• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾನ್ಮಾರ್ ಮಿಲಿಟರಿ ವಿಮಾನ ಅಪಘಾತ, 12 ಮಂದಿ ಸಾವು

|
Google Oneindia Kannada News

ಮ್ಯಾನ್ಮಾರ್ ದೇಶದ ಎರಡನೇ ಅತಿದೊಡ್ದ ನಗರ ಮಂಡಲಾಯ್ ಪ್ರದೇಶದಲ್ಲಿ ಗುರುವಾರದಂದು ಮಿಲಿಟರಿ ವಿಮಾನವೊಂದು ಪತನಗೊಂಡಿದೆ. ವಿಮಾನದಲ್ಲಿದ್ದ ಪ್ರಯಾಣಿಸುತ್ತಿದ್ದ 12 ಮಂದಿ ಮೃತಪಟ್ಟಿರುವ ಬಗ್ಗೆ ವರದಿ ಬಂದಿದೆ.

ಮಿಲಿಟರಿ ವಿಮಾನದಲ್ಲಿ ಮಿಲಿಟರಿ ಸಿಬ್ಬಂದಿ ಹಾಗೂ ಕೆಲ ಬೌದ್ಧ ಸನ್ಯಾಸಿಗಳಿದ್ದರು ಎಂದು ತಿಳಿದು ಬಂದಿದೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಪತನಗೊಂಡಿದೆ. ಇಲ್ಲಿಗೆ ಸಮೀಪದ ಬೌದ್ಧವಿಹಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೌದ್ಧ ಸನ್ಯಾಸಿಗಳು ವಿಮಾನದಲ್ಲಿ ತೆರಳುತ್ತಿದ್ದರು.


ಸದ್ಯಕ್ಕೆ ಲಭ್ಯವಾದ ಮಾಹಿತಿ:
ಮಂಡಲಾಯ್ ಪ್ರದೇಶದ ಬೆಟ್ಟ ಗುಡ್ಡ ತಪ್ಪಲಿನ ಪಟ್ಟಣ ಪಿಯಿನ್ ಊ ಎಲ್ ವಿನ್ (Pyin Oo Lwin)ನ ಉಕ್ಕಿನ ಘಟಕದಿಂದ 300 ಮೀಟರ್ ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಪ್ರಾಥಮಿಕ ವರದಿ ಪ್ರಕಾರ, 6 ಮಂದಿ ವಿಮಾನದ ಸಿಬ್ಬಂದಿ ಹಾಗೂ 8 ಮಂದಿ ಪ್ರಯಾಣಿಕರು ವಿಮಾನದಲ್ಲಿದ್ದರು.

ಈ ಪೈಕಿ 12 ಮಂದಿ ಮೃತಪಟ್ಟಿದ್ದಾರೆ. ಓರ್ವ ಪೈಲಟ್ ಹಾಗೂ ಒಬ್ಬ ಪ್ರಯಾಣಿಕರು ಬದುಕುಳಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇವರಿಬ್ಬರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮ್ಯಾನ್ಮಾರ್ ದೇಶದಲ್ಲಿದ್ದ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು ಮಿಲಿಟರಿ ಆಡಳಿತ ಆರಂಭವಾದ ನಂತರ ವಿಮಾನಯಾನ ಸುರಕ್ಷತೆ ಬಗ್ಗೆ ಗಮನಹರಿಸಿಲ್ಲ, ಫೆಬ್ರವರಿ 1ರಿಂದ ಮಿಲಿಟರಿ ದುರಾಡಳಿತಕ್ಕೆ ಬೇಸತ್ತು ಸಾರ್ವಜನಿಕರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದಾರೆ. ಅನೇಕರನ್ನು ಮಿಲಿಟರಿ ಆಡಳಿತ ಕೊಂದು ಹಾಕಿದೆ. ಬಂಧಿತ ನಾಯಕಿ ಆಂಗ್ ಸ್ಯಾನ್ ಸೂ ಕಿ ಅವರನ್ನು ಬಿಡುಗಡೆ ಮಾಡಲು ಆಗ್ರಹಿಸಿದ್ದಾರೆ. ಆದರೆ, ವಿಚಾರಣೆ ಎದುರಿಸಿದ ಸೂಕಿ ಅವರ ಮೇಲೆ ಚುನಾವಣೆ ಅಕ್ರಮ, ಭ್ರಷ್ಟಾಚಾರ ಆರೋಪ ಹೊರೆಸಲಾಗಿದೆ. (Reuters, AFP)

English summary
The plane was carrying senior military personnel and monks when it crashed close to a steel plant near Pyin Oo Lwin, a hill town in the Mandalay region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X