ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರ ಬಂದ್

|
Google Oneindia Kannada News

ನವದೆಹಲಿ, ಜುಲೈ 09: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನೇಪಾಳದಲ್ಲಿ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರವನ್ನು ಬಂದ್ ಮಾಡಲಾಗಿದೆ. ಭಾರತ- ನೇಪಾಳ ನಡುವಿನ ಗಡಿ ವಿವಾದ ಇತ್ತೀಚಿನ ದಿನಗಳಲ್ಲಿ ಮುನ್ನೆಲೆಗೆ ಬಂದಿತ್ತು.

Recommended Video

Susheel Gowda , ದುರಂತದ ಹಿಂದಿನ ಕಾರಣವೇನು | Filmibeat Kannada

ಭಾರತದ ಸುದ್ದಿ ವಾಹಿನಿಗಳ ಪ್ರಸಾರ ಬಂದ್ ಮಾಡಲಾಗಿದೆ ಎಂದು ಕೇಬಲ್ ಆಪರೇಟರ್‌ಗಳು ಹೇಳಿದ್ದಾರೆ ಎಂದು ANI ವರದಿ ಮಾಡಿದೆ. ಆದರೆ, ಪ್ರಸಾರ ಬಂದ್ ಮಾಡುವ ಕುರಿತು ಸರ್ಕಾರದಿಂದ ಅಧಿಕೃತವಾದ ಯಾವುದೇ ಆದೇಶ ಇದುವರೆಗೂ ಪ್ರಕಟವಾಗಿಲ್ಲ.

ಭಾರತ-ಚೀನಾ ನಡುವೆ ಶಾಂತಿ ಮಂತ್ರ ಜಪಿಸಿದ ನೇಪಾಳಭಾರತ-ಚೀನಾ ನಡುವೆ ಶಾಂತಿ ಮಂತ್ರ ಜಪಿಸಿದ ನೇಪಾಳ

ಸುಮಾರು ಆರು ತಿಂಗಳ ಹಿಂದೆ ಭಾರತ ಉತ್ತರಾಖಂಡ-ನೇಪಾಳ ಗಡಿ ಪ್ರದೇಶದಲ್ಲಿ ಬರುವ ಕಾಲಾಪಾನಿಯನ್ನು ತನ್ನ ವ್ಯಾಪ್ತಿಗೆ ಸೇರಿಸಿ ಪರಿಷ್ಕೃತ ಭೂಪಟ ಬಿಡುಗಡೆ ಮಾಡಿತ್ತು. ಭಾರತದ ಮೂರು ಭೂ ಪ್ರದೇಶವನ್ನು ತನ್ನದು ಎಂದು ಬಿಂಬಿಸಿ ಜೂನ್ 18ರಂದು ನೇಪಾಲ ಹೊಸ ನಕ್ಷೆಯನ್ನು ಸಂಸತ್‌ನಲ್ಲಿ ಮಂಡನೆ ಮಾಡಿತ್ತು.

ಭಾರತಕ್ಕೆ ಉಲ್ಟಾ ಹೊಡೆದ ನೇಪಾಳ; ಹೊಸ ನಕ್ಷೆಯಲ್ಲಿ ಇರುವುದಂಥಾ ಸುಳ್ಳು? ಭಾರತಕ್ಕೆ ಉಲ್ಟಾ ಹೊಡೆದ ನೇಪಾಳ; ಹೊಸ ನಕ್ಷೆಯಲ್ಲಿ ಇರುವುದಂಥಾ ಸುಳ್ಳು?

 Nepal Switched Off Signals For Indian News Channels

ಈ ಬೆಳವಣಿಗೆ ಬಳಿಕ ಭಾರತ-ನೇಪಾಳ ನಡುವಿನ ಸಂಬಂಧ ಹಳಸಿದೆ. ಮತ್ತೊಂದು ಕಡೆ ನೇಪಾಳಕ್ಕೆ ಚೀನಾ ಬೆಂಬಲ ನೀಡುತ್ತಿದೆ. ಪ್ರಧಾನಿ ಕೆ. ಪಿ.ಶರ್ಮ ಓಲಿ ಚೀನಾ ಹೇಳಿದಂತೆ ಕೇಳುತ್ತಿದ್ದಾರೆ ಎಂಬ ಆರೋಪವಿದ್ದು, ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಸಹ ಆರಂಭವಾಗಿದೆ.

ಭಾರತದ ವಿರುದ್ಧ ನೇಪಾಳ ಸಂಸತ್‌ನಲ್ಲಿ ಮಸೂದೆ ಮಂಡನೆ!ಭಾರತದ ವಿರುದ್ಧ ನೇಪಾಳ ಸಂಸತ್‌ನಲ್ಲಿ ಮಸೂದೆ ಮಂಡನೆ!

ನೇಪಾದಳ ಸಂಸತ್‌ನಲ್ಲಿ ಭಾರತದ ಪರವಾಗಿ ನಿಲುವು ಪ್ರಕಟಿಸಿದ್ದ ಸಂಸದೆ ಸರಿತಾ ಗಿರಿ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಗಿತ್ತು. ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಅವರ ಸದಸ್ಯತ್ವ ರದ್ದು ಮಾಡಲಾಗಿದೆ ಎಂಬ ವರದಿಗಳು ಬಂದಿದ್ದವು.

ಸಂಸದೆ ಸರಿತಾ ಗಿರಿ ನೇಪಾಳದ ಹೊಸ ನಕ್ಷೆ ವಿರುದ್ಧವಾಗಿ ಮತವನ್ನು ಚಲಾವಣೆ ಮಾಡಿದ್ದರು. ನೇಪಾಳ ಸೇರಿಸಿದ ಹೊಸ ಪ್ರದೇಶಗಳು ನಮ್ಮದೆಂದು ಹೇಳಲು ದಾಖಲೆಗಳಿಲ್ಲ. ಅದನ್ನು ತಿದ್ದುಪಡಿ ಮಾಡಿ ಹಳೆಯ ನಕ್ಷೆಯನ್ನು ಮುಂದುವರೆಸಬೇಕು ಎಂದು ಸಂಸತ್‌ನಲ್ಲಿ ಆಗ್ರಹಿಸಿದ್ದರು.

English summary
In Nepal signals for Indian news channels have been switched off. But no official government order issued on this till now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X