• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ನೇಪಾಳದ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿಗೆ ಕೊರೊನಾವೈರಸ್

|
Google Oneindia Kannada News

ಕಠ್ಮಂಡು, ಅಕ್ಟೋಬರ್ 10: ನೇಪಾಳ ರಾಜಧಾನಿ ಕಠ್ಮಂಡುವಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೇಪಾಳ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶನಿವಾರ ತ್ರಿಭುವನ್ ವಿಶ್ವವಿದ್ಯಾನಿಲಯದ ಬೋಧನಾ ಆಸ್ಪತ್ರೆಗೆ ದಾಖಲಾದ ಅಧ್ಯಕ್ಷರು, ಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ -19 ಸೋಂಕು ತಗುಲಿರುವುದು ಪಕ್ಕಾ ಆಗಿದೆ ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ದಿನೇಶ್ ಕಫ್ಲೆ ತಿಳಿಸಿದ್ದಾರೆ.

ಹಠಾತ್ ಸಂಸತ್ ವಿಸರ್ಜನೆಗೆ ಕಾರಣ ನೀಡುವಂತೆ ನೇಪಾಳ ಪ್ರಧಾನಿ ಓಲಿಗೆ ಸುಪ್ರೀಂನಿಂದ ಶೋಕಾಸ್ ನೋಟಿಸ್ಹಠಾತ್ ಸಂಸತ್ ವಿಸರ್ಜನೆಗೆ ಕಾರಣ ನೀಡುವಂತೆ ನೇಪಾಳ ಪ್ರಧಾನಿ ಓಲಿಗೆ ಸುಪ್ರೀಂನಿಂದ ಶೋಕಾಸ್ ನೋಟಿಸ್

"ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಶನಿವಾರಕ್ಕೆ ಹೋಲಿಸಿದರೆ ಅವರ ಸ್ಥಿತಿ ಉತ್ತಮವಾಗಿದೆ. ನೇಪಾಳ ಅಧ್ಯಕ್ಷರಿಗೆ ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲಿ ವೈದ್ಯಕೀಯ ಆರೈಕೆಯ ಅಗತ್ಯವಿದೆ. ಕೊರೊನಾವೈರಸ್ ವಿರುದ್ಧ ಸಂಪೂರ್ಣವಾಗಿ ಲಸಿಕೆಯನ್ನು ಅವರು ಪಡೆದುಕೊಂಡಿರುವುದರಿಂದ ಆಕೆಯ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಉಂಟಾಗುವುದಿಲ್ಲ ಎಂದು ಭಾವಿಸುತ್ತೇವೆ," ಎಂದು ಡಾ ದಿನೇಶ್ ಕಫ್ಲೆ ಕಠ್ಮಂಡು ಪೋಸ್ಟ್‌ಗೆ ತಿಳಿಸಿದ್ದಾರೆ.

ನೇಪಾಳದಲ್ಲಿ 570 ಕೋವಿಡ್-19 ಸಕ್ರಿಯ ಪ್ರಕರಣ:

ಅಧ್ಯಕ್ಷರು ಡೆಂಗ್ಯೂ ಮತ್ತು ವೈರಲ್ ಜ್ವರದ ಪರೀಕ್ಷೆಗಳಿಗೆ ಒಳಗಾಗಿದ್ದಾರೆ, ಆದರೆ ವರದಿಗಳು ನಕಾರಾತ್ಮಕವಾಗಿವೆ ಎಂದು ಅಧ್ಯಕ್ಷರ ಕಚೇರಿಯ ಮಾಧ್ಯಮ ತಜ್ಞ ಟಿಕಾ ಧಾಕಲ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯದ ಪ್ರಕಾರ, ನೇಪಾಳದಲ್ಲಿ 570 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ.

English summary
Nepal President Bidya Devi Bhandari test positive for Coronavirus. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X