ನ.11 ರಂದು ನಡೆದಿತ್ತೊಂದು ವಿಲಕ್ಷಣ ಘಟನೆ! ಕಾರಣ ನಿಗೂಢ!
ಮಾಯೋಟ್ಟ್(ಆಫ್ರಿಕಾ), ನವೆಂಬರ್ 30: ಕೆಲ ದಿನಗಳ ಹಿಂದೆ ಭೂಮಿಯಲ್ಲಿ ನಡೆದ ವಿಲಕ್ಷಣ ಘಟನೆಯೊಂದು ವಿಜ್ಞಾನಿಗಳ ನಿದ್ದೆ ಕೆಡಿಸಿದೆ. ನವೆಂಬರ್ 11 ರಂದು ಭಾನುವಾರ ಸುಮಾರು ಬೆಳಿಗ್ಗೆ 9:30 ರ ಸುಮಾರಿಗೆ ಕೆಲವು ತರಂಗಗಳು ವಿಶ್ವದಾದ್ಯಂತ ಚಲಿಸಿದ್ದವು! ಭೂಕಂಪ ಉಂಟಾದಾಗ ಸೃಷ್ಟಿಯಾಗುವ ತರಂಗಗಳಂಥ ಇವು, ಆಫ್ರಿಕಾ ಮತ್ತು ಮಡಗಾಸ್ಕರ್ ನಡುವೆ ಇರುವ ಮಾಯೋಟ್ಟ್ ಎಂಬ ದ್ವೀಪದಲ್ಲಿ ಮೊದಲು ಕಾಣಿಸಿಕೊಂಡವು.
ನಂತರ ಈ ತರಂಗಗಳು ಆಫ್ರಿಕಾ, ಜಿಂಬಾಬ್ವೆ, ಕೀನ್ಯಾ, ಇಥಿಯೋಪಿಯಾಗಳಿಗೆಲ್ಲ ಸಾಗಿ ನಂತರ ಅಟ್ಲಾಂಟಿಕ್ ಮತ್ತು ಚಿಲಿ, ನ್ಯೂಜಿಲೆಂಡ್, ಕೆನಡಾ ಮತ್ತು ಹವಾಯಿಗುಂಟ ಸುಮಾರು 11,000 ಮೈಲಿ ದೂರ ಕ್ರಮಿಸಿದ್ದವು!
ಆದರೆ ಈ ತರಂಗಗಳ ಸೃಷ್ಟಿಯ ಅನುಭವ ಯಾರಿಗೂ ಆಗಿಲ್ಲ. ಭೂಕಂಪದ ಅನುಭವವಾಗಿಲ್ಲ, ಸಾಗರಗಳಲ್ಲಿ ಸುನಾಮಿಯೂ ಎದ್ದಿಲ್ಲ. ಆದರೆ ಇದು ಭೂಕಂಪನಮಾಪನದಲ್ಲಿ ದಾಖಲಾಗಿದೆ! ತರಂಗಗಳ ಏರಿಳಿತಗಳು ಸ್ಪಷ್ಟವಾಗಿ ನಮೂದಾಗಿದ್ದು, ಇವು ಯಾಕಾಗಿ ಹುಟ್ಟಿದವು ಎಂಬುದು ವಿಜ್ಞಾನಿಗಳಿಗೆ ಅತ್ಯಂತ ಕುತೂಹಲದ ವಿಷಯವಾಗಿ ಉಳಿದಿದೆ.

ಸುಮಾರು 20 ನಿಮಿಷಗಳ ಕಾಲ ಈ ತರಂಗಗಳು ಓಡಾಡಿತ್ತು, ಹಿಂದು ಮಹಾಸಾಗರದಲ್ಲಿ ಮೊದಲು ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ ಭೂಕಂಪ ಸಂಭವಿಸಿದ ನಂತರ ಇಂಥ ತರಂಗಗಳು ಸರ್ವೇಸಾಮಾನ್ಯವಾಗಿ ಕಾಣಿಸುತ್ತವೆ. ಇದನ್ನು ಮಾಪನದ ಮೂಲಕ ಗುರುತಿಸಬಹುದಾಗಿದೆ.
This is a most odd and unusual seismic signal.
— ******* Pax (@matarikipax) November 11, 2018
Recorded at Kilima Mbogo, Kenya ...#earthquakehttps://t.co/GIHQWSXShd pic.twitter.com/FTSpNVTJ9B
ಆದರೆ ಈ ಭಾಗದಲ್ಲಿ ಯಾವುದೇ ಭೂಕಂಪ ದಾಖಲಾಗದಿದ್ದರೂ, ಯಾವುದೇ ಸುನಾಮಿ ಏಳದಿದ್ದರೂ, ಜ್ವಾಲಾಮುಖಿ ಸ್ಫೋಟಿಸದಿದ್ದರೂ ಈ ವಿಲಕ್ಷಣ ಘಟನೆ ನಡೆದಿದ್ದು, ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಉಲ್ಕಾಶಿಲೆಯಿಂದಲೋ, ನೀರಿನಾಳದಲ್ಲಿರಬಹುದಾದ ದೈತ್ಯ ಜೀವಿಯಿಂದಲೋ, ಅಥವಾ ಜ್ವಾಲಾಮುಖಿಯಿಂದಲೋ ಅಥವಾ ಅಣು ಪರೀಕ್ಷೆಯಿಂದಲೋ ಮಾತ್ರ ಈ ರೀತಿಯ ತರಂಗಗಳು ಏಳಲು ಸಾಧ್ಯವಿದ್ದು, ಈ ಕುರಿತು ಸಾಕಷ್ಟು ಅಧ್ಯಯನ ನಡೆಯುವ ಅಗತ್ಯವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications