ಭಾರತೀಯರಿಗೆ ಸಂಕಷ್ಟ ತಂದ ಅಮೆರಿಕ ಹೊಸ ವೀಸಾ ನೀತಿ, ಏನಿದು Trump Immigration Policy 2025 ?
Trump immigration policy 2025: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ ಎಲ್ಲಾ ವಿದೇಶಿಯರಿಗೆ ವೀಸಾಗೆ ಸಂಬಂಧಿಸಿದಂತೆ ಶಾಕ್‌ವೊಂದನ್ನು ಕೊಟ್ಟಿದ್ದಾರೆ. ವೀಸಾಗೆ ಸಂಬಂಧಿಸಿದಂತೆ ಈಗಾಗಲೇ ಅಮೆರಿಕದಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಅಮೆರಿಕದ ವೀಸಾ ಸಿಗುವುದು ಅಷ್ಟು ಸುಲಭದ ಕೆಲಸವಲ್ಲ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 2.0 ಆಡಳಿತದಲ್ಲಿ ಅಮೆರಿಕ ವೀಸಾಗೆ ಹಾಗೂ ಭಾರತೀಯರಿಗೆ ಹೊಸ ಸಂಕಷ್ಟ ಎದುರಾಗಿದೆ.
ಅಮೆರಿಕದ ವಲಸೆ ನೋಂದಣಿ ನಿಯಮದ ಅನುಸಾರ ಅಮೆರಿಕಕ್ಕೆ ವಲಸೆ ಬರುವವರು ಕಡ್ಡಾಯವಾಗಿ ತಮ್ಮ ಐಡಿ (ಗುರುತಿನ ದಾಖಲೆ) ಮತ್ತು ವಲಸೆ ದಾಖಲೆಗಳನ್ನು ಯಾವಾಗಲೂ ತಮ್ಮೊಂದಿಗೆ ಇರಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲಾಗಿದೆ. ಅಮೆರಿಕದಲ್ಲಿ 30 ದಿನ ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಇರುವವರಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

ಅಮೆರಿಕದಲ್ಲಿ ತಾತ್ಕಾಲಿಕ ಅಥವಾ ಸುದೀರ್ಘ ಅವಧಿಗೆ ನೆಲೆಸುವವರು ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೇ ರಿಜಿಸ್ಟ್ರೇಷನ್ ಮಾಡಿಕೊಂಡಿರುವ ದಾಖಲೆಯನ್ನು ಎಲ್ಲಾ ಸಮಯದಲ್ಲೂ ತಮ್ಮೊಂದಿಗೆ ಇರಿಸಿಕೊಂಡಿರಬೇಕು ಪೊಲೀಸರು ತಪಾಸಣೆ ಮಾಡುವ ಸಂದರ್ಭದಲ್ಲಿ ತೋರಿಸಬೇಕು ಎಂದು ಸೂಚನೆ ನೀಡಲಾಗಿದೆ.
ಇನ್ನು ಅಮೆರಿಕ ವೀಸಾ ಇರುವ 18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು ಅವರ ದಾಖಲೆಗಳನ್ನು ಸದಾ ಅವರೊಂದಿಗೆ ಇರಿಸಿಕೊಳ್ಳಬೇಕು. ಅಮೆರಿಕದ ಅಧಿಕಾರಿಗಳು ಅಥವಾ ಪೊಲೀಸರು ದಾಖಲೆ ತೋರಿಸಿ ಎಂದು ಕೇಳಿದಾಗ ಅದನ್ನು ತೋರಿಸಬೇಕು. ಅಲ್ಲದೇ ಈ ದಾಖಲೆಗಳನ್ನು ಮರುನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶ ಹೊರಡಿಸಿದ್ದಾರೆ. ಇನ್ನು ಅಮೆರಿಕದಲ್ಲಿ ಇರುವ ಮಕ್ಕಳು ಸಹ 14 ವರ್ಷ ತುಂಬುತ್ತಿದ್ದಂತೆಯೇ ಮರು ನೋಂದಣಿ - ಬೆರಳಚ್ಚುಗಳನ್ನು ಸಲ್ಲಿಸಿ ಭಾರತದಲ್ಲಿನ ಆಧಾರ್ ಕಾರ್ಡ್ ಮಾದರಿ ಕಾರ್ಡ್ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಟ್ರಂಪ್ ಅವರ ಹೊಸ ನಿಯಮವಯ ಭಾರತದ ಎಚ್-1ಬಿ ವೀಸಾ ಹಾಗೂ ವಿದ್ಯಾರ್ಥಿ ವೀಸಾ ಸೇರಿದಂತೆ ಎಲ್ಲಾ ಮಾದರಿಯ ವೀಸಾದಾರರಿಗೂ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಟ್ರಂಪ್ ವೀಸಾ ನೀತಿ 2025 ಕಾರಣವೇನು ?
ಇನ್ನು ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಆಯ್ಕೆಯಾದ ಮೇಲೆ ಅಮೆರಿಕದಲ್ಲಿ ನೆಲೆಸಿರುವ ಅಕ್ರಮ ವಲಸಿಗರು ಹಾಗೂ ಅಮೆರಿಕದ ಮೇಲೆ ವಿವಿಧ ದೇಶಗಳು ವಿಧಿಸುತ್ತಿರುವ ಟ್ಯಾಕ್ಸ್‌ನ ಬಗ್ಗೆ ಗಂಭೀರವಾದ ಕ್ರಮಗಳನ್ನು ತೆಗೆದು ಕೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೇ ಇದೀಗ ವೀಸಾಗೆ ಹೊಸ ನಿಯಮವನ್ನು ರೂಪಿಸಲಾಗುತ್ತಿದೆ. ಅಮೆರಿಕದಲ್ಲಿ ಅಕ್ರಮ ವಲಸಿಗರ ಹಾವಳಿಯನ್ನು ತಡೆಗಟ್ಟುವ ಉದ್ದೇಶದಿಂದ ಈ ಹೊಸ ನಿಯಮ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ. ಇನ್ನು ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ದಂಡ ಅಥವಾ ಜೈಲು ಶಿಕ್ಷೆ ಸಹ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.












Click it and Unblock the Notifications