ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ಚುನಾವಣೆ: ಹಾಲಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾಗೆ ಗೆಲುವು

|
Google Oneindia Kannada News

ಕಠ್ಮಂಡು, ನವೆಂಬರ್ 23: ಪಶ್ಚಿಮ ನೇಪಾಳದ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಸತತ 7 ಬಾರಿಗೆ ಭಾರಿ ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ದೇವುಬಾ ನೇತೃತ್ವದ ನೇಪಾಳಿ ಕಾಂಗ್ರೆಸ್ ಪಕ್ಷವು ಇಲ್ಲಿಯವರೆಗೆ 11 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮುನ್ನಡೆ ಸಾಧಿಸಿದೆ. 7 ಪ್ರಾಂತ್ಯಗಳ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಶಾಸಕಾಂಗಗಳ ಸಭೆಗಳಿಗೆ ಕಳೆದ ಭಾನುವಾರ ಸಾರ್ವತ್ರಿಕ ಮತದಾನ ನಡೆದಿತ್ತು. ಸೋಮವಾರದಿಂದ ಮತ ಎಣಿಕೆ ಭರದಿಂದ ಸಾಗಿದೆ

77 ವರ್ಷದ ನೇಪಾಳ ಪ್ರಧಾನಿ ದೇವುಬಾ ಅವರು ಒಟ್ಟು 25,534 ಮತಗಳನ್ನು ಪಡೆದು ವಿಜಯ ಸಾಧಿಸಿದರೆ, ದೇವುಬಾ ವಿರುದ್ಧ ಚುನಾವಣೆ ಕಣದಲ್ಲಿದ್ದ ಪ್ರತಿಸ್ಪರ್ಧಿ ಮತ್ತು ಸ್ವತಂತ್ರ ಅಭ್ಯರ್ಥಿ ಸಾಗರ್ ಧಕಲ್ (31) ಒಟ್ಟು 1,302 ಮತಗಳನ್ನು ಪಡೆದು ಸೋಲುಂಡಿದ್ದಾರೆ. 5 ದಶಕಗಳ ತಮ್ಮ ರಾಜಕೀಯ ಜೀವನದಲ್ಲಿ ದೇವಬಾ ಅವರು ಯಾವುದೇ ಸಂಸತ್ ಚುನಾವಣೆಯಲ್ಲಿ ಸೋತಿಲ್ಲ. ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ದೇವುಬಾ ಪ್ರಸ್ತುತ ಐದನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ.

Nepal Election results 2022: PM Sher Bahadur Deuba wins Dadeldhura seat

ನೇಪಾಳಿ ಕಾಂಗ್ರೆಸ್ 46 ಸ್ಥಾನಗಳ ಮುನ್ನಡೆ

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಆಡಳಿತಾರೂಢ ನೇಪಾಳಿ ಕಾಂಗ್ರೆಸ್ ಇದುವರೆಗೆ 11 ಸ್ಥಾನಗಳನ್ನು ಗೆದ್ದು ಬೀಗಿದ್ದು, ಒಟ್ಟು 46 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮಾಜಿ ಪ್ರಧಾನಿ ಕೆಪಿ ಒಲಿ ನೇತೃತ್ವದ ಪ್ರಮುಖ ವಿರೋಧ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್ (ಸಿಪಿಎನ್-ಯುಎಂಎಲ್ ) ಪಕ್ಷವು ಸದ್ಯ ಮೂರು ಸ್ಥಾನಗಳನ್ನು ಗೆದ್ದಿದೆ, ಇನ್ನು ಆಡಳಿತಾರೂಢ ನೇಪಾಳಿ ಕಾಂಗ್ರೆಸ್ ಒಟ್ಟು 42 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಹೊಸದಾಗಿ ರಚನೆಯಾದ ರಾಷ್ಟ್ರೀಯ ಸ್ವತಂತ್ರ ಪಕ್ಷವು ಕಠ್ಮಂಡು ಜಿಲ್ಲೆಯಲ್ಲಿ ಮೂರು ಸ್ಥಾನಗಳನ್ನು ಗೆದ್ದಿದೆ. ರಾಷ್ಟ್ರೀಯ ಪ್ರಜಾತಂತ್ರ ಪಕ್ಷ, ಸಿಪಿಎನ್-ಯುನಿಫೈಡ್ ಸೋಷಿಯಲಿಸ್ಟ್ ಮತ್ತು ಸಿವಿಲ್ ಲಿಬರೇಶನ್ ಪಾರ್ಟಿ ತಲಾ ಒಂದೊಂದು ಸ್ಥಾನ ಪಡೆದಿವೆ. ಇದುವರೆಗೆ 20 ಸ್ಥಾನಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಫೆಡರಲ್ ಸಂಸತ್ತಿನ 275 ಸ್ಥಾನಗಳಿಗೆ ಮತ್ತು ನೇಪಾಳದ 7 ಪ್ರಾಂತೀಯ ಅಸೆಂಬ್ಲಿಗಳಲ್ಲಿ ಒಟ್ಟು 550 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಫಲಿತಾಂಶ ಮಾತ್ರ ಬಾಕಿ ಉಳಿದುಕೊಂಡಿದೆ.

Nepal Election results 2022: PM Sher Bahadur Deuba wins Dadeldhura seat

ಫೆಡರಲ್ ಸಂಸತ್ತಿನ ಒಟ್ಟು 275 ಸದಸ್ಯರಲ್ಲಿ 165 ಮಂದಿ ನೇರ ಮತದಾನದ ಮೂಲಕ ಚುನಾಯಿತರಾಗುತ್ತಾರೆ. ಉಳಿದ 110 ಮಂದಿಯನ್ನು 'ಅನುಪಾತದ ಚುನಾವಣಾ ವ್ಯವಸ್ಥೆ' ಮೂಲಕ ಆಯ್ಕೆ ಮಾಡಲಾಗುತ್ತದೆ. ಇದೇ ರೀತಿ, ಪ್ರಾಂತೀಯ ವಿಧಾನಸಭೆಗಳ ಒಟ್ಟು 550 ಸದಸ್ಯರಲ್ಲಿ 330 ಮಂದಿ ನೇರವಾಗಿ ಚುನಾಯಿತರಾದರೆ, ಉಳಿದ 220 ಅಭ್ಯರ್ಥಿಗಳು ಅನುಪಾತ ಪದ್ಧತಿಯ ಮೂಲಕ ಆಯ್ಕೆಯಾಗಲಿದ್ದಾರೆ.

English summary
Nepal Election results 2022: Sher Bahadur Deuba, 77, secured 25,534 votes against his nearest rival Sagar Dhakal, 31, an independent candidate who received 1,302 votes. Deuba has never lost any parliamentary election in his five decades of political career.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X