Get Updates
Get notified of breaking news, exclusive insights, and must-see stories!

ಇಸ್ರೇಲ್ ನೋಡಿ ಭಾರತದ ರಾಜಕಾರಣಿಗಳು ಏನು ಕಲಿಯಬೇಕಿದೆ?

ಕ್ಷಣಕ್ಷಣಕ್ಕೂ ಭೀಕರ, ಕೈಮೀರಿ ಹೋಗುತ್ತಿರುವ ಪರಿಸ್ಥಿತಿ. ಹೀಗಿದ್ದಾಗ ತನ್ನ ರಾಷ್ಟ್ರವನ್ನು ರಕ್ಷಣೆ ಮಾಡಿಕೊಳ್ಳಲು ಎಂತಹ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶವನ್ನು ಇಸ್ರೇಲ್ ಇದೀಗ ರವಾನಿಸಿದೆ. ಅದರಲ್ಲೂ ಹಮಾಸ್ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಇಸ್ರೇಲ್‌ನಲ್ಲಿ ಪಕ್ಷಭೇದ ಮರೆತು, ಸರ್ವಪಕ್ಷಗಳು ಒಗ್ಗಟ್ಟಾಗಿ ದೇಶದ ಬೆನ್ನಿಗೆ ನಿಂತಿವೆ. ಹಾಗಾದ್ರೆ ನಮ್ಮ ರಾಜಕಾರಣಿಗಳು ಇಸ್ರೇಲ್ ನೋಡಿ ಏನು ಕಲಿಯಬೇಕಿದೆ ಗೊತ್ತಾ?

ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳ ನಡುವೆ ಒಗ್ಗಟ್ಟೇ ಇಲ್ಲ ಎಂಬ ಆರೋಪ ಇದೆ. ಈ ಪೈಕಿ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡು ಹೇಳುವುದಾದರೆ, ಕಾವೇರಿ ನೀರು ಹಂಚಿಕೆ ವಿಚಾರದಲ್ಲೇ ಕರ್ನಾಟಕದಲ್ಲಿ ಹೊಂದಾಣಿಕೆ ಕಾಣುತ್ತಿಲ್ಲ. ಆದರೆ ಇಸ್ರೇಲ್‌ನಲ್ಲಿ ಈಗ ಯುದ್ಧ ಶುರುವಾಗುತ್ತಿದ್ದಂತೆ ಸರ್ವಪಕ್ಷಗಳು ಒಂದಾಗಿವೆ. ಈ ಮೂಲಕ ತಮ್ಮ ದೇಶ ಹಾಗೂ ತಮ್ಮ ನೆಲವನ್ನು ಕಾಪಾಡಲು ಸಿದ್ಧವಾಗಿ ನಿಂತಿದ್ದಾರೆ. ಯುದ್ಧದ ನಡುವೆ ಇದೀಗ ಪ್ರಮುಖ ಬೆಳವಣಿಗೆಯೊಂದು ನಡೆದಿದೆ.

Netanyahu and Gantz Inks Agreement to establish United National Emergency Government in Israel

ಸರ್ವಪಕ್ಷ ಸರ್ಕಾರ ರಚಿಸಿದ ಇಸ್ರೇಲ್!

ಹೌದು, ಹಮಾಸ್ ಗ್ಯಾಂಗ್ ವಿರುದ್ಧದ ಯುದ್ಧದ ಅವಧಿಯಲ್ಲಿ ಮಿಲಿಟರಿ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಲು ಸರ್ವಪಕ್ಷ ಸರ್ಕಾರ ರಚಿಸಲು ಇಸ್ರೇಲ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಈ ಬಗ್ಗೆ ನಡೆದ ಮಾತುಕತೆ ಸಕ್ಸಸ್ ಆಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು & ಇಸ್ರೇಲ್ ವಿರೋಧ ಪಕ್ಷದ ನಾಯಕ ಬೆನ್ನಿ ಗೆಂಟ್ಜ್‌ ಯುದ್ಧ ಕಾಲದಲ್ಲಿ ಸರ್ವಪಕ್ಷ ಸರ್ಕಾರದ ರಚನೆಗೆ ಸಮ್ಮತಿ ಸೂಚಿಸಿದ್ದಾರೆ. ಐವರು ಸದಸ್ಯರ ಯುದ್ಧ ನಿರ್ವಹಣಾ ಸಂಪುಟ ರಚಿಸಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ವಿರೋಧ ಪಕ್ಷದ ನಾಯಕ ಯಾಯಿರ್ ಲಾ‍‍ಪಿಡ್‌ಗೂ ಸರ್ಕಾರ ಸೇರಲು ಆಹ್ವಾನ ನೀಡಲಾಗಿದೆಯಂತೆ.

ಉಗ್ರರ ಕಿರಿಕ್ ಶುರುವಾಗಿದ್ದು ಹೇಗೆ?

ಶನಿವಾರ ಹಮಾಸ್ ಉಗ್ರ ಪಡೆ, ಇಸ್ರೇಲ್‌ನ ಕಡೆಗೆ 5000ಕ್ಕೂ ಹೆಚ್ಚು ರಾಕೆಟ್‌ನ್ನ ಒಂದೇ ಬಾರಿಗೆ ಉಡಾಯಿಸಿತ್ತು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ಹೀಗೆ ರೊಚ್ಚಿಗೆದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿದೆ. ಇಬ್ಬರ ನಡುವೆ ರಣಕಾಳಗ ನಡೆಯುತ್ತಿದ್ದು, ಸಾವಿರಾರು ಜನ ಬಲಿ ಆಗಿದ್ದಾರೆ. ಈ ನಡುವೆ ಯುದ್ಧ ಕಾಲದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿ ಇಸ್ರೇಲ್ ರಾಜಕೀಯ ಪಕ್ಷಗಳ ನಾಯಕರು ದೇಶದ ಬೆನ್ನಿಗೆ ನಿಂತಿದ್ದು, ಈ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಪುಟಾಣಿ ದೇಶದ ಸೇನಾ ಶಕ್ತಿ ಸ್ಟಾಂಗ್!

ಇಸ್ರೇಲ್ ಪುಟಾಣಿ ದೇಶವೆ ಆಗಿದ್ದರೂ ಅದರ ಸೇನಾ ಶಕ್ತಿ ಬಲಶಾಲಿ ದೇಶಗಳನ್ನೇ ಮೀರಿಸುತ್ತದೆ. ಇಸ್ರೇಲ್ ಸೇನೆಯ ಬಳಿ ಭಯಾನಕ ಫೈಟರ್ ಜೆಟ್ ಎನ್ನಲಾಗುವ F-35s ಮಾದರಿ 75 ಯುದ್ಧ ವಿಮಾನಗಳು ಇವೆ. ಇದಿಷ್ಟೇ ಅಲ್ಲದೆ ಡ್ರೋನ್‌ಗಳು ಸೇರಿ ಒಟ್ಟಾರೆ 684 ಯುದ್ಧ ವಿಮಾನಗಳು ಇಸ್ರೇಲ್ ವಾಯು ಸೇನೆಯಲ್ಲಿ ಇವೆ. ಹಾಗೇ 34,000 ಸೈನಿಕರು & 55,000 ಮೀಸಲು ಪಡೆ ಸೈನಿಕರು ಅಖಾಡಕ್ಕೆ ಪ್ರವೇಶ ಮಾಡಿದ್ದಾರೆ. ಇಸ್ರೇಲ್ ಭೂ ಸೇನೆಯೂ ಬಲವಾಗಿದ್ದು 2500 ಯುದ್ಧ ಟ್ಯಾಂಕರ್ ಹಾಗೂ 5000 ಶಸ್ತ್ರಾಸ್ತ್ರ ಸಾಗಿಸುವ ವಾಹನಗಳು ಸಿದ್ಧವಾಗಿ ನಿಂತಿವೆ.

Netanyahu and Gantz Inks Agreement to establish United National Emergency Government in Israel

ಇದನ್ನೆಲ್ಲಾ ಅಳೆದು ತೂಗಿ ಹೇಳುವುದಾದರೆ ಈ ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧಕ್ಕೆ ಏನೆಲ್ಲಾ ತಯಾರಿ ಬೇಕೋ ಅದು ಆರಂಭವಾಗಿದೆ. ಒಂದು ಕಡೆ ಉಕ್ರೇನ್ ಮತ್ತು ರಷ್ಯಾ ಬಡಿದಾಡುತ್ತಿವೆ. ಇದೇ ಸಮಯಕ್ಕೆ ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಕಾಳಗವೂ ಶುರುವಾಗಿದೆ. ಮುಂದೆ ಇದು ಇಡೀ ಜಗತ್ತನ್ನು ಆವರಿಸಿ, 3ನೇ ಮಹಾಯುದ್ಧಕ್ಕೂ ಮಹಾ ವೇದಿಕೆ ಸೃಷ್ಟಿಸುವ ಅಪಾಯ ಇದೆ. ಹೀಗಾಗಿ ಕೂಡಲೇ ಪರಿಸ್ಥಿತಿ ತಿಳಿಗೊಳಿಸಬೇಕು ಮತ್ತು ಯುದ್ಧ ನಿಲ್ಲಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಯಾರೂ ಮಾತು ಕೇಳುವ ತಾಳ್ಮೆ ತೋರಿಸುತ್ತಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+