜರ್ ಇಂಕ್ ಜೊತೆಗೆ ಪಾಲುದಾರಿಕೆ ಹೊಂದಿದೆ. ಕಳೆದ ತಿಂಗಳು, ಕಂಪನಿಯು 5ರಿಂದ 11 ವರ್ಷದ ಮಕ್ಕಳಲ್ಲಿ ಲಸಿಕೆ ಬಳಕೆ ಬಗ್ಗೆ ಅಮೆರಿಕ ಔಷಧ ನಿಯಂತ್ರಕ ಸಂಸ್ಥೆಗೆ ದತ್ತಾಂಶ ಸಲ್ಲಿಕೆ ಮಾಡಿದ್ದು, ಶಾಲಾ ಮಕ್ಕಳಿಗೆ ಲಸಿಕೆ ನೀಡುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ.

New Vaccines Will Be Needed Next Year Says Worlds First Covid Vaccine Maker

ಇದರೊಂದಿಗೆ, ಅಮೆರಿಕದಲ್ಲಿ ಈಚೆಗೆ ಕೊರೊನಾ ಪ್ರಕರಣಗಳಲ್ಲಿ ಏಕಾಏಕಿ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿನಿಂದ ಇದುವರೆಗೂ 7,00,000 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಅಮೆರಿಕನ್ನರು ಆದಷ್ಟು ಬೇಗನೆ ಲಸಿಕೆ ಪಡೆದುಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ವೈದ್ಯಕೀಯ ಸಲಹೆಗಾರ ಆಂಥೋನಿ ಫೌಸಿ ತಿಳಿಸಿದ್ದಾರೆ.

ದೇಶದಲ್ಲಿ ಸಂಪೂರ್ಣ ಲಸಿಕಾ ದರವು 55% ಆಗಿದೆ. ಆದರೆ ಇಲ್ಲಿ ಇನ್ನೂ 70 ಮಿಲಿಯನ್ ಅರ್ಹ ಜನಸಂಖ್ಯೆ ಲಸಿಕೆ ಪಡೆಯದೇ ಇರುವುದು ಅಪಾಯಕಾರಿ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಕೊರೊನಾ ಹರಡುವಿಕೆಗೆ ವಲಸಿಗರು ಹಾಗೂ ಪ್ರವಾಸಿಗರನ್ನು ದೂಷಿಸುವ ಪ್ರಯತ್ನವನ್ನು ಫೌಸಿ ತಳ್ಳಿಹಾಕಿದ್ದಾರೆ.
ಜೊತೆಗೆ ಕೊರೊನಾ ಸೋಂಕಿನಿಂದ ವಿಶ್ವದಾದ್ಯಂತ ಸಾವನ್ನಪ್ಪಿರುವವರ ಸಂಖ್ಯೆ ಐದು ದಶಲಕ್ಷ ಮೀರಿದೆ. ಡೆಲ್ಟಾ ರೂಪಾಂತರ, ಸಾವಿನ ಸಂಖ್ಯೆಯಲ್ಲಿನ ಏರಿಕೆಗೆ ಪ್ರೇರಣೆಯಾಗಿದೆ. ಮುಖ್ಯವಾಗಿ ಲಸಿಕೆ ಹಾಕದವರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ರಾಯಿಟರ್ಸ್‌ ವಿಶ್ಲೇಷಣೆ ತಿಳಿಸಿದೆ.

ರಾಯಿಟರ್ಸ್‌ ವಿಶ್ಲೇಷಣೆ ಪ್ರಕಾರ, ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಒಂದು ವರ್ಷದಲ್ಲಿ 2.5 ಮಿಲಿಯನ್ ಆಗಿದೆ. ನಂತರದ 236 ದಿನಗಳಲ್ಲಿ 2.5 ಮಿಲಿಯನ್ ಜನರು ಸೋಂಕಿಗೆ ಬಲಿಯಾಗಿದ್ದಾರೆ. ಏಳು ದಿನಗಳ ಸರಾಸರಿಯಲ್ಲಿ ವರದಿಯಾದ ಎಲ್ಲಾ ಜಾಗತಿಕ ಮಟ್ಟದ ಮರಣ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಕರಣಗಳು ಅಮೆರಿಕ, ರಷ್ಯಾ, ಬ್ರೆಜಿಲ್, ಮೆಕ್ಸಿಕೊ ಹಾಗೂ ಭಾರತದಲ್ಲಿ ಸಂಭವಿಸಿವೆ.

ಮರಣ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಜಾಗತಿಕವಾಗಿ ಲಸಿಕೆ ನೀಡಿಕೆಗೆ ವೇಗ ನೀಡಲಾಗಿದೆ. ಅಮೆರಿಕ ಸೇರಿದಂತೆ ಕೆಲವು ಶ್ರೀಮಂತ ದೇಶಗಳಲ್ಲಿ ಈಗಾಗಲೇ ಬೂಸ್ಟರ್ ಡೋಸ್, ಅಂದರೆ ಮೂರನೇ ಡೋಸ್ ನೀಡಲು ಆರಂಭಿಸಲಾಗಿದೆ.

English summary
BioNTech SE Chief Executive Officer Ugur Sahin, whose company developed the first Covid-19 vaccine along with Pfizer, said a new formula will probably be needed by mid-2022 to protect against future virus mutations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X