• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನವನ್ನು ಕಾಪಾಡಲು ಹಳೆ ಉಗ್ರ ಸಂಘಟನೆಯ ಹೊಸ ಅವತಾರ

|

ಇಸ್ಲಾಮಾಬಾದ್, ಏಪ್ರಿಲ್ 30: ಹಳೆಯ ಉಗ್ರ ಸಂಘಟನೆಯು ಹೊಸ ಹೆಸರಿನೊಂದಿಗೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದೆ.

ಪ್ಯಾರೀಸ್ ಮೂಲದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್‌ಫೋರ್ಸ್ ನಿರ್ಬಂಧದಿಂದ ಪಾರಾಗಲು ಪಾಕಿಸ್ತಾನಕ್ಕೆ ಇದೊಂದೇ ಮಾರ್ಗ ಉಳಿದಿತ್ತು.ಭಾರತಕ್ಕೆ ಬೇಕಾಗಿರುವ ಉಗ್ರ ಹಫೀಜ್ ಸಯೀದ್ ನಾಯಕತ್ವದ ಲಷ್ಕರ್ ಎ ತೊಯ್ಬಾ ಸಂಘಟನೆ ಹೊಸ ಹೆಸರಿನೊಂದಿಗೆ ಹೊಸ ಅವತಾರದೊಂದಿಗೆ ಬಂದಿದೆ.

ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಕ್ರಿಯಾ ಯೋಜನೆ ಜಾರಿಗೊಳಿಸುವುದಕ್ಕೆ ಮತ್ತೆ ಅವಕಾಶ ದೊರೆತಿತ್ತು. ಆದರೆ ಬೂದು ಪಟ್ಟಿಯಿಂದ ಕಪ್ಪು ಪಟ್ಟಿಗೆ ಸೇರಿಸುವ ಷರತ್ತಿನ ಎಚಚ್ರಿಕೆಯನ್ನೂ ನೀಡಿತ್ತು. ಪಾಕಿಸ್ತಾನ ಎಫ್‌ಎಟಿಎಫ್‌ನ ಬೂದು ಪಟ್ಟಿಗೆ ಸೇರಿದ್ದರ ಪರಿಣಾಮ ಇಸ್ಲಾಮಾಬಾದ್‌ಗೆ 10 ಶತಕೋಟಿ ಡಾಲರ್‌ನಷ್ಟು ನಷ್ಟ ಉಂಟಾಗಿದೆ.

ಒಂದೊಮ್ಮೆ ಕ್ರಿಯಾ ಯೋಜನೆ ಜಾರಿಗೊಳಿಸುವಲ್ಲಿ ವಿಫಲವಾದರೆ ಕಪ್ಪುಪಟ್ಟಿಗೆ ಸೇರಲಿದೆ.ಜಾಗತಿಕವಾಗಿ ಕೊವಿಡ್ 19 ಪರಿಸ್ಥಿತಿಯ ತೀವ್ರತೆ ಹೆಚ್ಚುತ್ತಿರುವ ಕಾರಣ ಅದನ್ನು ತಡೆಯಲು ಅನೇಕ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಇದರಲ್ಲಿ ದಿಗ್ಬಂಧನ , ಪ್ರಯಾಣ, ನಿರ್ಬಂಧ, ನಿಗದಿತ ಭೌಗೋಳಿಕ ವ್ಯಾಪ್ತಿಯನ್ನೇ ಸೀಲ್‌ಡೌನ್ ಮಾಡುವ ಕೆಲಸಗಳೂ ಆಗಿವೆ.

ಉಗ್ರ ಹಫೀಜ್ ಸಂಸ್ಥಾಪಕರಾಗಿರುವ ಎಲ್‌ಇಟಿ ಇನ್ನು ದಿ ರೆಸಿಸ್ಟೆನ್ಸ್ ಫ್ರಂಟ್ ಎಂದು ಗುರುತಿಸಿಕೊಳ್ಳಲಿದೆ. ಈ ಉಗ್ರ ಸಂಘಟನೆ ಜಮ್ಮು -ಕಾಶ್ಮೀರದಲ್ಲಿ ಅನೇಕ ಉಗ್ರ ದಾಳಿಗಳಿಗೆ ಹೊಣೆಗಾರನಾಗಿದೆ.

ಲಷ್ಕರ್ ಎ ತೊಯ್ಬಾ ಅಥವಾ ಎಲ್‌ಇಟಿ ವಿಶ್ವಸಂಸ್ಥೆಯಿಂದ ನಿಷೇಧ ಎದುರಿಸುತ್ತಿದ್ದರೆ , ಅದರ ಹೆಸರು ಬದಲಾಯಿಸಿದರೆ ಅಂತಹ ನಿಷೇಧ ಯಾವುದೂ ಅನ್ವಯಿಸುವುದಿಲ್ಲ ಎಂಬುದು ಪಾಕಿಸ್ತಾನದ ಲೆಕ್ಕಾಚಾರವಾದಂತಿದೆ.

English summary
It has emerged that Lashkar-e-Taiba has changed its name to TRF - The Resistance Front. The group has been involved in a number of attacks in the Union Territory of Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X