New Orleans: ಹೊಸ ವರ್ಷದ ದಿನವೇ 15 ಜನರ ಭೀಕರ ಕೊಲೆ, ಎಲ್ಲಿ? ಯಾವಾಗ?
ಹೊಸ ವರ್ಷದ ಸಂಭ್ರಮದಲ್ಲಿ ಇಡೀ ಜಗತ್ತು ಮೈಮರೆತು ಹೋಗಿತ್ತು, ಎಲ್ಲರೂ ಫುಲ್ ಪಾರ್ಟಿ ಮಾಡುತ್ತಾ ತಮ್ಮ ತಮ್ಮ ನೋವುಗಳನ್ನ ಮರೆತು ಎಂಜಾಯ್ ಮಾಡ್ತಾ ಇದ್ದರು. ಆದರೆ ಈ ಸಮಯದಲ್ಲೇ ಘೋರ ದುರಂತ ಒಂದು ನಡೆದು ಹೋಗಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಟ್ರಕ್ ನುಗ್ಗಿಸಿ 15 ಜನರ ಹತ್ಯೆ ಮಾಡಿದ ವ್ಯಕ್ತಿ ಯಾರು ಗೊತ್ತಾ? ಘಟನೆ ನಡೆದಿದ್ದು ಎಲ್ಲಿ?
ಅಮೆರಿಕದಲ್ಲಿ ಪದೇ ಪದೇ ಹಿಂಸಾಚಾರಗಳು ನಡೆಯುತ್ತಿದ್ದು, ಇದೀಗ ಮತ್ತೊಂದು ಘೋರ ದುರಂತ ನಡೆದು ಹೋಗಿದೆ. ಅದ್ರಲ್ಲೂ, ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಟ್ರಕ್ ನುಗ್ಗಿಸಿ 15 ಜನರ ಹತ್ಯೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಅಮೆರಿಕದ ನ್ಯೂ ಓರ್ಲಿಯನ್ಸ್ ನಗರದಲ್ಲಿ ಈ ಭೀಕರ ಘಟನೆ ನಡೆದು ಹೋಗಿದೆ. ಇಡೀ ಜಗತ್ತೇ ಈ ಘಟನೆಯನ್ನು ಕಂಡು ಈಗ ಬೆಚ್ಚಿಬಿದ್ದಿದೆ.

ಭೀಕರ ಕೊಲೆ ಮಾಡಿದ್ದು ಯಾರು?
ನ್ಯೂ ಇಯರ್ ಅಂತಾ ಸಿಕ್ಕಾಪಟ್ಟೆ ಸಂಭ್ರಮ ತೋರಿಸುತ್ತಾ ಎಂಜಾಯ್ ಮಾಡುತ್ತಿದ್ದ ಜನರ ಗುಂಪಿನ ಮೇಲೆ ವಿಕೃತನೊಬ್ಬ ಟ್ರಕ್ ಹತ್ತಿಸಿ ಈ ರೀತಿ 15 ಜನರ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಮತ್ತೊಂದು ಕಡೆ, ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗಾದ್ರೆ ಈ ಘಟನೆಯ ಹಿಂದೆ ಯಾರ ಕೈವಾಡ ಇದೆ? ಕೊಲೆಯನ್ನ ಮಾಡಿದ್ದು ಯಾರು? ಎಂಬ ಪ್ರಶ್ನೆ ಮೂಡಿದೆ. ಅಮೆರಿಕದ ಎಫ್‌ಬಿಐ ಅಧಿಕಾರಿಗಳು ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.
20ಕ್ಕೂ ಹೆಚ್ಚು ಜನರು ಗಂಭೀರ
ಹ್ಯಾಪಿ ನ್ಯೂ ಇಯರ್ ಅಂತಾ ಸಂಭ್ರಮದಲ್ಲಿ ಮುಳುಗಿದ್ದ ಜನರ ಮೇಲೆ ಸೈಬರ್ ಟ್ರಕ್ ಹತ್ತಿಸಿ ಅನಾಮಿಕ ವ್ಯಕ್ತಿ ಸುಮಾರು 15 ಜನರ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಮತ್ತೊಂದು ಕಡೆ 20ಕ್ಕೂ ಹೆಚ್ಚು ಜನ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ನರಳುತ್ತಿದ್ದಾರೆ. ಈ ನಡುವೆ ಹಲವು ಅನುಮಾನಗಳು ಮೂಡಿರುವ ಹಿನ್ನೆಲೆ ಅಮೆರಿಕದ ಅಧಿಕಾರಿಗಳು ಈಗ ಘಟನೆ ನಡೆದಿರುವ ಪ್ರದೇಶ ಸುತ್ತುವರಿದಿದ್ದಾರೆ.
ಐಎಸ್‌ಐಎಸ್ ಉಗ್ರರ ಕೃತ್ಯ?
ಕೃತ್ಯ ಎಸಗಿರುವ ಟೆಕ್ಸಾಸ್ ಮೂಲದ 42 ವರ್ಷದ ವ್ಯಕ್ತಿಗೆ ಇಸ್ಲಾಮಿಕ್ ಸ್ಟೆಟ್ ಉಗ್ರ ಸಂಘಟನೆಯ ಜೊತೆಗೆ ನಂಟು ಇರುವ ಅನುಮಾನ ಮೂಡಿದೆ. ಶಂಕಿತನನ್ನ ಶಮ್ಯುದ್-ದಿನ್ ಬಹರ್ ಜಬ್ಬರ್ ಎಂದು ಗುರುತಿಸಲಾಗಿದೆ. ಮತ್ತೊಂದು ಕಡೆ ಈ ರೀತಿ ಜನರ ಮೇಲೆ ಸೈಬರ್ ಟ್ರಕ್ ಹರಿಸಿದ ಬೆನ್ನಲ್ಲೇ ಪೊಲೀಸರು ಕೂಡ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಆರೋಪಿ ಈಗ ಹತನಾಗಿದ್ದಾನೆ ಎನ್ನಲಾಗಿದೆ. ಟ್ರಕ್‌ನಲ್ಲಿ ಐಎಸ್‌ಐಎಸ್ ಸಂಘಟನೆಗೆ ಸೇರಿದ ಧ್ವಜ & ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳು ಕೂಡ ಪತ್ತೆ ಆಗಿದ್ದು, ಹೆಚ್ಚಿನ ತನಿಖೆಯು ಇದೀಗ ನಡೆಯುತ್ತಿದೆ.












Click it and Unblock the Notifications