Supreme Court: ಸುಪ್ರೀಂಕೋರ್ಟ್ ನ್ಯಾಯಾಧೀಶರ ಪ್ರಮಾಣ ವಚನ ಸ್ವೀಕಾರ
ಇಸ್ಲಾಮಾಬಾದ್: ಸಂಸತ್ ಚುನಾವಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ಪಾಕಿಸ್ತಾನ ಈಗ ಹೊಸ ಬೆಳವಣಿಗೆಗೂ ಸಾಕ್ಷಿಯಾಗಿದೆ. ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿ ನೇಮಕ ಮಾಡಲಾಗಿದ್ದು, ಇನ್ನೇನು ನವೆಂಬರ್ ಮೊದಲ ವಾರದಲ್ಲಿಯೇ ಎಲೆಕ್ಷನ್ ನಡೆಯುವ ಸಾಧ್ಯತೆ ಇದೆ. ಈ ಹೊತ್ತಲ್ಲೇ ಪಾಕ್ ಸುಪ್ರೀಂ ಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿ ನೇಮಕ ಆಗಿರುವುದು ಸಂಚಲನ ಸೃಷ್ಟಿಸಿದೆ.
ಹೌದು, ಇಂದು ಪಾಕಿಸ್ತಾನ ಸುಪ್ರೀಂ ಕೋರ್ಟ್‌ನ 29ನೇ ಮುಖ್ಯ ನ್ಯಾಯಮೂರ್ತಿಯಾಗಿ ಖಾಜಿ ಫೈಜ್ ಇಸಾ ಪ್ರಮಾಣ ವಚನ ಸ್ವೀಕರಿಸಿದ್ರು. ಪಾಕ್ ರಾಜಧಾನಿ ಇಸ್ಲಾಮಾಬಾದ್‌ನ ಐವಾನ್-ಎ-ಸದರ್‌ನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಹಂಗಾಮಿ ಪ್ರಧಾನಿ ಅನ್ವಾರುಲ್ ಹಕ್ ಕಾಕರ್, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ಸಚಿವರು & ಹಿರಿಯ ಅಧಿಕಾರಿಗಳು ಕೂಡ ಹಾಜರಿದ್ದರು. ಇವರ ಸಮ್ಮುಖದಲ್ಲಿ 63 ವರ್ಷದ ಖಾಜಿ ಅವರಿಗೆ ಅಧ್ಯಕ್ಷ ಆರಿಫ್ ಅಲ್ವಿ ಪ್ರಮಾಣ ವಚನ ಬೋಧನೆ ಮಾಡಿದರು. ಈ ವೇಳೆ ಖಾಜಿ ಫೈಜ್ ಇಸಾ ಕುಟುಂಬ ಸದಸ್ಯರು ಕೂಡ ಉಪಸ್ಥಿತರಿದ್ದರು.

13 ತಿಂಗಳಲ್ಲಿ ನಿವೃತ್ತಿ ಗ್ಯಾರಂಟಿ!
ಇನ್ನು ಈಗ ಪಾಕಿಸ್ತಾನ ಸುಪ್ರೀಂಕೋರ್ಟ್‌ನ ನೂತನ ನ್ಯಾಯಮೂರ್ತಿ ಆಗಿ ಆಯ್ಕೆಯಾದ ಖಾಜಿ ಫೈಜ್ ಇಸಾ 13 ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ಖಾಜಿ 13 ತಿಂಗಳುಗಳ ಸೇವಾ ಅವಧಿ ಹೊಂದಿದ್ದು, 2024ರ ಅಕ್ಟೋಬರ್ 25 ಕ್ಕೆ ನಿವೃತ್ತರಾಗಲಿದ್ದಾರೆ. ಮತ್ತೊಂದು ಕಡೆ ಪಾಕ್ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ 56 ಸಾವಿರಕ್ಕು ಹೆಚ್ಚು ಪ್ರಕರಣವನ್ನ ಇತ್ಯರ್ಥಪಡಿಸುವ ಸವಾಲು ಇಸಾ ಮುಂದಿದೆ. ಇದರಲ್ಲಿ ಕೆಲವು ಪ್ರಕರಣಗಳು ವರ್ಷಗಳ ಹಿಂದೆ ದಾಖಲಾಗಿದ್ದು ವಿಚಾರಣೆಗೆ ಇನ್ನೂ ಬಂದಿಲ್ಲ. ಹೀಗಾಗಿ ಸಾಕಷ್ಟು ಒತ್ತಡ ಸೃಷ್ಟಿಯಾಗಿದೆ.
Justice Qazi Faez Isa takes oath as Pakistan's 29th chief justice
— The Pakistan Daily (@ThePakDaily) September 17, 2023
Video via @PTVNewsOfficial#Pakistan #SupremeCourt #FaezIsa #ArifAlvi pic.twitter.com/e78tod8N17
ಜಿನ್ನಾ ಆತ್ಮೀಯನ ಪುತ್ರನಿಗೆ ಪಟ್ಟ
ಅಷ್ಟಕ್ಕೂ ಈಗ ಪಾಕಿಸ್ತಾನ ಸುಪ್ರೀಂ ಕೋರ್ಟ್‌ನ 29ನೇ ಮುಖ್ಯ ನ್ಯಾಯಮೂರ್ತಿ ಆಗಿ ಆಯ್ಕೆ ಖಾಜಿ ಫೈಜ್ ಇಸಾ ಅವರು, ಮಹಮ್ಮದ್ ಅಲಿ ಜಿನ್ನಾ ಆತ್ಮೀಯರಾಗಿದ್ದ ಖಾಜಿ ಮಹಮ್ಮದ್ ಇಸಾ ಅವರ ಪುತ್ರ. ಖಾಜಿ ಫೈಜ್ ಇಸಾ ಲಂಡನ್‌ನಲ್ಲಿ ಕಾನೂನು ಪದವಿ ಪಡೆದ್ದಾರೆ. ಇದೀಗ ಪಾಕಿಸ್ತಾನ ನ್ಯಾಯಾಂಗದಲ್ಲೇ ಅತ್ಯಂತ ಉನ್ನತ ಹುದ್ದೆ ಖಾಜಿ ಫೈಜ್ ಇಸಾಗೆ ಸಿಕ್ಕಿದ್ದು, ಈ ಮೂಲಕ ಸಂಸತ್ ಚುನಾವಣೆಗೆ ಮೊದಲು ಪಾಕಿಸ್ತಾನದಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ.

ಅಂದಹಾಗೆ 1985ರಲ್ಲಿ ಬಲೂಚಿಸ್ತಾನ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ್ದ ಖಾಜಿ ಫೈಜ್ ಇಸಾ ಅವರು 1998ರಲ್ಲಿ ಸುಪ್ರೀಂ ಕೋರ್ಟ್ ವಕೀಲರಾದರು. 27 ವರ್ಷ ವಕೀಲ ವೃತ್ತಿ ನಂತರ, 2009ರಲ್ಲಿ ಬಲೂಚಿಸ್ತಾನದ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾದರು. ನಂತರ ಅಲ್ಲಿಯೇ ಅಂದರೆ 2014ರವರೆಗೂ ಮುಖ್ಯ ನ್ಯಾಯಮೂರ್ತಿ ಆಗಿ ಸೇವೆಯನ್ನ ಸಲ್ಲಿಸಿ 2014ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆ ಪಡೆದಿದ್ದರು. ಇದೀಗ ಖಾಜಿ ಫೈಜ್ ಇಸಾ ಪಾಕ್ ಸುಪ್ರೀಂ ಕೋರ್ಟ್‌ನ 29ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ.












Click it and Unblock the Notifications