ಬಲೂಚಿಸ್ತಾನ ಮಾನವ ಹಕ್ಕು ಆಯೋಗ ವೆಬ್ ಬ್ಲಾಕ್ ಮಾಡಿದ ಪಾಕ್: ಕಾರಣವೇನು?
ಬಲೂಚಿಸ್ತಾನ, ಮೇ 12: ಪಾಕಿಸ್ತಾನವು ಬಲೂಚಿಸ್ತಾನದ ಮಾನವ ಹಕ್ಕು ಆಯೋಗದ ವೆಬ್‌ಸೈಟ್‌ನ್ನು ಬ್ಲಾಕ್ ಮಾಡಿದೆ.
ಈ ಸಂಘಟನೆ ಸ್ವೀಡನ್, ಬ್ರಿಟನ್, ಫ್ರಾನ್ಸ್ ಮತ್ತು ಇತರೆ ಕಲವು ದೇಶಗಳಲ್ಲೂ ಕಾರ್ಯಚರಿಸುತ್ತಿದೆ. ಬಲೂಚಿಸ್ತಾನದ ಮೂಲೆ ಮೂಲೆಗಳಲ್ಲೂ ನಡೆಯುವ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ಅದರ ವರದಿಯನ್ನು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ಕೆಲಸವನ್ನು ಮಾಡುತ್ತಿತ್ತು.
ಪಾಕಿಸ್ತಾನದ ಅಧಿಕಾರಿಗಳು ಹ್ಯೂಮನ್ ರೈಟ್ಸ್ ಕಮಿಷನ್ ಆಫ್ ಬಲೂಚಿಸ್ತಾನದ ಅಧಿಕೃತ ವೆಬ್‌ಸೈಟ್ ಅನ್ನು ಅನಿರ್ಧಿಷ್ಟಾವಧಿಗೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಅನೇಕ ಸಂಘಟನೆಗಳು ವಿಷಯವನ್ನು ಹೇಳಿಕೊಳ್ಳುತ್ತಿವೆ. ಬಲೂಚಿಸ್ತಾನದಲ್ಲಿ ಪ್ರಿವೆನ್ಷನ್ ಕ್ರೈಮ್ಸ್ ಆಕ್ಟ್ ಇನ್ ಬಲೂಚಿಸ್ತಾನ್ ಬಹಳಷ್ಟು ದುರ್ಬಳಕೆ ಆಗುತ್ತಿದೆ. ಮಾನವ ಹಕ್ಕು ಕಾರ್ಯಕರ್ತರನ್ನು , ರಾಜಕೀಯ ಬಂಡಾಯಗಾರರನ್ನು ಈ ಕಾಯ್ದೆ ಬಳಸಿ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಸಂಘಟನೆಯ ವೆಬ್‌ಸೈಟ್ ಬ್ಲಾಕ್ ಆಗಿದೆ. ಅದರಲ್ಲಿ ಪಾಕಿಸ್ತಾನ ಸರ್ಕಾರದ ಸಂದೇಶ ಸಪ್ರರ್ಶಿಸಲಾಗುತ್ತಿದೆ. ಹುಷಾರಾಗಿ ಜಾಲಾಡಿ ನೀವು ಪಾಕಿಸ್ತಾನದಲ್ಲಿ ನಿಷೇಧಿಸಲ್ಪ ವಿಷಯಗಳನ್ನು ಹುಡುಕುತ್ತಿದ್ದೀರಿ ಎಂಬ ಎಚ್ಚರಿಕೆ ಸಂದೇಶ ಕಾಣುತ್ತದೆ.
ಬಲೂಚಿಸ್ತಾನದಲ್ಲಿ ಪದೇ ಪದೇ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಭಯವಿಲ್ಲದೆ ಪತ್ರಿಕೋದ್ಯಮ ನಡೆಸುವುದು ಕೂಡ ಕಷ್ಟವಾಗಿದೆ.












Click it and Unblock the Notifications