'ಸೂರ್ಯ ನೌಕೆ' ಪಾರ್ಕರ್ ಉಡಾವಣೆ ಮುಂದೂಡಿದ ನಾಸಾ
ಫ್ಲೋರಿಡಾ, ಆಗಸ್ಟ್ 11: ನಾಸಾದ ಮಹತ್ವಾಕಾಂಕ್ಷೆಯ 'ಪಾರ್ಕರ್ ಸೋಲಾರ್ ಪ್ರೋಬ್' ನೌಕೆಯ ಸೂರ್ಯನ ಅಂಗಳದತ್ತ ಪ್ರಯಾಣಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಫ್ಲೋರಿಡಾದ ಕೇಪ್ ಕ್ಯಾನವೆರಲ್ ಏರ್ ಫೋರ್ಸಸ್ ಸ್ಟೇಷನ್ ಉಡಾವಣಾ ಕೇಂದ್ರದಿಂದ ಭಾರತೀಯ ಕಾಲಮಾನ ಮಧ್ಯಾಹ್ನ 1.22ರ ಸುಮಾರಿಗೆ (ಫ್ಲೋರಿಡಾದಲ್ಲಿ ನಸುಕಿನ 3.55) ನಡೆಯಬೇಕಿದ್ದ ಪಾರ್ಕರ್ ನೌಕೆಯ ಉಡ್ಡಯನವನ್ನು ಭಾನುವಾರ ಬೆಳಿಗ್ಗೆ 8.30ಕ್ಕೆ ಮುಂದೂಡಲಾಗಿದೆ.
ಕೆಲವು ಪರಿಸ್ಥಿತಿಗಳ ಕಾರಣದಿಂದ ಪಾರ್ಕರ್ ನೌಕೆ ಉಡಾವಣೆ ವಿಳಂಬವಾಗಿದೆ ಎಂದು ನಾಸಾ ತಿಳಿಸಿದೆ. ಆದರೆ, ಅದಕ್ಕೆ ನಿಖರ ಕಾರಣವನ್ನು ತಿಳಿಸಿಲ್ಲ.

ನಸುಕಿನ 3.55ಕ್ಕೆ ಮೊದಲು ಉಡಾವಣೆಯ ಸಮಯ ನಿಗದಿಯಾಗಿತ್ತು. ಉಡಾವಣೆಯ ಕಾರ್ಯದ ನೇರಪ್ರಸಾರವನ್ನು ಸಹ ನಾಸಾ ಮಾಡಿತ್ತು. ಆದರೆ, ಸೂರ್ಯನ ಹೊರಭಾಗದಲ್ಲಿ ಹಿಂದಿಗಿಂತಲೂ ಅಧಿಕ ಪ್ರಮಾನದ ಶಾಖ ಉಂಟಾಗಿದ್ದರಿಂದ ಉಡಾವಣೆಯನ್ನು ಬೆಳಗಿನ 4.28ಕ್ಕೆ ಮುಂದೂಡಲಾಯಿತು.
ಉಡಾವಣೆಗೆ ಕೆಲವೇ ನಿಮಿಷಗಳು ಇರುವಾಗಲೂ ಉಳಿದ ಎಲ್ಲ ಸಿದ್ಧತೆಗಳು ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗಿತ್ತು. ಆದರೆ, ಇನ್ನು 1.55 ನಿಮಿಷ ಬಾಕಿ ಇರುವಾಗ ಉಡಾವಣೆಯನ್ನು ಸ್ಥಗಿತಗೊಳಿಸಲಾಯಿತು.
ಸುಡು ಸೂರ್ಯನ ಬಿಸಿಲಿನ ತೋಟದಲ್ಲಿ ಅಡ್ಡಾಡಲಿರುವ ಈ ನೌಕೆ ಅಲ್ಲಿಂದ ಹೊರಹೊಮ್ಮುವ ಕಿರಣಗಳು, ಅದರಲ್ಲಿನ ಶಕ್ತಿಗಳು, ಸೌರ ವಾಯುವಿನ ಹುಟ್ಟು ಮತ್ತು ಪರಿಣಾಮಗಳು, ಶಾಖದ ಚಲನೆ ಹೀಗೆ ಅನೇಕ ವಿಷಯಗಳ ಅಧ್ಯಯನಕ್ಕೆ ನೆರವಾಗಲಿದೆ.
This morning’s launch of @NASASun’s #ParkerSolarProbe was scrubbed. Launch teams will attempt to launch on Sunday morning. Get real-time updates: https://t.co/9uczz8fdI8 pic.twitter.com/6GyCioopfa
— NASA (@NASA) 11 August 2018
ಸಣ್ಣ ಕಾರ್ ಗಾತ್ರದ ಈ ನೌಕೆ ಸೂರ್ಯನಿಂದ ಸುಮಾರು 4 ಮಿಲಿಯನ್ ಮೈಲು ದೂರದ ಅದರ ಪ್ರಭಾವಲಯದಲ್ಲಿ ನೇರವಾಗಿ ಹಾರಾಟ ನಡೆಸಲಿದೆ.
'ಅಸಂಖ್ಯಾತ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಸತತ ಎಂಟು ವರ್ಷದ ಶ್ರಮದ ಫಲ ಕೊನೆಗೂ ಈಡೇರುತ್ತಿದೆ' ಎಂದು ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಯೋಜನೆಯ ವಿಜ್ಞಾನಿ ಆಡಂ ಜಬೊ ಹೇಳಿದ್ದಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications