ಶೀಘ್ರವೇ ಹೊಸ ಘೋಷಣೆ ಮಾಡಲಿದ್ದಾರೆ ತಾಲಿಬಾನಿಗಳು

ಕಾಬೂಲ್, ಆಗಸ್ಟ್ 23; ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ವಾರಗಳು ಕಳೆಯುತ್ತಿವೆ. ಶೀಘ್ರವೇ ಸರ್ಕಾರ ರಚನೆ ಮಾಡುವ ಕುರಿತು ತೀರ್ಮಾನವನ್ನು ಪ್ರಕಟಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.

ತಾಲಿಬಾನ್ ವಕ್ತಾರ ಝಬೀವುಲ್ಲಾ ಮುಜಾಹಿದ್ ಈ ಕುರಿತು ಮಾತನಾಡಿದರು, "ಅಫ್ಘಾನಿಸ್ತಾನದಲ್ಲಿ ಯುದ್ಧದ ಪರಿಸ್ಥಿತಿ ಇದೆ ಎಂಬಂತೆ ಬೇರೆ ದೇಶಗಳು ಜನರ ರಕ್ಷಣಾ ಕಾರ್ಯ ಮಾಡುತ್ತಿವೆ. ನಾವು ದೇಶದಲ್ಲಿ ಸರ್ಕಾರ ರಚನೆ ಮಾಡುವ ಕುರಿತು ಶೀಘ್ರವೇ ಘೋಷಣೆ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.

"ನಮ್ಮ ರಾಜಕೀಯ ನಾಯಕರು ಕಾಬೂಲ್‌ನಲ್ಲಿ ವಿವಿಧ ಗಣ್ಯರನ್ನು ಭೇಟಿಯಾಗುತ್ತಿದ್ದಾರೆ. ಸರ್ಕಾರ ರಚನೆಯ ಮಾತುಕತೆಗಳು ನಡೆಯುತ್ತಿವೆ. ಶೀಘ್ರವೇ ಈ ಕುರಿತು ತೀರ್ಮಾನ ಪ್ರಕಟಿಸಲಾಗುತ್ತದೆ" ಎಂದು ವಕ್ತಾರರು ತಿಳಿಸಿದ್ದಾರೆ.

ತಾಲಿಬಾನ್ ಸಂಘಟನೆಯ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಶನಿವಾರ ಕಾಬೂಲ್‌ಗೆ ಆಗಮಿಸಿದ್ದು, ಸರ್ಕಾರ ರಚನೆ ಸಂಬಂಧ ವಿವಿಧ ನಾಯಕರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ದೇಶದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಜೊತೆಗೂ ಮಾತುಕತೆ ನಡೆಸಿದ್ದಾರೆ.

Afghanistan

"ಅಫ್ಘಾನಿಸ್ತಾನದಲ್ಲಿ ಎಲ್ಲರನ್ನೂ ಒಳಗೊಂಡ ಹೊಸ ಸರ್ಕಾರ ರಚನೆ ಮಾಡಲಾಗುತ್ತದೆ. ಈ ಕುರಿತು ಮಾತುಕತೆಗಳು ನಡೆಯುತ್ತಿವೆ. ಶೀಘ್ರವೇ ತೀರ್ಮಾನ ಪ್ರಕಟಿಸುತ್ತೇವೆ" ಎಂದು ಝಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದು ವಾರಗಳು ಕಳೆದಿವೆ. ದೇಶದ ಪರಿಸ್ಥಿತಿ ಬಗ್ಗೆ ವಿಶ್ವದ ಇತರ ರಾಷ್ಟ್ರಗಳು ಸಹ ಆತಂಕ ವ್ಯಕ್ತಪಡಿಸುತ್ತಿವೆ. ಈ ಹಿನ್ನಲೆಯಲ್ಲಿ ಸರ್ಕಾರ ರಚನೆ ಪ್ರಕ್ರಿಯೆಗೆ ತಾಲಿಬಾನಿಗಳು ಚಾಲನೆ ನೀಡಿದ್ದಾರೆ.

ಮುಲ್ಲಾ ಅಬ್ದುಲ್ ಘನಿ ಬರದಾರ್ ಹಕ್ಕಾನಿ ಗುಲ್ಬುದ್ದೀನ್ ಹೆಕ್ಮೆತ್ಯಾರ್ ಸೇರಿದಂತೆ ವಿವಿಧ ನಾಯಕರನ್ನು ಭೇಟಿಯಾಗಿರುವ ಚಿತ್ರಗಳನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅಮೆರಿಕದ ಕುಖ್ಯಾತ ಉಗ್ರರ ಪಟ್ಟಿಯಲ್ಲಿದ್ದ ಕೆಲವು ನಾಯಕರು, ಕೆಲವು ಜಿಹಾದಿ ನಾಯಕರನ್ನು ಸಹ ಮುಲ್ಲಾ ಅಬ್ದುಲ್ ಘನಿ ಬರದಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಅಮೆರಿಕದ ಅತಿಯಾದ ಒತ್ತಡದ ಕಾರಣ ಮುಲ್ಲಾ ಅಬ್ದುಲ್ ಘನಿ ಬರದಾರ್‌ನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿತ್ತು. 2010ರಲ್ಲಿ ಬಂಧನವಾಗಿದ್ದ ಬರದಾರ್ 2018ರಲ್ಲಿ ಬಿಡುಗಡೆಯಾಗಿದ್ದ. ದೋಹಾದಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದ.

ಅಮೆರಿಕ ತನ್ನ ಸೈನ್ಯವನ್ನು ಸಂಪೂರ್ಣವಾಗಿ ವಾಪಸ್ ಪಡೆಯಲು ಆಗಸ್ಟ್ 31ರ ಗಡುವು ನೀಡಿದ್ದರು. ದೇಶದ ಈಗಿನ ಪರಿಸ್ಥಿತಿ ಹಿನ್ನಲೆಯಲ್ಲಿ ಗಡುವನ್ನು ವಿಸ್ತರಣೆ ಮಾಡಲಿದ್ದಾರೆಯೇ? ಕಾದು ನೋಡಬೇಕು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇನೆಯನ್ನು ಅಫ್ಘಾನಿಸ್ತಾನದಲ್ಲಿ ಮುಂದುವರೆಸುವ ಕುರಿತು ಯಾವುದೇ ತೀರ್ಮಾನ ಪ್ರಕಟಿಸಿಲ್ಲ.

ವಿದೇಶಾಂಗ ನೀತಿ ಟೀಕೆ; ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲಬಾಮ ರಾಜ್ಯದಲ್ಲಿ ಬೃಹತ್ ಸಮಾವೇಶ ನಡೆಸಿದರು. "ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ಅಮೆರಿಕದ ವಿದೇಶಾಂಗ ನೀತಿಯ ದೊಡ್ಡ ವೈಫಲ್ಯ" ಎಂದು ಆರೋಪಿಸಿದರು.

"ಸೇನೆಯನ್ನು ವಾಪಸ್ ಪಡೆಯುತ್ತಿರುವುದು ಸಂಪೂರ್ಣ ಶರಣಾಗತಿಯಾಗಿದೆ. ದೇಶದ ನಾಯಕನ ಅಸಮರ್ಥತೆಯಾಗಿದೆ. ಇದು ಸೇನೆಯ ಸೋಲುಗಳಲ್ಲಿ ಒಂದಾಗಿದೆ. ತಾವು ಅಧಿಕಾರದಲ್ಲಿ ಇದ್ದಿದ್ದರೆ ಇಂತಹ ಪ್ರಕರಣ ನಡೆಯುತ್ತಿರಲಿಲ್ಲ" ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಸೇನೆ ವಾಪಸ್ ಪಡೆದ ಜೋ ಬೈಡನ್ ತೀರ್ಮಾನವೇ ಅಫ್ಘಾನಿಸ್ತಾನದಲ್ಲಿ ಸರ್ಕಾರ ಪತನಗೊಳ್ಳಲು ಕಾರಣ ಎಂದು ಟೀಕೆಗಳು ಕೇಳಿ ಬರುತ್ತಿವೆ. ಅಮೆರಿಕ ಅಫ್ಘಾನಿಸ್ತಾನದಲ್ಲಿದ್ದ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರೆದೆ.

ಮತ್ತೊಂದು ಕಡೆ ದೇಶವನ್ನು ತೊರೆಯಲು ಜನರು ಹರಸಾಹಸ ಪಡುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಂಟಾದ ನೂಕು ನುಗ್ಗಲುವಿನಲ್ಲಿ 7 ಜನರು ಬಲಿಯಾಗಿದ್ದಾರೆ ಎಂದು ಬ್ರಿಟನ್ ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+