ಸಾಂಬಾ ನಾಡಲ್ಲಿ ವಿಶ್ವಕಪ್: ಕುತೂಹಲ ಅಂಕಿ ಅಂಶ
ಬೆಂಗಳೂರು, ಜೂ.12: ಸಾಂಬಾ ನಾಡು ಬ್ರೆಜಿಲ್ಲಿನಲ್ಲಿ ಫೀಫಾ ವಿಶ್ವಕಪ್ ನ ಹಬ್ಬ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಎ ಗುಂಪಿನ ತಂಡಗಳಾದ ಅತಿಥೇಯ ಬ್ರೆಜಿಲ್ ಹಾಗೂ ಕ್ರೊವೇಷಿಯಾ ಕಾದಾಡಲಿವೆ. ವಿಶ್ವಕಪ್ ಸಂದರ್ಭದಲ್ಲಿ ಅಂಕಿ ಅಂಶಗಳು ಮಹತ್ವದ ಪಾತ್ರವಹಿಸುತ್ತವೆ ಹಾಗೂ ಕುತೂಹಲ ಹುಟ್ಟಿಸುತ್ತವೆ.
ಜೂ.12ರಿಂದ ಮುಂದಿನ 32 ದಿನಗಳ ಕಾಲ 64 ಪಂದ್ಯಗಳಲ್ಲಿ 32 ರಾಷ್ಟ್ರಗಳು ಸೆಣಸಾಡುವ ಮೂಲಕ ವಿಶ್ವದ ಅತಿದೊಡ್ಡ ಕ್ರೀಡಾ ಹಬ್ಬದೌತಣವನ್ನು ಅಭಿಮಾನಿಗಳಿಗೆ ನೀಡುತ್ತಿದ್ದಾರೆ. ದಕ್ಷಿಣ ಅಮೆರಿಕದ ಸಾಂಬಾ ನಾಡು, ಕಾಫಿ ಕಣಜ ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13ರ ತನಕ ನಡೆಯಲಿರುವ 20ನೇ ವಿಶ್ವಕಪ್ ನ ಕುತೂಹಲಕಾರಿ ಅಂಕಿ ಅಂಶಗಳು ಇಲ್ಲಿವೆ:
0 : ವಿದೇಶಿ ಕೋಚ್ ಗಳನ್ನು ಹೊಂದಿರುವ ರಾಷ್ಟ್ರಗಳು ಇದುವರೆವಿಗೂ ಫೀಫಾ ವಿಶ್ವಕಪ್ ಎತ್ತಿಲ್ಲ.
1 : ಪ್ರಪ್ರಥಮ ಬಾರಿಗೆ ಬೋಸ್ನಿಯಾ ಹಾಗೂ ಹರ್ಜೆಗೊವಿನಾ ತಂಡ ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿದೆ.
2 : ಬ್ರೆಜಿಲ್ಲಿನಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಫುಟ್ಬಾಲ್ ಟೂರ್ನಿ ಆಯೋಜನೆಗೊಂಡಿದೆ. 1950ರಲ್ಲಿ ಮೊದಲ ಬಾರಿಗೆ ಬ್ರೆಜಿಲ್ ಆತಿಥ್ಯ ವಹಿಸಿಕೊಂಡಿತ್ತು.

4 : ಪ್ರತಿ ಗುಂಪಿನಲ್ಲೂ ನಾಲ್ಕು ತಂಡಗಳಿವೆ. ಇಟಲಿ 6 ಬಾರಿ ಫೈನಲ್ ಪ್ರವೇಶಿಸಿ 4 ಬಾರಿ ಬಾರಿ ಕಪ್ ಎತ್ತಿದೆ
5 : ಬ್ರೆಜಿಲ್ ತಂಡ ಐದು ಬಾರಿ ಕಪ್ ಗೆದ್ದಿದೆ (1958, 1962, 1970, 1994, 2002). [ಕಪ್ ವಿನ್ನರ್ಸ್ ಪಟ್ಟಿ ಓದಿ]
6: ಅತಿಥೇಯ ರಾಷ್ಟ್ರಗಳು ಚಾಂಪಿಯನ್ ಆಗಿದ್ದು: ಉರುಗ್ವೆ(1930), ಇಟಲಿ (1934), ಇಂಗ್ಲೆಂಡ್ (1966), ಪಶ್ಚಿಮ ಜರ್ಮನಿ (1974), ಅರ್ಜೆಂಟಿನಾ (1978), ಫ್ರಾನ್ಸ್ (1998)
7 : ವಿಶ್ವದ ಶ್ರೀಮಂತ ಆಟಗಾರ ಪೋರ್ಚುಗಲ್ ನ ಕ್ರಿಶ್ಚಿಯಾನೋ ರೋನಾಲ್ಡೋ ಅವರ ಜರ್ಸಿ ಸಂಖ್ಯೆ
ಇನ್ನಷ್ಟು ಅಂಕಿ ಅಂಶಗಳಿಗೆ ನಿರೀಕ್ಷಿಸಿ












Click it and Unblock the Notifications