ನವಾಜ್ ಷರೀಫ್ ಪತ್ನಿಗೆ ಹೃದಯಾಘಾತ: ಸ್ಥಿತಿ ಚಿಂತಾಜನಕ
ಲಂಡನ್, ಜೂನ್ 15: ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪತ್ನಿ ಕುಲ್ಸೂಮ್ ನವಾಜ್ ಅವರು ಹೃದಯಾಘಾತಕ್ಕೊಳಗಾಗಿದ್ದಾರೆಂದು ವರದಿಗಳು ತಿಳಿಸಿವೆ.
ಗುರುವಾರ ಹೃದಯಾಘಾತಕ್ಕೊಳಗಾದ ಅವರಿಗೆ ಲಂಡನ್ನಿನ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೊದಲು ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ಆಸ್ಪತ್ರೆಯಲ್ಲಿಯೇ ಹೃದಯಾಘಾತಕ್ಕೊಳಗಾದ ಕಾರಣ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲೇ ಇರುವ ಕುಲ್ಸೂಮ್ ಅವರಿಗೆ, ವೆಂಟಿಲೇಟರ್ ಮತ್ತು ಜೀವ ರಕ್ಷಕ ಸಾಧನಗಳ ಮೂಲಕ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಯಿಯ ಅನಾರೋಗ್ಯದ ಕುರಿತು ಅವರ ಪುತ್ರಿ ಮರ್ಯಾಮ್ ನವಾಜ್ ಷರೀಫ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಅವರನ್ನು ನೋಡುವುದಕ್ಕೆಂದು ನವಾಜ್ ಷರೀಫ್ ಮತ್ತು ಪುತ್ರಿ ಮರ್ಯಾಮ್ ಲಂಡನ್ನಿಗೆ ತೆರಳಿದ್ದಾರೆ.












Click it and Unblock the Notifications