ಇಸ್ರೇಲ್ ಪ್ರಧಾನಿಗೆ ಕೇರಳದಿಂದ ವಿಶೇಷ ಉಡುಗೊರೆ

ಜೆರುಸಲೆಮ್, ಜುಲೈ 05: ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಅವರಿಗೆ ಭಾರತದ ಕೇರಳದಿಂದ ವಿಶೇಷ ಉಡುಗೊರೆ ಸಿಕ್ಕಿದೆ.

ಭಾರತದಲ್ಲಿ ಯೆಹೂದಿಗಳ ಇತಿಹಾಸವನ್ನು ಸಾರುವ ಪ್ರಾಚೀನ ಅವಶೇಷಗಳ ಪ್ರತಿಕೃತಿಯನ್ನು ಇಸ್ರೇಲ್ ಪ್ರಧಾನಿಗೆ ಭಾರತದ ಪ್ರಧಾನಿ ನೀಡಿದ್ದಾರೆ.

Narendra Modi gifts two sets of relics from Kerala to Netanyahu

ಕ್ರಿ.ಶ.9-10ನೇ ಶತಮಾನದಲ್ಲಿ ತಾಮ್ರದ ತಟ್ಟೆಗಳ ಮೇಲೆ ಕೆತ್ತಲಾಗಿರುವ ಶಾಸನಗಳನ್ನು ಒಳಗೊಂಡಿರುವ ಉಡುಗೊರೆಯನ್ನು ನೆತನ್ಯಾಹು ಅವರಿಗೆ ನೀಡಲಾಗಿದೆ ಎಂದು ಪ್ರಧಾನಿ ಸಚಿವಾಲಯದಿಂದ ಟ್ವೀಟ್ ಮಾಡಲಾಗಿದೆ.

Narendra Modi gifts two sets of relics from Kerala to Netanyahu

ಕೇರಳದ ಹಿಂದೂ ರಾಜ ಚೆರಮನ್‌ ಪೆರುಮಾಳ್‌(ಭಾಸ್ಕರ ರವಿ ವರ್ಮಾ) ಹಾಗೂ ಯೆಹೂದಿ ಮುಖಂಡ ಜೋಸೆಫ್‌ ನಡುವೆ ಇದ್ದ ಸಂಬಂಧವನ್ನು ಸ್ಮರಿಸಲಾಗಿದೆ.

ಜೋಸೆಫ್ ಗೆ ನೀಡಲಾದ ರಾಜಯೋಗ್ಯ ಸವಲತ್ತು ಹಾಗೂ ವಿಶೇಷ ಹಕ್ಕುಗಳ ಕುರಿತಾದ ಬರಹಗಳು ಇದರಲ್ಲಿವೆ. ಕೊಚ್ಚಿನ್‌ ನಲ್ಲಿ ವಾಸಿಸುತ್ತಿದ್ದ ಯೆಹೂದಿಗಳಿಗೆ ಅನೇಕ ಸವಲತ್ತುಗಳನ್ನು ನೀಡಿದ್ದರ ಬಗ್ಗೆ ಉಲ್ಲೇಖವಿದೆ.

ದಕ್ಷಿಣ ಭಾರತೀಯ ವಿನ್ಯಾಸ ಹೊಂದಿರುವ ಚಿನ್ನಲೇಪಿತ ಲೋಹದ ಮುಕುಟ ಹಾಗೂ ಕೇರಳದ ಪ್ರದೇಶಿ ಯೆಹೂದಿ ಸಮುದಾಯ ನೀಡಿದ್ದ ತೊರಾ(ಯೆಹೂದಿ ಉಪದೇಶ ಒಳಗೊಂಡ) ಶಾಸನ ಪ್ರತಿಗಳನ್ನು ಇಸ್ರೇಲ್‌ ಪ್ರಧಾನಿಗೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+