ವಿಶ್ವವೇ ಒಂದು ಕುಟುಂಬ : ದಾವೋಸ್‌ನಲ್ಲಿ ಪ್ರಧಾನಿ ಮೋದಿ ಮಾತು
ದಾವೋಸ್, ಜನವರಿ 23 : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದಾವೋಸ್ ಪ್ರವಾಸದಲ್ಲಿದ್ದಾರೆ. ಮಂಗಳವಾರ ಅವರು 48ನೇ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.
48ನೇ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ನರೇಂದ್ರ ಮೋದಿ ಜಾಗತಿಕ ನಾಯಕರನ್ನು ಉದ್ದೇಶಿಸಿ ಮಾತನಾಡಿದರು. 1997ರ ನಂತರ ಭಾರತದ ಪ್ರಧಾನಿಯೊಬ್ಬರು ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.

* ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿಯಲ್ಲಿ ಭಾಷಣ ಆರಂಭಿಸಿದರು.
* 1997ರಲ್ಲಿ ಪ್ರಧಾನಿಯಾಗಿದ್ದ ದೇವೇಗೌಡರು ದಾವೋಸ್‌ಗೆ ಆಗಮಿಸಿದ್ದರು ಎಂದು ಮೋದಿ ಭಾಷಣ ಪ್ರಾರಂಭ ಮಾಡಿದರು.
1997 mein chidiya tweet karti thi, ab manushya karte hain, tab agar aap Amazon internet pe daalte toh nadiyon aur jungle ki tasveer aati: PM Modi #Davos #WorldEconomicForum pic.twitter.com/2Q9GoUp6YJ
— ANI (@ANI) January 23, 2018
* ಭಾರತ ಯಾವಾಗಲೂ ಒಕ್ಕೂಟ ವ್ಯವಸ್ಥೆ ಬಗ್ಗೆ ನಂಬಿಕೆ ಹೊಂದಿದೆ. ವಸುಧೈವ ಕುಟುಂಬಕಂ ಎಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂದರು.
* ಹವಾಮಾನ ವೈಫರಿತ್ಯ ಇಂದು ವಿಶ್ವದ ಪ್ರಮುಖ ಸವಾಲು ಆಗಿದೆ. ಹಲವು ದ್ವೀಪಗಳು ಮುಳುಗಡೆಯಾಗುತ್ತಿವೆ. ಇಲ್ಲವೇ ಮುಳುಗಡೆಯಾಗುವ ಭೀತಿಯಲ್ಲಿವೆ.
This year the topic here is 'Creating a shared future in a fractured world'. New powers are changing the balance between Economic & Political strength. This is indicating a change in future of the world. World is facing challenges in maintaining peace, stability & security: PM pic.twitter.com/ZghYmYXK55
— ANI (@ANI) January 23, 2018
* ಮಹಾತ್ಮ ಗಾಂಧೀಜಿಯವರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಹೊಂದಿದ್ದರು. ಇಂದು ನಾವು ನಮ್ಮ ಅಗತ್ಯಕ್ಕಾಗಿ ಪರಿಸರದ ಮೇಲೆ ದೌರ್ಜನ್ಯ ನಡೆಸುತ್ತಿದ್ದೇವೆ. ಇದು ನಮ್ಮ ಅಭಿವೃದ್ಧಿಯೇ? ಎಂದು ನಾವು ಕೇಳಿಕೊಳ್ಳಬೇಕು.
* ಪರಿಸರದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು ಎಂದು ಭಾರತೀಯ ಪರಂಪರೆಯಲ್ಲಿಯೇ ಜನರಿಗೆ ಹೇಳಿಕೊಡಲಾಗಿದೆ. ಭೂಮಿಯನ್ನು ನಾನು ತಾಯಿ ಎಂದು ಕರೆಯುತ್ತೇವೆ.
* ಭಯೋತ್ಪಾದನೆ ಎಂಬುದು ಬಹುದೊಡ್ಡ ಬೆದರಿಕೆಯಾಗಿದೆ. ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದನೆ ಎಂದು ನಾವು ವಿಂಗಡನೆ ಮಾಡುವುದು, ಅದಕ್ಕಿಂತ ದೊಡ್ಡ ಆತಂಕ
Many societies & countries are becoming self-centred. It seems that gloabalisation, as opposed to its definition, is shrinking. Such misplaced preferences can't be considered any lesser threat than terrorism or climate change. We must admit shine of globalisation is fading: PM pic.twitter.com/lWtH97NU6A
— ANI (@ANI) January 23, 2018
* ಪ್ರಜಾಪ್ರಭುತ್ವ ಎಂಬುದು ಕೇವಲ ರಾಜಕೀಯ ಪದ್ಧತಿಯಲ್ಲ, ಅದೊಂದು ಜೀವನ ವಿಧಾನ. ನಾವು ಭಾರತೀಯರು ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆ ಹೊಂದಿದ್ದೇವೆ. ವಿವಿಧ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳ ಜನರು ಒಟ್ಟಾಗಿ ಬಾಳುತ್ತಿದ್ದೆವೆ.
#WATCH: PM Narendra Modi addresses the Plenary Session of the #WorldEconomicForum in #Davos https://t.co/knyqBTb0CX
— ANI (@ANI) January 23, 2018
* 70 ವರ್ಷದ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಿಎಸ್‌ಟಿಯನ್ನು ಜಾರಿಗೆ ತರಲಾಯಿತು. ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕಾಗಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಇದನ್ನು ಜಾರಿಗೊಳಿಸಿದ್ದೇವೆ.
* ವಿಶ್ವಮಟ್ಟದಲ್ಲಿ ಭಾರತದ ಅಭಿವೃದ್ಧಿ ಸೂಚ್ಯಾಂಕ ಬದಲಾಣೆಯಾಗುತ್ತಿದೆ. ಅಂದರೆ ದೇಶದ ಜನರು ಸರ್ಕಾರ ಜಾರಿಗೆ ತಂದ ಹೊಸ ನೀತಿಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಅರ್ಥ.












Click it and Unblock the Notifications